ರಾಜಕೀಯ

ರಾಹುಲ್ ಗಾಂಧಿ ಸಂವಾದದಲ್ಲಿ ಭಾಗವಹಿಸದಂತೆ ಎಚ್ಎಎಲ್ ನೌಕರರಿಗೆ ಸೂಚನೆ: ಕಾಂಗ್ರೆಸ್ ಆರೋಪ

ರಾಫೆಲ್ ಯುದ್ಧ ವಿಮಾನ ಖರೀದಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ್ಯ ರಾಹುಲ್ ಗಾಂಧಿ...

ರಾಹುಲ್ ಗಾಂಧಿ ಸಂವಾದದಲ್ಲಿ ಭಾಗವಹಿಸದಂತೆ ಎಚ್ಎಎಲ್ ನೌಕರರಿಗೆ ಸೂಚನೆ: ಕಾಂಗ್ರೆಸ್ ಆರೋಪ
ರಾಹುಲ್ ಗಾಂಧಿ
Published On :
ಬೆಂಗಳೂರು: ರಾಫೆಲ್ ಯುದ್ಧ ವಿಮಾನ ಖರೀದಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ್ಯ ರಾಹುಲ್ ಗಾಂಧಿ ಅವರು ನಾಳೆ ಬೆಂಗಳೂರಿನ ಎಚ್ಎಎಲ್ ನೌಕರರೊಂದಿಗೆ ಸಂವಾದ ನಡೆಸಲು ಉದ್ದೇಶಿಸಿದ್ದಾರೆ. ಆದರೆ ರಕ್ಷಣಾ ಇಲಾಖೆಯ ಅಂಗ ಸಂಸ್ಥೆಯಾದ ಎಚ್ಎಎಲ್ ಆಡಳಿತ ಮಂಡಳಿ, ರಾಹುಲ್ ಸಂವಾದದಲ್ಲಿ ಭಾಗವಹಿಸದಂತೆ  ತನ್ನ ನೌಕರರಿಗೆ ಸೂಚಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಎಚ್ಎಎಲ್ ಆಡಳಿತ ಮಂಡಳಿ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮ ತಡೆಯಲು ಯತ್ನಿಸುತ್ತಿದೆ ಮತ್ತು ಸಂವಾದದಲ್ಲಿ ಭಾಗವಹಿಸದಂತೆ ನೌಕರರಿಗೆ ಸೂಚಿಸಿರುವುದಾಗಿ ಕಾಂಗ್ರೆಸ್ ನಾಯಕ ರಿಜ್ವಾನ್ ಹರ್ಷದ್ ಅವರು ಆರೋಪಿಸಿದ್ದಾರೆ.
ಈ ಸಂವಾದವನ್ನು ಕಾಂಗ್ರೆಸ್ ಪಕ್ಷ ಆಯೋಜಿಸಿಲ್ಲ. ಅಲ್ಲಿನ ನೌಕರರೇ ತಮ್ಮನ್ನು ಭೇಟಿ ಮಾಡುವಂತೆ ಬಹಳ ದಿನಗಳ ಹಿಂದೆಯೇ ರಾಹುಲ್ ಗಾಂಧಿಗೆ ಮನವಿ ಮಾಡಿದ್ದರು ಎಂದು ಹರ್ಷದ್ ಹೇಳಿದ್ದಾರೆ.
ರಾಫೆಲ್‌ ಯುದ್ಧ ವಿಮಾನ ಸಿದ್ಧಪಡಿಸುವ ಹೊಣೆಯನ್ನು ಎಚ್‌ಎಎಲ್‌ಗೆ ವಹಿಸಲು ಯುಪಿಎ ಅವಧಿಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ಕೇಂದ್ರ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಈ ಒಪ್ಪಂದವನ್ನು ಮುರಿದು ರಿಲಯನ್ಸ್‌ಗೆ ರಾಫೇಲ್‌ ಡೀಲ್‌ ಕೊಡಿಸಿರುವುದಾಗಿ ರಾಹುಲ್‌ ಗಾಂಧಿ ಆರೋಪಿಸಿದ್ದರು. ಇದರ ಬೆನ್ನಿಗೇ ಎಚ್‌ಎಎಲ್‌ ನೌಕರರೊಂದಿಗೆ ಸಂವಾದ ನಡೆಸಲು ರಾಹುಲ್‌ ಮುಂದಾಗಿರುವುದು ಈ ವಿವಾದದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯಲಿದೆಯೇ ಎಂಬ ಪ್ರಶ್ನೆ ಮೂಡುವಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.