ರಾಜಕೀಯ

ಸಿದ್ದರಾಮಯ್ಯ ಆಪ್ತನಿಂದ 'ಪ್ರತ್ಯೇಕ' ಸಭೆಗೆ ಆಹ್ವಾನ, ಕಾಂಗ್ರೆಸ್ ಗೆ ಹೊಸ ತಲೆನೋವು?

ಮೇ 19ರಂದು ರಾಜ್ಯದ ಚಿಂಚೊಳಿ ಹಾಗೂ ಕುಂದಗೋಳದ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈ ಚುನಾವಣೆ ಸಮ್ಮಿಶ್ರ ಸರ್ಕಾರದ ಮೈತ್ರಿಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಕಣವಾಗಿದ್ದು....

ಸಿದ್ದರಾಮಯ್ಯ ಆಪ್ತನಿಂದ 'ಪ್ರತ್ಯೇಕ' ಸಭೆಗೆ ಆಹ್ವಾನ, ಕಾಂಗ್ರೆಸ್ ಗೆ ಹೊಸ ತಲೆನೋವು?
ಎಸ್ ಟಿ ಸೋಮಶೇಖರ್
Published On :
ಬೆಂಗಳೂರು: ಮೇ 19ರಂದು ರಾಜ್ಯದ ಚಿಂಚೊಳಿ ಹಾಗೂ ಕುಂದಗೋಳದ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈ ಚುನಾವಣೆ ಸಮ್ಮಿಶ್ರ ಸರ್ಕಾರದ ಮೈತ್ರಿಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಕಣವಾಗಿದ್ದುಎರಡೂ ಪಕ್ಷಗಳು ಸಮಾನವಾಗಿ ಒಗ್ಗಟ್ಟಿನಿಂದ ಹೋರಾಡಲು ತೀರ್ಮಾನಿಸಿದೆ. ಆದರೆ ಇದೇ ವೇಳೆ ಕಾಂಗ್ರೆಸ್ ನಾಯಕ, ಸಿದ್ದರಾಮಯ್ಯ ಆಪ್ತ ಎಸ್ ಟಿ ಸೋಮಶೇಖರ್ ಬರೆದ ಒಂದು ಪತ್ರ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ  ಶಾಸಕ ಸೋಮಶೇಖರ್ ಮಂಗಳವಾರಕಾಂಗ್ರೆಸ್ ಶಾಸಕರನ್ನು ರಾಜ್ಯದಲ್ಲಿ "ಕೆಟ್ಟ ರಾಜಕೀಯ ಪರಿಸ್ಥಿತಿ" ಕುರಿತು ಚರ್ಚಿಸಲು  ಸಭೆಗೆ ಆಹ್ವಾನಿಸಿದ್ದಾರೆ.  ಈ ಕುರುತಂತೆ ಅವರು ಬರೆದ ಪತ್ರ ಮೈತ್ರಿ ಪಾಲುದಾರರ ನಡುವೆ ಎಲ್ಲವೂ ಚೆನ್ನಾಗಿಲ್ಲ ಎಂದು ಧ್ವನಿಸುತ್ತಿದೆ.
"ಕರ್ನಾಟಕದಲ್ಲಿ ಪ್ರಸ್ತುತ ರಾಜಕೀಯ ಸನ್ನಿವೇಶವುಕೆಟ್ಟ ಸ್ಥಿತಿಯಲ್ಲಿದೆ. ಆದ್ದರಿಂದ ನಾವು ಇಷ್ಟಪಡುವ ಶಾಸಕರು  ಒಟ್ಟಾಗಿ ಸೇರಲು ಮತ್ತು ಪ್ರಸ್ತುತ ನಡೆಯುತ್ತಿರುವ ಸನ್ನಿವೇಶವನ್ನು ಚರ್ಚಿಸಲುಪರಿಹಾರವನ್ನು ಕಂಡುಹಿಡಿಯಲು 30.04.2019 ಮಂಗಳವಾರ, ಸಭೆಗೆ ಬರುವುದು" ಸೋಮಶೇಖರ್ ಪತ್ರ ಬರೆದಿದ್ದಾರೆ.
