ರಾಜಕೀಯ

ತನಗಿಂತಲೂ 3 ಪಟ್ಟು ಸಿರಿವಂತ ಪತ್ನಿಗೆ 6 ಕೋಟಿ ಸಾಲ ನೀಡಿದ ಸಿಎಂ ಕುಮಾರಸ್ವಾಮಿ!

ಸಿಎಂ ಕುಮಾರಸ್ವಾಮಿ ಅವರಿಗಿಂತ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಹೆಚ್ಚು ಸಿರಿವಂತರಂತೆ. ಈ ಬಗ್ಗೆ ಅವರು ಘೋಷಿಸಿಕೊಂಡಿರುವ ಆಸ್ತಿ-ಪಾಸ್ತಿ ಕುರಿತ ದಾಖಲೆಗಳು ಮಾಹಿತಿ ಬಹಿರಂಗಗೊಳಿಸಿವೆ.

ತನಗಿಂತಲೂ 3 ಪಟ್ಟು ಸಿರಿವಂತ ಪತ್ನಿಗೆ 6 ಕೋಟಿ ಸಾಲ ನೀಡಿದ ಸಿಎಂ ಕುಮಾರಸ್ವಾಮಿ!
ಸಂಗ್ರಹ ಚಿತ್ರ
Published On :
ರಾಮನಗರ: ಸಿಎಂ ಕುಮಾರಸ್ವಾಮಿ ಅವರಿಗಿಂತ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಹೆಚ್ಚು ಸಿರಿವಂತರಂತೆ. ಈ ಬಗ್ಗೆ ಅವರು ಘೋಷಿಸಿಕೊಂಡಿರುವ ಆಸ್ತಿ-ಪಾಸ್ತಿ ಕುರಿತ ದಾಖಲೆಗಳು ಮಾಹಿತಿ ಬಹಿರಂಗಗೊಳಿಸಿವೆ.
ರಾಮನಗರ ಉಪಚುನಾವಣೆ ಕಣ ರಂಗೇರಿದ್ದು, ಜೆಡಿಎಸ್ ಪಕ್ಷದಿಂದ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಅನಿತಾ ಕುಮಾರಸ್ವಾಮಿ ಅವರು ತಮ್ಮ ಮತ್ತು ತಮ್ಮ ಪತಿಯ ಆಸ್ತಿ ಘೋಷಣೆ ಮಾಡಿದ್ದು, ಅನಿತಾ ಕುಮಾರಸ್ವಾಮಿ ಒಟ್ಟಾರೆ 167.13 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಘೋಷಿಸಿಕೊಂಡಿದ್ದಾರೆ. ಕುಟುಂಬದ ಆಸ್ತಿ ಹೊರತು ಪಡಿಸಿದರೆ, ಅನಿತಾ ಕುಮಾರಸ್ವಾಮಿ ತಮ್ಮ ಪತಿಗಿಂತ 3 ಪಟ್ಟು ಹೆಚ್ಚು ಆಸ್ತಿ ಹೊಂದಿದ್ದು, ಕುಮಾರಸ್ವಾಮಿ ಅವರು 8 ಕೋಟಿ ಆಸ್ತಿ ಹೊಂದಿದ್ದರೆ, ಅನಿತಾ ಕುಮಾರಸ್ವಾಮಿ 4 ಕೋಟಿ ಆಸ್ತಿ ಹೊಂದಿದ್ದಾರೆ ಎಂದು ಅವರು ಸಲ್ಲಿಕೆ ಮಾಡಿರುವ ದಾಖಲೆಗಳಿಂದ ತಿಳಿದುಬಂದಿದೆ.
ಅನಿತಾ ಕುಮಾರಸ್ವಾಮಿ ತಮ್ಮ ಆಸ್ತಿ ಘೋಷಣೆ ಜೊತೆಗೆ ಕುಟುಂಬದ ಅವಲಂಬಿತರ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಚುನಾವಣಾ ಆಯೋಗಕ್ಕೆ ನೀಡಿರುವ ಆಸ್ತಿ ಘೋಷಣೆಯಲ್ಲಿ ಅನಿತಾ ಕುಮಾರಸ್ವಾಮಿ ಒಟ್ಟು 2ಕೆಜಿ 660 ಗ್ರಾಂ ಚಿನ್ನ, 17 ಕೆಜಿ ಬೆಳ್ಳಿ, 40 ಕ್ಯಾರೆಟ್‌ ವಜ್ರದ ಆಭರಣಗಳನ್ನು ಹೊಂದಿದ್ದಾರಂತೆ. ಅಂತೆಯೇ  20ಲಕ್ಷ ರೂ. ಮೌಲ್ಯದ ಒಂದು ವ್ಯಾನ್‌, 8.29 ಲಕ್ಷ ದ ಹಾರ್ಲೆ ಡೇವಿಡ್‌ ಸನ್‌ ಬೈಕ್‌ ಅನಿತಾ ಹೆಸರಿನಲ್ಲಿದೆ. 
