ವಿಧಾನ ಪರಿಷತ್ ಸದಸ್ಯರಾಗಿ ಪ್ರಕಾಶ್ ರಾಥೋಡ್ ಹಾಗೂ ಯು.ಬಿ. ವೆಂಕಟೇಶ್ ನಾಮಕರಣ
ವಿಧಾನ ಪರಿಷತ್ ಸದಸ್ಯರಾಗಿ ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ರಾಥೋಡ್ ಹಾಗೂ ಯು.ಬಿ. ವೆಂಕಟೇಶ್ ಅವರನ್ನು ನಾಮಕರಣ ಮಾಡಲಾಗಿದೆ. ಜತೆಗೆ ಆಂಗ್ಲೊ ಇಂಡಿಯನ್ ಕೋಟಾದಡಿ ...

ಬೆಂಗಳೂರು: ವಿಧಾನ ಪರಿಷತ್ ಸದಸ್ಯರಾಗಿ ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ರಾಥೋಡ್ ಹಾಗೂ ಯು.ಬಿ. ವೆಂಕಟೇಶ್ ಅವರನ್ನು ನಾಮಕರಣ ಮಾಡಲಾಗಿದೆ. ಜತೆಗೆ ಆಂಗ್ಲೊ ಇಂಡಿಯನ್ ಕೋಟಾದಡಿ ಹಾಲಿ ವಿಧಾನಸಭೆ ಸದಸ್ಯೆ ವಿನಿಷಾ ನಿರೊ ಅವರನ್ನು ನೇಮಿಸಲಾಗಿದೆ. ಈ ಸಂಬಂಧ ಸರಕಾರ ಕಳುಹಿಸಿದ್ದ ಶಿಫಾರಸಿಗೆ ರಾಜ್ಯಪಾಲರು ಅಂಕಿತ ಹಾಕಿದ್ದು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ನಾಮನಿರ್ದೇಶನ ಕೋಟಾದಡಿ ಪರಿಷತ್‌ಗೆ ಮೂವರನ್ನು ನೇಮಿಸಲು ಈ ಬಾರಿ ಅವಕಾಶವಿತ್ತು. ಮೈತ್ರಿ ಸೂತ್ರದಂತೆ ಕಾಂಗ್ರೆಸ್‌ಗೆ 2 ಸ್ಥಾನ ಬಿಟ್ಟುಕೊಡಲಾಗಿತ್ತು. ಕಾಂಗ್ರೆಸ್ ಕಡೆಯ ಸದಸ್ಯರ ನೇಮಕ ಪೂರ್ಣಗೊಂಡಂತಾಗಿದೆ. ಜೆಡಿಎಸ್‌ನಿಂದ ಇನ್ನೂ ಪ್ರಸ್ತಾವನೆ ಕಳುಹಿಸದ್ದರಿಂದ ಈ ಪ್ರಕ್ರಿಯೆ ಬಾಕಿಯಿದೆ. ವಿನಿಷಾ ನಿರೊ 14ನೇ ವಿಧಾನಸಭೆ ಅವಧಿಯಲ್ಲೂ ಆಂಗ್ಲೊ ಇಂಡಿಯನ್ ಕೋಟಾದಡಿ ವಿಧಾನಸಭೆಗೆ ಸದಸ್ಯರಾಗಿ ನೇಮಕಗೊಂಡಿದ್ದರು. ಮೂಲತಃ ಕ್ರಿಕೆಟಿಗರಾಗಿರುವ ಪ್ರಕಾಶ್ ರಾಥೋಡ್ ಒಮ್ಮೆ ಪರಿಷತ್ ಸದಸ್ಯರಾಗಿದ್ದರು. ಕಾಂಗ್ರೆಸ್ ಸಂಘಟನೆಯಲ್ಲಿ ಸಕ್ರಿಯವಾಗಿದ್ದು, ವಿಜಯಪುರ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಸಚಿವ ರಮೇಶ ಜಿಗಜಣಗಿ ವಿರುದ್ಧ ಸೋತಿದ್ದರು. ಯು.ಬಿ. ವೆಂಕಟೇಶ್ ಉದ್ಯಮಿ ಯು.ಬಿ. ವೆಂಕಟೇಶ್ ಜಯನಗರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು 2013 ಮತ್ತು 2018ರಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


