ರಾಜಕೀಯ

ರಮೇಶ್ ಗೌಡ ನಾಮಪತ್ರ: ಜೆಡಿಎಸ್ ನಲ್ಲಿ ಅಸಮಾಧಾನ; ರಮೇಶ್ ಪರ ದೇವೇಗೌಡ ಕುಟುಂಬದ ಸದಸ್ಯರೊಬ್ಬರ ಲಾಬಿ!

: ವಿಧಾನ ಪರಿಷತ್‌ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ರಮೇಶ್‌ ಗೌಡ ಅವರಿಗೆ ಈಗ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ. ..

ರಮೇಶ್ ಗೌಡ ನಾಮಪತ್ರ: ಜೆಡಿಎಸ್ ನಲ್ಲಿ ಅಸಮಾಧಾನ; ರಮೇಶ್ ಪರ ದೇವೇಗೌಡ ಕುಟುಂಬದ ಸದಸ್ಯರೊಬ್ಬರ ಲಾಬಿ!
ರಮೇಶ್ ಗೌಡ
Published On :
ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ರಮೇಶ್‌ ಗೌಡ ಅವರಿಗೆ ಈಗ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ. 
ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನಪ್ಪಿದ್ದ  ಹಿರಿಯ ನಾಯಕರಾದ ಮಧು ಬಂಗಾರಪ್ಪ, ವೈ ಎಸ್ ವಿ ದತ್ತ. ಮತ್ತು ಕೋನರೆಡ್ಡಿ ಹಾಗೂ ಮಾಜಿ ಎಂಎಲ್ ಸಿ ರಮೇಶ್ ಬಾಬು ಪ್ರಮುಖ ಆಕಾಂಕ್ಷಿಗಳಾಗಿದ್ದರು. ಆದರೆ  ಬೆಂಗಳೂರು ನಗರ ಜೆಡಿಎಸ್ ಯೂತ್ ಘಟಕದ ಅಧ್ಯಕ್ಷ ರಮೇಶ್ ಗೌಡ ಅವರನ್ನು ಪಕ್ಷದ ವರಿಷ್ಠರು ಕಣಕ್ಕಿಳಿಸಿರುವುದು ಎಲ್ಲರಿಗೂ ಆಘಾತ ತಂದಿದೆ.
ನಾಮಪತ್ರ ಸಲ್ಲಿಸಲು ಕೊನೆಯ  ದಿನವಾದ ಸೋಮವಾರ ಅಂತಿಮ ಕ್ಷಣದಲ್ಲಿ ರಮೇಶ್ ಗೌಡ ನಾಮಪತ್ರ ಸಲ್ಲಿಸಿದ್ದಾರೆ., ಈ ವೇಳೆ ಸತಚಿವ ಎಚ್,ಡಿ ರೇವಣ್ಣ ಅವರನ್ನು ಬಿಟ್ಟರೇ ಬೇರಾವ ನಾಯಕರು ಜೊತೆಯಲ್ಲಿರಲಿಲ್ಲ,
ಸಿಎಂ ಕುಮಾರ ಸ್ವಾಮಿ ಆಪ್ತ ಮಧು ಬಂಗಾರಪ್ಪ ಹಾಗೂ ದೇವೇಗೌಡರ ಬಲಗೈ ಬಂಟ ಎನಿಸಿಕೊಂಡ ವೈಎಸ್ ವಿ ದತ್ತ ಅವರನ್ನು ಕಣಕ್ಕಿಳಿಸಲಾಗುವುದು ಎಂದು ನೀರಿಕ್ಷಿಸಲಾಗಿತ್ತು. ಆದರೆ ದೇವೇಗೌಡ ಕುಟುಂಬದ ಸದಸ್ಯರೊಬ್ಬರ ಒತ್ತಡದ ಮೇರೆಗೆ ರಮೇಶ್ ಗೌಡ ಅವರನ್ನು ಕಣಕ್ಕಿಳಿಸಲಾಗಿದೆ, 
ರಮೇಶ್ ಗೌಡ ನಾಮಪತ್ರ ಸಲ್ಲಿಕೆ ನನಗೆ ಬೇಸರ ತಂದಿದೆ,. ಆದರೆ ಪಕ್ಷದ ಹಿರಿಯ ನಾಯಕರ ಮನವಿ ಮೇರೆಗೆ ನಾನು ಪಕ್ಷ ತೊರೆಯುತ್ತಿಲ್ಲ, ಪಕ್ಷ ಹೊಸ ತೊಂದರೆಗೆ ಸಿಲುಕಬಾರದು ಎಂಬ ಉದ್ದೇಶದಿಂದ ನಾನು ಸುಮ್ಮನಿದ್ದೇನೆ,  ನನ್ನ ಕಠಿಣ ಶ್ರಮಕ್ಕೆ ತಕ್ಕ ಫಲ ಸಿಗುವುದೆಂಬ ನಿರೀಕ್ಷೆಯೊಂದಿಗೆ ಕಾಯುತ್ತಿದ್ದೇನೆ ಎಂದು ಎಂಎಲ್ ಸಿ ಸ್ಥಾನದ ಆಕಾಂಕ್ಷಿಯಾಗಿದ್ದ ಬೆಂಗಳೂರು ಜೆಡಿಎಸ್ ಘಟಕದ ಅಧ್ಯಕ್ಷ ಪ್ರಕಾಶ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.