ಅನಂತಕುಮಾರ್ ಹೆಗಡೆ ಒಬ್ಬ ಲೋಫರ್: ಆನಂದ್ ಅಸ್ನೋಟಿಕರ್ ಮತ್ತೆ ಸಮರ್ಥನೆ
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಒಬ್ಬ ಲೋಫರ್, ದೇಶಕಂಡ ನಾಲಾಯ್ಕ್ ಎಂದು ನಾನು ಈ ಹಿಂದೆ...

Published On :
ಕಾರವಾರ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಒಬ್ಬ ಲೋಫರ್, ದೇಶಕಂಡ ನಾಲಾಯ್ಕ್ ಎಂದು ನಾನು ಈ ಹಿಂದೆ ಹೇಳಿಕೆ ನೀಡಿದ್ದೆ. ಈಗ ಆ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಳ್ಳುತ್ತಿದ್ದೇನೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರು ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಆನಂದ್ ಅಸ್ನೋಟಿಕರ್ ಅವರು, ಅನಂತಕುಮಾರ್ ಹೆಗಡೆ ಅವರು ರಾಜಕೀಯಕ್ಕೆ ಸೇವೆ ಮಾಡಲು ಬಂದಿಲ್ಲ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ. ಸಮಾಜ ಸೇವೆ ರಾಜಕೀಯದ ಬುನಾದಿ. ಆದರೆ ಅನಂತಕುಮಾರ್ ಹೆಗಡೆ ಸಮಾಜ ಸೇವೆ ಮಾಡಲು ಬಂದಿಲ್ಲ ಎನ್ನುತ್ತಿದ್ದಾರೆ ಎಂದರು.
ಅನಂತಕುಮಾರ್ ಹೆಗಡೆ ಮಾಧ್ಯಮಗಳಿಗೆ ಏನು ಬೇಕಾದರೂ ಬರೆಯಿರಿ ಎನ್ನುವ ಮೂಲಕ ಮಾಧ್ಯಮಕ್ಕೆ ಅಪಚಾರ ಮಾಡುತ್ತಿದ್ದಾರೆ. ಏನು ಬೇಕಾದರೂ ಬರೆಯುವುದು ಮಾಧ್ಯಮದ ಕೆಲಸಾನಾ? ಎಂದು ಪ್ರಶ್ನಿಸಿದರು.
ಪರೇಶ್ ಮೆಸ್ತಾ ಸಾವಿನ ಮೇಲೆ ರಾಜಕೀಯ ಮಾಡುತ್ತಿರುವ ಅನಂತಕುಮಾರ್ ಹೆಗಡೆ, ಹಿಂದೂಳಿದ ವರ್ಗದ ಯುವಕರ ಕೈಗೆ ಕತ್ತಿ ಕೊಟ್ಟಿದ್ದಾರೆ. ಆ ಯುವಕರ ಮೇಲಿನ ಪ್ರಕರಣಗ ಬಗ್ಗೆ ಅವರು ಈಗ ಮಾತನಾಡುತ್ತಿಲ್ಲ ಎಂದು ಆನಂದ್ ಅಸ್ನೋಟಿಕರ್ ಆರೋಪಿಸಿದರು.
ನೀಚ ನಾಲಾಯಕ್ ಸಚಿವ ಅಂತ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಸಚಿವ ಹೆಗಡೆ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


