ರಾಜಕೀಯ

ಮುಖ್ಯಮಂತ್ರಿ ಹುದ್ದೆ ಅಲಂಕರಿಸದಿದ್ದಕ್ಕೆ ನನಗೆ ವಿಷಾದವಿಲ್ಲ: ವಿ. ಶ್ರೀನಿವಾಸ್ ಪ್ರಸಾದ್

ನಾನು ಮೌಲ್ಯಗಳೊಂದಿಗೆ ಬದುಕುಲು ಪ್ರಯತ್ನಿಸಿದ್ದೇನೆ, ನಾನು ಎಂದಿಗೂ ಭ್ರಷ್ಟಾಚಾರಿಯಾಗಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಸಂಸದ ವಿ. ಶ್ರೀನಿವಾಸ್ ...

ಮುಖ್ಯಮಂತ್ರಿ ಹುದ್ದೆ ಅಲಂಕರಿಸದಿದ್ದಕ್ಕೆ ನನಗೆ ವಿಷಾದವಿಲ್ಲ: ವಿ. ಶ್ರೀನಿವಾಸ್ ಪ್ರಸಾದ್
ವಿ.ಶ್ರೀನಿವಾಸ್ ಪ್ರಸಾದ್
Published On :
ಮೈಸೂರು: ನಾನು ಮೌಲ್ಯಗಳೊಂದಿಗೆ ಬದುಕುಲು ಪ್ರಯತ್ನಿಸಿದ್ದೇನೆ, ನಾನು ಎಂದಿಗೂ ಭ್ರಷ್ಟಾಚಾರಿಯಾಗಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಮೈಸೂರಿನ ರಾಣಿ ಬಹದ್ದೂರ್ ಹಾಲ್ ನಡೆದ ತಮ್ಮ 72ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ರಾಜಕಾರಣವೆಂದರೇ ಹೊಂದಾಣಿಕೆಗಳ ಸರದಿ ಎಂದು ಹೇಳುತ್ತಾರೆ, ಆದರೆ ನನಗೆ ರಾಜಕೀಯ ಎಂದರೇ ಸಾಮಾಜಿಕ ಬದ್ಧತೆ, ಧ್ವನಿ ಇಲ್ಲದವರಿಗೆ ಧ್ವನಿಯಾಗುವುದು ಎಂದು ಹೇಳಿದ್ದಾರೆ.
ನಾನು ಮುಖ್ಯಮಂತ್ರಿಯಾಗಲಿಲ್ಲ ಎಂದು ನನಗೆ ಯಾವುದೇ ಬೇಸರವಿಲ್ಲ, ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರು ನನ್ನ ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳಲಿಲ್ಲ, ಬದಲಾಗಿ 7 ಬಾರಿ ಸಂಸದರಾಗಿದ್ದ ಎಂಪಿ ಶಂಕರಾನಂದ ಅವರನ್ನು ದಲಿತ ಕೋಟಾದಲ್ಲಿ  ಮಂತ್ರಿ ಮಾಡಿದರು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.