ಅಕ್ಟೋಬರ್ 4 ರಂದು ವಿಧಾನ ಪರಿಷತ್ ಚುನಾವಣೆ: ಮುಂಚೂಣಿಯಲ್ಲಿ ನಿವೇದಿತ್ ಆಳ್ವ ಎಂ,ಸಿ ವೇಣುಗೋಪಾಲ್
: ಅಕ್ಟೋಬರ್ 4 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಆಕಾಂಕ್ಷಿಗಳ ದಂಡು ಹೆಚ್ಚಿದೆ. ನಿವೇದಿತ್ ಆಳ್ವ ಮತ್ತು ಎಂಸಿ ವೇಣುಗೋಪಾಲ್ ....

Published On :
ಬೆಂಗಳೂರು: ಅಕ್ಟೋಬರ್ 4 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಆಕಾಂಕ್ಷಿಗಳ ದಂಡು ಹೆಚ್ಚಿದೆ. ನಿವೇದಿತ್ ಆಳ್ವ ಮತ್ತು ಎಂಸಿ ವೇಣುಗೋಪಾಲ್ ಕೆಳಮನೆಯಿಂದ ಮೇಲ್ಮನೆಗೆ ಮೂರು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.
ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟಾಗಿ ಬಿಜೆಪಿ ವಿರುದ್ಧ ಹೋರಾಟಕ್ಕೆ ನಿರ್ಧರಿಸಿವೆ.
ಒಬ್ಬ ಸದಸ್ಯ ಆಯ್ಕೆಯಾಗಲು 112 ಸದಸ್ಯರ ಅಗತ್ಯವಿದೆ, ಆದರೆ ಸಮ್ಮಿಶ್ರ ಪಾಲುದಾರರ ಒಟ್ಟು ಸಂಖ್ಯೆ 118 ಇದೆ,.
ಕಾಂಗ್ರೆಸ್ ನಲ್ಲಿ ಜಾರಿಕ ಹೊಳಿ ಸಹೋದರರು ಹಾಗೂ ಲಿಂಗಾಯತ ಶಾಸಕರು ಕಾಂಗ್ರೆಸ್ ಗೆ ಬಿಕ್ಕಟ್ಟು ತರುವ ಸಾಧ್ಯತೆಯಿದೆ, ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಿಗೆ ಬಿಜೆಪಿ ಆಘಾತ ನೀಡಲು ತಂತ್ರ ರೂಪಿಸುತ್ತಿದೆ, ಆದರೆ ಇನ್ನೂ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ, ಇಂದು ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಜೆಡಿಎಸ್ ನಲ್ಲಿ ಮಾಜಿ ಶಾಸಕರಾದ ವೈಎಸ್ ವಿ ದತ್ತ ಮತ್ತು ಮಧು ಬಂಗಾರಪ್ಪ ಮತ್ತು ಮಾಜಿ ಎಂಎಲ್ ಸಿ ರಮೇಶ್ ಬಾಬು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ, ಕಾಂಗ್ರೆಸ್ ನಲ್ಲಿ ಡಿಸಿಎಂ ಪರಮೇಶ್ವರ್ ಪರ ಅಭ್ಯರ್ಥಿಯಾಗಿರುವ ನಿವೇದಿತ್ ಆಳ್ವ, ಹಾಗೂ ಯುಬಿ ವೆಂಕಟೇಶ್ ನಡುವೆಪ್ಬಲ ಸ್ಪರ್ಧೆ ಏರ್ಪಟ್ಟಿದೆ.,
ಕರ್ನಾಟಕ ವಿಧಾನ ಪರಿಷತ್ ಚುನಾವಣೆಯನ್ನು ಅ.4ಕ್ಕೆ ಮುಂದೂಡಿ ಚುನಾವಣಾ ಆಯೋಗ ಗುರುವಾರ ಆದೇಶ ಹೊರಡಿಸಿದೆ.
ನಾಮಪತ್ರ ಸಲ್ಲಿಕೆಗೆ ಸೆ. 24 ಕೊನೆಯದಿನವಾಗಿದ್ದು, ನಾಮಪತ್ರ ಹಿಂಪಡೆಯಲು ಸೆ.27 ಕೊನೆಯದಿನವಾಗಿದೆ. ಚುನಾವಣಾ ಆಯೋಗವು ಈ ಮೊದಲು ಪ್ರಕಟಿಸಿದ್ದ ವೇಳಾಪಟ್ಟಿಯಲ್ಲಿ ನಾಮಪತ್ರ ಸಲ್ಲಿಸಲು ಸೆ.22 ಕೊನೆಯದಿನ ಎಂದು ಘೋಷಿಸಿತ್ತು.
ಸೆ.22 ನಾಲ್ಕನೇ ಶನಿವಾರವಾಗಿದ್ದು, ಅಂದು ಸಾರ್ವತ್ರಿಕ ರಜೆ ಇರುವ ಕಾರಣ ವೇಳಾಪಟ್ಟಿಯನ್ನು ಬದಲಿಸಿ ಆದೇಶ ಹೊರಡಿಸಿದೆ. ಹಾಗಾಗಿ ಈ ಹಿಂದೆ ಅ.3 ರಂದು ನಡೆಯಬೇಕಿದ್ದ ಮತದಾನವನ್ನು ಅ.4 ಕ್ಕೆ ಮುಂದೂಡಲಾಗಿದೆ. ನೂತನ ವೇಳಾಪಟ್ಟಿಯಂತೆ ಅ.4 ರಂದು ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


