ರಾಜಕೀಯ

ಅಂಬರೀಷ್ ನಿಧನ: ಪ್ರಬಲ ಒಕ್ಕಲಿಗ ನಾಯಕನಿಲ್ಲದೇ ಮಂಡ್ಯ ಕಾಂಗ್ರೆಸ್ ಅನಾಥ!

ರೆಬೆಲ್ ಸ್ಟಾರ್ ಅಂಬರೀಷ್ ನಿಧನದಿಂದ ಸಿನಿಮಾ ರಂಗಕ್ಕೆ ಭರಿಸಲಾರದ ನಷ್ಟ ಉಂಟಾಗಿದೆ, ಹಾಗೆಯೇ ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪ್ರಬಲ ...

ಅಂಬರೀಷ್ ನಿಧನ: ಪ್ರಬಲ ಒಕ್ಕಲಿಗ ನಾಯಕನಿಲ್ಲದೇ ಮಂಡ್ಯ ಕಾಂಗ್ರೆಸ್ ಅನಾಥ!
ಅಂಬರೀಷ್
Published On :
ಮೈಸೂರು:  ರೆಬೆಲ್ ಸ್ಟಾರ್ ಅಂಬರೀಷ್ ನಿಧನದಿಂದ ಸಿನಿಮಾ ರಂಗಕ್ಕೆ ಭರಿಸಲಾರದ ನಷ್ಟ ಉಂಟಾಗಿದೆ, ಹಾಗೆಯೇ ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪ್ರಬಲ ನಾಯಕನನ್ನು ಕಳೆದುಕೊಂಡು ಅನಾಥವಾದಂತ ಪರಿಸ್ಥಿತಿ ಎದುರಾಗಿದೆ,
ಮಂಡ್ಯ ಮತ್ತು ಮೈಸೂರು ಭಾಗದ ಕಾಂಗ್ರೆಸ್  ನಲ್ಲಿ ಭಾರೀ ಸಂಖ್ಯೆಯಲ್ಲಿ ದಲಿತ ಮತ್ತು ಹಿಂದುಳಿದ ವರ್ಗದ ನಾಯಕರಿದ್ದಾರೆ., ಆದರೆ ಕೆಲವೇ ಮಂದಿ ಮಾತ್ರ ಪ್ರಬಲ ಒಕ್ಕಲಿಗ ಮುಖಂಡರಿದ್ದಾರೆ,. ಕಾಂಗ್ರೆಸ್ ಪ್ರಬಲ ಲಿಂಗಾಯತ ಮುಖಂಡ ಎಚ್.ಎಸ್ ಮಹಾದೇವ ಪ್ರಸಾದ್ ಅವರನ್ನು ಕಳೆದುಕೊಂಡಿದೆ, ಹಾಗೂ ಮತ್ತೊಬ್ಬ ಹಿರಿಯ ಪ್ರಭಾವಿ ನಾಯಕಗ ಎಸ್.ಎಂ ಕೃಷ್ಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು ಪಕ್ಷಕ್ಕೆ ಭಾರೀ ಹಿನ್ನಡೆ ಉಂಟಾಗಿದೆ.
ಅಂಬರೀಷ್ ನಿಧನದಿಂದ ಕಾಂಗ್ರೆಸ್ ಗೆ ಮತ್ತಷ್ಟು ಹಿನ್ನಡೆ ಉಂಟಾಗಿದೆ, ಅಪಾರ ಪ್ರಮಾಣದಲ್ಲಿ ಅಂಬರೀಷ್ ಗೆ ಹಿಂಬಾಲಕರಿದ್ದರು. ಮಂಡ್ಯದಲ್ಲಿ  ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಪ್ರಬಲ ಒಕ್ಕಲಿಗ ನಾಯಕಿಯಾಗಿ ಬೆಳೆಯುವ ಅವಕಾಶಗಳಿದ್ದವು.ಆದರೇ 2014ರ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ರಮ್ಯ ಮಂಡ್ಯ ಜಿಲ್ಲೆ ಕಡೆ ತಲೆ ಹಾಕಲಿಲ್ಲ, 
ಇನ್ನೂ ಇತ್ತೀಚೆಗೆ ನಡೆದ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮಂಡ್ಯ ಸೀಟನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವುದು ಸ್ಥಳೀಯ ಕಾಂಗ್ರೆಸ್ ನಾಯಕರುಗಳ ಹಾಗೂ ಕಾರ್ಯಕರ್ತ ಅಸಮಾಧಾನಕ್ಕೆ ಕಾರಣವಾಗಿದೆ. 
ತಮ್ಮನ್ನು ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಅಸಮಾಧಾನಗೊಂಡಿದ್ದ ಅಂಬರೀಷ್ ಸಕ್ರಿಯ ರಾಜಕಾರಣದಲ್ಲಿ ಆಸಕ್ತಿ ಕಳೆದುಕೊಂಡಿದ್ದರು. ಆರೋಗ್ಯ ಸಮಸ್ಯೆಯಿಂದಾಗಿ ಇತ್ತೀಚೆಗೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ದಿಸಲು ನಿರಾಕರಿಸಿದ್ದರು. ಹೀಗಾಗಿ ಅವರು ಮಂಡ್ಯದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರಲಿಲ್ಲ, ಇದರ ಪರಿಣಾಮ ಇಡೀ ಮಂಡ್ಯ ಜಿಲ್ಲೆ ಜೆಡಿಎಸ್ ಪಾಲಾಯಿತು,
2013 ರಲ್ಲಿ ಮಂಡ್ಯ ಜಿಲ್ಲೆಯಿಂದ ಕಾಂಗ್ರೆಸ್ ನಿಂದ ಅಂಬರೀಷ್ ಮತ್ತು ಪಿಎಂ ನರೆಂದ್ರ ಸ್ವಾಮಿ ಇಬ್ಬರು ಆಯ್ಕೆಯಾಗಿದ್ದರು. ಅದಾದ ನಂತರ ನಡೆದ ಹಲವು ಸ್ಥಳೀಯ ಚುನಾವಣೆ ಮತ್ತು ಸಹಕಾರ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹಿಡಿತ ಸಾಧಿಸಿತ್ತು, ಆದರೆ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಸೋಲನುಭವಿಸಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.