ರಾಜಕೀಯ

ದೇವೇಗೌಡ, ರೇವಣ್ಣ ರಾಹು-ಕೇತು ಅಲ್ಲವಾದರೇ ಬೇರೆ ಯಾರೆಂದು ಸ್ಪಷ್ಟಪಡಿಸಿ: ಸಿದ್ದರಾಮಯ್ಯಗೆ ಕೆಎಸ್ಇ ಆಗ್ರಹ!

ಪರಮೇಶ್ವರ್​​,ದೇವೇಗೌಡ, ರೇವಣ್ಣ ಇವರೇ ರಾಹು,ಕೇತು,ಶನಿ ಎಂದು ನಾನು ಅಂದುಕೊಂಡಿದ್ದೇನೆ. ಇಲ್ಲಾಂದ್ರೆ ಸಿದ್ದರಾಮಯ್ಯ ರಾಹು,ಕೇತು,ಶನಿ ಯಾರೆಂದು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದ್ದಾರೆ...

ದೇವೇಗೌಡ, ರೇವಣ್ಣ ರಾಹು-ಕೇತು ಅಲ್ಲವಾದರೇ ಬೇರೆ ಯಾರೆಂದು ಸ್ಪಷ್ಟಪಡಿಸಿ: ಸಿದ್ದರಾಮಯ್ಯಗೆ ಕೆಎಸ್ಇ ಆಗ್ರಹ!
ಈಶ್ವರಪ್ಪ ಮತ್ತು ಸಿದ್ದರಾಮಯ್ಯ
Published On :
ಬಾಗಲಕೋಟೆ:  ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಡಿಸಿಎಂ ಕೆ,ಎಸ್ ಈಶ್ವರಪ್ಪ ರಾಜ್ಯ.ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು,  ಸಿದ್ದರಾಮಯ್ಯ ದೇವೇಗೌಡರ ಬೆನ್ನಿಗೆ ಚಾಕು ಹಿಡಿದು ಚುಚ್ಚೋಕೆ ಹೋಗ್ತಿದ್ದಾರೆ. ಕುಮಾರಸ್ವಾಮಿ ಸಿದ್ದರಾಮಯ್ಯ ಬೆನ್ನಿಗೆ ಚಾಕು ಇಟ್ಕೊಂಡು ನಿಂತಿದ್ದಾರೆ. ರಾಜಕಾರಣದಲ್ಲಿ ಇವರು ಯಾವಾಗ ಒಬ್ಬರಿಗೊಬ್ಬರು ಸಾಯ್ತಾರೋ ಗೊತ್ತಿಲ್ಲ ಎಂದು ಹೇಳಿದರು.
ಮೈಸೂರಲ್ಲಿ ರಾಹು,ಕೇತು,ಶನಿ ಒಟ್ಟಾಗಿ ಸೋಲಿಸಿದರು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಪರಮೇಶ್ವರ್​​,ದೇವೇಗೌಡ, ರೇವಣ್ಣ ಇವರೇ ರಾಹು,ಕೇತು,ಶನಿ ಎಂದು ನಾನು ಅಂದುಕೊಂಡಿದ್ದೇನೆ. ಇಲ್ಲಾಂದ್ರೆ ಸಿದ್ದರಾಮಯ್ಯ ರಾಹು,ಕೇತು,ಶನಿ ಯಾರೆಂದು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ದನದ ಮಾಂಸ ತಿಂತಾರೋ, ಎಮ್ಮೆ ಮಾಂಸ ತಿಂತಾರೋ ಅದು ಅವರಿಗೆ ಬಿಟ್ಟಿದ್ದು. ನೀವು ಯಾವ ಮಾಂಸ ತಿಂತಿರೀ ಅಂತ ನಾನು ಹೇಳಿಲ್ಲ. ನಾನು ದನದ ಮಾಂಸ ತಿಂದಿಲ್ಲ, ತಿನ್ನಬೇಕು ಅನ್ನಿಸಿದ್ರೆ ತಿನ್ನುತ್ತೇನೆ ಅಂತ ಅವರಾಗಿ ಅವರೇ ಹೇಳುತ್ತಾರೆ. ದನ ತಿನ್ನೋದನ್ನು ಬಿಟ್ಟು ಮನುಷ್ಯರು ತಿನ್ನೋದನ್ನು ತಿನ್ನಪ್ಪ ಅಂತ ನಾವು ಹೇಳುತ್ತೇವೆ,
ಸಿದ್ದರಾಮಯ್ಯನವರ ಹೆಂಡತಿ ನನಗೆ ತಾಯಿ ಸಮಾನ. ಬಿಜೆಪಿಯವರು ಹೆಣ್ಣು ಮಕ್ಕಳನ್ನು ತಾಯಿ ಸ್ಥಾನದಲ್ಲಿ ನೋಡುತ್ತೇವೆ. ಸಿದ್ದರಾಮಯ್ಯ ಶೋಭಾ ಕರಂದ್ಲಾಜೆಗೆ ಅವಳು ಅಂತ ಏಕವಚನದಲ್ಲಿ ಕರಿತಾರೆ. ಜಾರಕಿಹೊಳಿ  ಸಹೋದರರು ಲಕ್ಷ್ಮೀ ಹೆಬ್ಬಾಳ್ಕರ್ ಕಾಲು ಕಸ ಎಂದರು. ಇದು ಅವರ ಯೋಗ್ಯತೆ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಹಗಲುಗನಸು ಕಾಣುತ್ತಿದ್ದಾರೆ. ಇವರ ಕನಸು ಯಾವತ್ತೂ ಈಡೇರಲ್ಲ. ಚುನಾವಣೆಗೆ ನಿಲ್ಲಲ್ಲ ಅಂತಾರೆ. ಚುನಾವಣೆಗೆ ನಿಲ್ಲದೆ ಮುಖ್ಯಮಂತ್ರಿ ಆಗೋಕೆ ಆಗಲ್ಲ. ಇವರು ಪ್ರಜಾಪ್ರಭುತ್ವದ ವಿರೋಧಿಗಳು ಎಂದು ಜರಿದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.