ಇಡಿ ದೇಶದಲ್ಲೇ ಕರ್ನಾಟಕದ ಶಾಸಕರು ಆಗರ್ಭ ಶ್ರೀಮಂತರಂತೆ; ಅವರ ವಾರ್ಷಿಕ ಆದಾಯವೆಷ್ಟು?
ದೇಶದಲ್ಲೇ ಕರ್ನಾಟಕ ಶಾಸಕರ ವಾರ್ಷಿಕ ಆದಾಯ ಅತಿ ಹೆಚ್ಚು ಇದ್ದು, ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕರ್ನಾಟಕ ಶಾಸಕರ ಸರಾಸರಿ ವಾರ್ಷಿಕ ಆದಾಯ ....

Published On :
ನವದೆಹಲಿ: ದೇಶದಲ್ಲೇ ಕರ್ನಾಟಕ ಶಾಸಕರ ವಾರ್ಷಿಕ ಆದಾಯ ಅತಿ ಹೆಚ್ಚು ಇದ್ದು, ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕರ್ನಾಟಕ ಶಾಸಕರ ಸರಾಸರಿ ವಾರ್ಷಿಕ ಆದಾಯ 1.11 ಕೋಟಿ ರು. ಆಗಿದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.
ಡೆಮಾಕ್ರೆಟಿಕ್ ರಿಫಾರ್ಮ್ಸ್ ಅಸೋಸಿಯೇಶನ್ ಹಾಗೂ ನ್ಯಾಷನಲ್ ಇಲೆಕ್ಷನ್ ವಾಚ್ ಸಂಸ್ಥೆಗಳ ಜಂಟಿ ಅಧ್ಯಯನದಿಂದ ಈ ಕುತೂಹಲಕರ ಅಂಶ ಬೆಳಕಿಗೆ ಬಂದಿದೆ. ದೇಶದ ಒಟ್ಟಾರೆ ಶಾಸಕರ ವಾರ್ಷಿಕ ಆದಾಯ 24.59 ಲಕ್ಷ ರುಪಾಯಿ ಇದೆ.
ಕರ್ನಾಟಕಕ್ಕೆ ಹೋಲಿಸಿದರೆ ಛತ್ತೀಸ್‌ಗಢ ಶಾಸಕರ ವಾರ್ಷಿಕ ಆದಾಯ ನಗಣ್ಯವಾಗಿದ್ದು, ವಾರ್ಷಿಕ 5.4 ಲಕ್ಷ ರು. ಸರಾಸರಿ ಆದಾಯ ಹೊಂದುವ ಮೂಲಕ ದೇಶದಲ್ಲೇ ಅತಿ ಕನಿಷ್ಠ ಆದಾಯದ ಶಾಸಕರಾಗಿದ್ದಾರೆ. ಅಧ್ಯಯನದಲ್ಲಿ ಕರ್ನಾಟಕದ 224 ಶಾಸಕರ ಪೈಕಿ 203 ಜನರ ಆದಾಯವನ್ನು ಅಳೆಯಲಾಗಿದ್ದು, ಇವರ ಸರಾಸರಿ ವಾರ್ಷಿಕ ಆದಾಯ 111.4 ಲಕ್ಷ (1.11ಕೋಟಿ ರುಪಾಯಿ) ಆಗಿದೆ.
ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ ರಾಜ್ಯವಿದ್ದು, 256 ಶಾಸಕರು ತಮ್ಮ ವಾರ್ಷಿಕ ಆದಾಯ 43.3 ಲಕ್ಷ ರು. ಎಂದು ಘೋಷಿಸಿದ್ದಾರೆ. ದೇಶದ ಒಟ್ಟಾರೆ 4086 ಹಾಲಿ ಶಾಸಕರ ಪೈಕಿ 3145 ಶಾಸಕರ ಸ್ವಘೋಷಿತ ಆಸ್ತಿ ವಿವರವನ್ನು ವಿಶ್ಲೇಷಿಸಲಾಗಿದೆ. 941 ಶಾಸಕರು ಆಸ್ತಿಯನ್ನೇ ಘೋಷಿಸಿಕೊಂಡಿಲ್ಲ
ದೇಶದ ಒಟ್ಟು ಶಾಸಕರ ಪೈಕಿ ಕರ್ನಾಟಕ ಶಾಸಕರೇ ಅತೀ ಶ್ರೀಮಂತರು. ರಾಜ್ಯದ ಒಟ್ಟು ಶಾಸಕರ ಸರಾಸರಿ ವಾರ್ಷಿಕ ಆದಾಯ 1 ಕೋಟಿ 11 ಲಕ್ಷ ರೂ. ಅಂದ್ರೆ ಕರ್ನಾಟಕದ ಶಾಸಕರು ದೇಶದಲ್ಲೇ ಅತೀ ಶ್ರೀಮಂತರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