ಸಿಎಂ ಕುಮಾರಸ್ವಾಮಿಗೆ ರಾಮನಗರ ತಾಲೂಕಿನ ಬಿಡದಿಯ ಬಳಿಯ ಕೇತಗಾನಹಳ್ಳಿಯಲ್ಲಿ 48 ಎಕರೆ ಕೃಷಿ ಜಮೀನಿದ್ದು, ಜಯನಗರದಲ್ಲಿ 4.5 ಕೋಟಿ ರೂ. ಬೆಲೆ ಬಾಳುವ ಮನೆ ಹೊಂದಿದ್ದಾರೆ. ಇದಲ್ಲದೆ ತಮ್ಮ ಬಳಿ ಮುಕ್ಕಾಲು ಕೆಜಿ ಚಿನ್ನ, ಹನ್ನೆರಡೂವರೆ ಕೆಜಿ ಬೆಳ್ಳಿ, 40 ಕ್ಯಾರೆಟ್‌ ವಜ್ರವಿದೆ ಎಂದು ಘೋಷಿಸಿಕೊಂಡಿದ್ದಾರೆ. 
ಸಿರಿವಂತ ಪತ್ನಿಗೂ ಸಾಲ ನೀಡಿರುವ ಸಿಎಂ ಕುಮಾರಸ್ವಾಮಿ
ಪ್ರಸ್ತುತ ಅನಿತಾ ಕುಮಾರಸ್ವಾಮಿ ಘೋಷಿಸಿಕೊಂಡಿರುವಂತೆ ಅನಿತಾ ಅವರು ಪತಿ ಕುಮಾರಸ್ವಾಮಿ ಅವರಿಂದ ಸುಮಾರು 6 ಕೋಟಿ 1 ಲಕ್ಷ ರೂ ಸಾಲ ಪಡೆದಿದ್ದಾರಂತೆ. ಅಚ್ಚರಿ ವಿಚಾರವೆಂದರೆ ಕುಮಾರಸ್ವಾಮಿ ಅವರ ಹೆಸರಿನಲ್ಲಿ ಯಾವುದೇ ರೀತಿಯ ವಾಹನಗಳಿಲ್ಲ. 
ಕುಮಾರಸ್ವಾಮಿ ಕೃಷಿ ಆದಾಯವಾಗಿ 2017-18ನೇ ಸಾಲಿನಲ್ಲಿ 12ಲಕ್ಷ 46ಸಾವಿರ ರೂ.ಗಳಿಸಿದ್ದಾರೆ. ಹಿಂದಿನ ಸಾಲಿನಲ್ಲಿ ವಾರ್ಷಿಕ ಕೃಷಿ ಆದಾಯ 41ಲಕ್ಷ 63 ಸಾವಿರ ರೂ.ಗಳಾಗಿತ್ತು. 
ಎಚ್ ಡಿಕೆ ಕುಟುಂಬದ ಆಸ್ತಿ ಮೌಲ್ಯ
ಕುಮಾರಸ್ವಾಮಿ ಅವರ ಚರಾಸ್ತಿ- 7.8 ಕೋಟಿ, ಸ್ಥಿರಾಸ್ತಿ 35.10 ಕೋಟಿ, ಹೂಡಿಕೆ 3 ಸಾವಿರ, ಠೇವಣಿ 22.25 ಲಕ್ಷ, ಸಾಲ ನೀಡಿಕೆ 6.97 ಕೋಟಿ, ಚಿನ್ನಾಭರಣ ಮೌಲ್ಯ 24.52 ಲಕ್ಷ, ಕೈಯಲ್ಲಿರುವ ನಗದು 12 ಲಕ್ಷ, ವಾರ್ಷಿಕ ಆದಾಯ 15.72 ಲಕ್ಷ, ಪಡೆದ ಸಾಲ 2.94 ಕೋಟಿ. ಅನಿತಾ ಕುಮಾರಸ್ವಾಮಿ ಚರಾಸ್ತಿ- 94.22 ಕೋಟಿ, ಸ್ಥಿರಾಸ್ತಿ 30 ಕೋಟಿ, ಹೂಡಿಕೆ 69.79 ಕೋಟಿ, ಠೇವಣಿ 1.90 ಕೋಟಿ, ಸಾಲ ನೀಡಿಕೆ 17.6 ಕೋಟಿ, ಚಿನ್ನಾಭರಣ ಮೌಲ್ಯ 93.33 ಲಕ್ಷ, ಕೈಯಲ್ಲಿರುವ ನಗದು 32 ಲಕ್ಷ, ವಾರ್ಷಿಕ ಆದಾಯ 76.35 ಲಕ್ಷ, ಪಡೆದ ಸಾಲ 8.14 ಕೋಟಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.