ಸಿದ್ದರಾಮಯ್ಯ ಹುಳಿ ಹಿಂಡುವ ಕೆಲಸದಿಂದ ಕಾಂಗ್ರೆಸ್ ಒಂದು ಸೀಟು ಗೆದ್ದಿದೆ, ಮುಂದುವರಿದರೇ ಶೂನ್ಯ: ಆರ್ ಅಶೋಕ್
ಹಿಂದಿದ್ದ ಕೇಂದ್ರ ಸರ್ಕಾರಗಳು ರಾಜ್ಯವನ್ನು ಈ ಪರಿ ನಿರ್ಲಕ್ಷ್ಯಿಸಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಮಾಜಿ ಡಿಸಿಎಂ ಆರ್.ಅಶೋಕ್ ನಿಮಗೆ ಹುಳಿ ಸಿದ್ದರಾಮಯ್ಯ ಎಂಬ ಬಿರುದು ಬೇಡ, ನಿದ್ದರಾಮಯ್ಯ ...

ನವದೆಹಲಿ: ಹಿಂದಿದ್ದ ಕೇಂದ್ರ ಸರ್ಕಾರಗಳು ರಾಜ್ಯವನ್ನು ಈ ಪರಿ ನಿರ್ಲಕ್ಷ್ಯಿಸಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಮಾಜಿ ಡಿಸಿಎಂ ಆರ್.ಅಶೋಕ್ ನಿಮಗೆ ಹುಳಿ ಸಿದ್ದರಾಮಯ್ಯ ಎಂಬ ಬಿರುದು ಬೇಡ, ನಿದ್ದರಾಮಯ್ಯ ಎಂಬ ಬಿರುದು ಇರಲಿ ಎಂದು ವ್ಯಂಗ್ಯವಾಡಿದ್ದಾರೆ.
ನಮ್ಮ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್‍ಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಹಿಂದೆ ನೆರೆ-ಬರ ಬಗ್ಗೆ ಚರ್ಚೆ ಮಾಡೋಕೆ ಸಮಯನೇ ಕೊಡುತ್ತಿರಲಿಲ್ಲ. ನಮ್ಮ ಪ್ರಧಾನಿ 45 ನಿಮಿಷ ಸಮಯ ಕೊಟ್ಟಿದ್ದಾರೆ. ಡಾ. ಮನಮೋಹನ್ ಸಿಂಗ್ ಮತ್ತು ಮೋದಿ ಸರ್ಕಾರದ ಕೊಡುಗೆಯನ್ನು ತುಲನೆ ಮಾಡಿ ಸಿದ್ದರಾಮಯ್ಯ ಹುಳಿ ಹಿಂಡಬಾರದು. ಹುಳಿ ಸಿದ್ದರಾಮಯ್ಯ ಎಂಬ ಬಿರುದು ಬೇಡ. ನಿದ್ದರಾಮಯ್ಯ ಎಂಬ ಬಿರುದು ಇರಲಿ ಎಂದು ಲೇವಡಿ ಮಾಡಿದರು.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ವರ್ತನೆಯಿಂದ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಸೀಟು ಬಂದಿದೆ. ಮತ್ತೆ ಇವರು ಇದೇ ರೀತಿ ಮೋದಿ ಅವರ ಬಗ್ಗೆ ಮಾತನಾಡಿದರೆ ಶೂನ್ಯಕ್ಕೆ ಸೀಮಿತವಾಗಬೇಕಾಗುತ್ತದೆ. ರಾಜ್ಯದ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ಕೇಂದ್ರದ ಮೇಲೆ ಕಾಂಗ್ರೆಸ್ ಹೈಕಮಾಂಡ್‍ನಿಂದ ಒತ್ತಡ ತರಲಿ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


