'ಸುಳ್ಳೇ ಬಿಎಸ್ ವೈ ಮನೆ ದೇವರು, ಹಿಂದುತ್ವ ಜನರ ಹೊಟ್ಟೆ ತುಂಬಿಸುವುದಿಲ್ಲ': ಸಿದ್ದರಾಮಯ್ಯ
ಬಿಜೆಪಿ ರಾಷ್ಟ್ರಾಧ್ಯಕ್ಷ ಬಿಎಸ್ ಯಡಿಯೂರಪ್ಪ ಜನರನ್ನ ಪ್ರಚೋದನೆ ಮಾಡಿ ದಾರಿ ತಪ್ಪಿಸುತ್ತಿದ್ದಾರೆ. ಹಿಂದುತ್ವ ಎನ್ನುವುದು ಜನರ ಹೊಟ್ಟೆ ತುಂಬಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

Published On :
ಶಿವಮೊಗ್ಗ: ಬಿಜೆಪಿ ರಾಷ್ಟ್ರಾಧ್ಯಕ್ಷ ಬಿಎಸ್ ಯಡಿಯೂರಪ್ಪ ಜನರನ್ನ ಪ್ರಚೋದನೆ ಮಾಡಿ ದಾರಿ ತಪ್ಪಿಸುತ್ತಿದ್ದಾರೆ. ಹಿಂದುತ್ವ ಎನ್ನುವುದು ಜನರ ಹೊಟ್ಟೆ ತುಂಬಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಗುರುವಾರ ಶಿವಮೊಗ್ಗ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರೊಂದಿಗೆ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ತೆರಳಿದ ಸಿದ್ದರಾಮಯ್ಯ ಅವರು ನಾಗೂರಿನಲ್ಲಿ ಉಪಚುನಾವಣಾ ಪಾಲ್ಗೊಂಡರು. ಈ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿ ಅವರು, 'ಹಿಂದುತ್ವ ಜನರ ಹೊಟ್ಟೆ ತುಂಬಿಸುತ್ತದಾ? ಜನರನ್ನ ಪ್ರಚೋದನೆ ಮಾಡಿ ದಾರಿ ತಪ್ಪಿಸಿದುವುದರಿಂದ ಹೊಟ್ಟೆ ತುಂಬುತ್ತದಾ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದರು.
'ಪ್ರಧಾನಿ ಮೋದಿ ಯಾವಾಗಲೂ ಮನ್ ಕೀ ಬಾತ್ , ಮನ್ ಕೀ ಬಾತ್ ಎನ್ನುತ್ತಾರೆ. ಆದರೆ ಅವರು ಕಾಮ್ ಕೀ ಬಾತ್ ಮಾತನಾಡುವುದೇ ಇಲ್ಲ. ಇನ್ನು ಯಡಿಯೂರಪ್ಪನವರು ಹಸಿರು ಶಾಲು ಹಾಕಿ ಡೋಂಗಿತನದಲ್ಲಿ ನಾನು ಮಣ್ಣಿನ ಮಗ ಎನ್ನುತ್ತಾರೆ. ನಾವ್ಯಾರು ಮಣ್ಣಿನ ಮಕ್ಕಳಲ್ವಾ. ಯಡಿಯೂರಪ್ಪ ಅವರು 4 ವರ್ಷ ಲೋಕಸಭಾ ಸದಸ್ಯರಾಗಿದ್ದ ವೇಳೆ ಒಂದು ದಿನವಾದರೂ ಸಾಲ ಮನ್ನಾ ಮಾಡುವ ಕುರಿತು ಪ್ರಧಾನಿ ಬಳಿ ಬಾಯಿ ಬಿಟ್ಟಿದ್ದಾರಾ. ಸಾಲಮನ್ನಾ ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಹೇಳಿದ್ದರು. ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದ್ದು, ಈಗಲಾದರೂ ಸಾಲಮನ್ನಾ ಬಗ್ಗೆ ಮಾತನಾಡುತ್ತಿದ್ದೀರಾ.. ಸುಳ್ಳು ಯಡಿಯೂರಪ್ಪ ಅವರ ಮನೆ ದೇವರು, ಬರಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಾರೆ ಎಂದು ಕಿಡಿಕಾರಿದರು.