ಇದೇ ವೇಳೆ "ನಾನು ಅಧಿಕಾರ ವಹಿಸಿಕೊಂಡ ಬಳಿಕ ಸಭೆ ನಡೆದಿಲ್ಲ. ಮಂಡಳಿಗಳು ಮತ್ತು ನಿಗಮಗಳ ಕಲ್ಯಾಣವನ್ನು ಚರ್ಚಿಸಲು ನಾನು ಬಯಸುತ್ತೇನೆ. ಚುನಾವಣೆಗಳು ನಡೆದಿರುವುದರಿಂದ ನಾವು ಯಾವುದನ್ನೂ ಚರ್ಚಿಸಲು ಸಾಧ್ಯವಾಗಲಿಲ್ಲ, ಆದರೆ ಈಗ ನಾವು ಅದನ್ನು ಮಾಡಬಹುದು, "ಅವರು ಹೇಳಿದರು. ಅಲ್ಲದೆ ಸರ್ಕಾರಕ್ಕೆ ತೊಂದರೆಯುಂಟುಮಾಡುವುದು ಅವರ ಉದ್ದೇಶವಲ್ಲ" ಎಂದೂ ಸೋಮಶೇಖರ್ ಹೇಳಿದ್ದಾರೆ. ರು. "ನಾನು ಕಾಂಗ್ರೆಸ್ ಮುಖಂಡ ಮತ್ತು ನಮ್ಮ ಸರ್ಕಾರ ಅಧಿಕಾರದಲ್ಲಿದೆ. ನಮ್ಮ ಸರ್ಕಾರವನ್ನು ನಾನೇ ಏಕೆ ತೊಂದರೆಗೆ ಸಿಕ್ಕಿಸಬೇಕು?" ಅವರು ಪ್ರಶ್ನಿಸಿದ್ದಾರೆ.
ಸಮ್ಮಿಶ್ರ ಸರಕಾರವು ಅಧಿಕಾರಕ್ಕೆ ಬಂದಂದಿನಿಂದಲೂ ಕಾಂಗ್ರೆಸ್ಒಳಗೆ ಹಲವು ಬಗೆಯ ಅಸಮಾಧಾನಗಳಿದೆ. ಇದೀಗ ಮೈತ್ರಿ  ಬಗೆಗೆ ಯಾವುದೇ ತಾರತಮ್ಯವಿಲ್ಲ ಎಂದು ಕಾತ್ರಿಪಡಿಸಬೇಕಾಗಿದೆ.ಆದರೆ ಈ ಪತ್ರದ ಕುರಿತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡೂರಾವ್ "ಏನೂ ಸಂಶಯ ಬೇಡ, ಇಲ್ಲಿ ಎಲ್ಲವೂ ಚೆನ್ನಾಗಿದೆ. ನಮ್ಮದು ಸರ್ವಾಧಿಕಾರದ ಪಕ್ಷವಲ್ಲ.  ನಾಯಕರು ಸಭೆಗಳನ್ನು ನಡೆಸಲು ಸ್ವತಂತ್ರರಾಗಿದ್ದಾರೆ. ಅವರು ಬಹುಷಃಅ ಒಳ್ಳೆ ಉದ್ದೇಶಕ್ಕೇ ಸಭೆ ಕರೆದಿರಬಹುದು." ಎಂದಿದ್ದಾರೆ.
ಆದರೆ ಪಕ್ಷದ ಮೂಲಗಳು, ಮಂಗಳವಾರದ ಸಭೆಯಲ್ಲಿ ಹಾಜರಾಗುವ ನಾಯಕರು ಪಕ್ಷದ ಅಸಮಾಧಾನದ ಬಗೆಗೆ ಹೆಚ್ಚು ಮಾತನಾಡಲಿದ್ದಾರೆ ಎಂದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.