ರಾಜಕೀಯ

ಹೈಕಮಾಂಡ್ ಸೂಚಿಸಿದ್ರೆ ತಕ್ಷಣವೇ ರಾಜಿನಾಮೆ: ಶಿವಾನಂದ ಪಾಟೀಲ್

ಜೀವನದಲ್ಲಿ ಒಮ್ಮೆ ಆದರೂ ಸಚಿವನಾಗಬೇಕು ಎಂಬ ಆಸೆ ಇತ್ತು, ಅದರಂತೆ ನಾನು ಮಂತ್ರಿ ಆಗಿದ್ದೇನೆ, ನನ್ನ ಕನಸು ನೆರವೇರಿದೆ, ...

ಹೈಕಮಾಂಡ್ ಸೂಚಿಸಿದ್ರೆ ತಕ್ಷಣವೇ ರಾಜಿನಾಮೆ: ಶಿವಾನಂದ ಪಾಟೀಲ್
ಶಿವಾನಂದ ಪಾಟೀಲ್
Published On :
ವಿಜಯಪುರ: ಜೀವನದಲ್ಲಿ ಒಮ್ಮೆ ಆದರೂ ಸಚಿವನಾಗಬೇಕು ಎಂಬ ಆಸೆ ಇತ್ತು, ಅದರಂತೆ ನಾನು ಮಂತ್ರಿ ಆಗಿದ್ದೇನೆ, ನನ್ನ ಕನಸು ನೆರವೇರಿದೆ, ಪಕ್ಷದ ಒಳಿತಿಗಾಗಿ ನಾನು ನನ್ನ ಸ್ಥಾನಕ್ಕೆ ನಾನು ರಾಜಿನಾಮೆ ನೀಡಲು ಸಿದ್ಧವಿದ್ದೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ. 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಇರುವಷ್ಟರಲ್ಲಿ ಏನು ಸೇವೆ ಮಾಡುತ್ತೇವೆ ಅದು ಮುಖ್ಯ ಎಂದಿದ್ದಾರೆ. ಅಲ್ಲದೆ ನಾನು ಆಪರೇಷನ್ ಕಮಲದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸರ್ಕಾರ ಐದು ವರ್ಷ ಆಡಳಿತ ನಡೆಸುತ್ತೆ. ಮಾಧ್ಯಮಗಳಲ್ಲಿ ಸರ್ಕಾರ ಬಿಳುತ್ತೆ ಅಂತ ಹೇಳುತ್ತಿದ್ದಾರೆ. ಆದರೆ ನಮ್ಮ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಾನು 100 ದಿನ ಅಧಿಕಾರ ಪೂರೈಸಿದ್ದೇನೆ,  ನಾನು ರಾಜಕೀಯದ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಇಲಾಖೆಯಲ್ಲಿ ಕೆಲಸ ಮಾಡುವುದಷ್ಟೇ ನನ್ನ ಆದ್ಯತೆ.  ಒಂದು ವೇಳೇ ಹೈಕಮಾಂಡ್ ಸೂಚಿಸಿದ್ರೆ ಯಾವುದೇ ತಕರಾರಿಲ್ಲದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.