ಯಡಿಯೂರಪ್ಪ ಸಂಸದ ಸ್ಥಾನಕ್ಕೆ ಏಕೆ ರಾಜೀನಾಮೆ ನೀಡಿದರು? ಅವರು ಈಗಾಗಲೇ ಅಧಿಕಾರ ಮತ್ತು ಹಣದ ರುಚಿ ನೋಡಿದ್ದಾರೆ. ಈ ಉಪಚುನಾವಣೆ ಯಾರಿಗೂ ಇಷ್ಟವಿಲ್ಲ. ಚುನಾವಣೆ ಬರಲು ಯಡಿಯೂರಪ್ಪ ಅವರೇ ಕಾರಣ. ತಾವು ಸಿಎಂ ಆಗಬೇಕು ಎಂಬ ಆಸೆಯೊಂದಿಗೆ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ಸ್ಥಾನಕ್ಕೆ ಅವರ ಮಗ ನಿಂತಿದ್ದಾರೆ. ಯಡಿಯೂರಪ್ಪ ಮತ್ತು ಈಶ್ವರಪ್ಪ ಇಬ್ಬರೂ ಆಸ್ತಿ ಮಾಡಲು ಮುಗಿಬಿದ್ದಿದ್ದಾರೆ. ತಮ್ಮದೇ ಇಷ್ಟೆಲ್ಲ ಕಥೆ ಇಟ್ಟುಕೊಂಡು ನನ್ನ ಬಗ್ಗೆ ಮಾತನಾಡುವ ಈಶ್ವರಪ್ಪಗೆ ಮೆದುಳೇ ಇಲ್ಲ ಎಂದು ವ್ಯಂಗ್ಯವಾಡಿದರು. ಈಶ್ವರಪ್ಪನವರು ಒಂದು ಕಥೆಯಾದರೆ, ಯಡಿಯೂರಪ್ಪ ಅವರದ್ದು ಇನ್ನೊಂದು ಕಥೆ. ಯಡಿಯೂರಪ್ಪ ಅವರ ಮಾತನ್ನು ಎಷ್ಟು ಬಾರಿ ನಂಬುತ್ತೀರಾ? ಸುಳ್ಳು ಭರವಸೆ ನೀಡಿಯೇ ಅವರು ಗೆದ್ದಿದ್ದಾರೆ. ಸುಳ್ಳೇ ಅವರ ಮನೆ ದೇವರು ಎಂದು ಸಿದ್ದರಾಮಯ್ಯ ಹೇಳಿದರು.
ಕುರುಬ ಮಠದ ಕಟ್ಟುವ ಸಲುವಾಗಿ ನಡೆದ ಸಭೆಯಲ್ಲಿ ಕೆ.ಎಸ್. ಈಶ್ವರಪ್ಪ ಅವರೂ ಹಾಜರಿದ್ದರು. ಮಠ ನಿರ್ಮಾಣಕ್ಕೆ ಹಣ ಸಂಗ್ರಹ ಮಾಡಬೇಕು ಎಂಬ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ದುಡ್ಡು ಸಂಗ್ರಹ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಎರಡನೆಯ ಸಭೆಗೆ ಅವರು ಚಕ್ಕರ್ ಹಾಕಿದ್ದರು. ಬಳಿಕ ಎಲ್ಲವೂ ಮುಗಿದು ಮಠದ ಉದ್ಘಾಟನೆ ನಡೆದಾಗಲೂ ಅವರು ಅದಕ್ಕೆ ಹಾಜರಾಗಿರಲಿಲ್ಲ ಇಂಥ ಈಶ್ವರಪ್ಪ ನನ್ನ ಬಗ್ಗೆ ಮಾತನಾಡುತ್ತಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
PoliticsರಾಜಕೀಯSiddaramaiahಸಿದ್ದರಾಮಯ್ಯBS Yeddyurappashimogaಶಿವಮೊಗ್ಗಬಿಎಸ್ ಯಡಿಯೂರಪ್ಪಕರ್ನಾಟಕ ಉಪ ಚುನಾವಣೆKarnataka Bypoll
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


