ರೆಡ್ಡಿ- ಬಿಎಸ್ ವೈ ಭೇಟಿ ಬೂಟಾಟಿಕೆ: ಯಡಿಯೂರಪ್ಪ ಸಿಎಂ ಆಗುವ ಹಗಲುಗನಸು ಕಾಣುತ್ತಿದ್ದಾರೆ: ಜಮೀರ್
ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮತ್ತು ಮಾಜಿ ಸಿಎಂ ಬಿ,ಎಸ್ ಯಡಿಯೂರಪ್ಪ ಅವರ ಭೇಟಿಯಿಂದ ಯಾವುದೇ ಅಚ್ಚರಿಯಾಗಿಲ್ಲ ಎಂದು ಆಹಾರ ಮತ್ತು ...

Published On :
ಉಡುಪಿ: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮತ್ತು ಮಾಜಿ ಸಿಎಂ ಬಿ,ಎಸ್ ಯಡಿಯೂರಪ್ಪ ಅವರ ಭೇಟಿಯಿಂದ ಯಾವುದೇ ಅಚ್ಚರಿಯಾಗಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ಧನ ರೆಡ್ಡಿ ಜೊತೆ ಬಿಜೆಪಿ ಸಂಬಂಧದ ಬಗ್ಗೆ ಲೇವಡಿಯಾಡಿದರು, ಕೆಟ್ಟ ಘಳಿಗೆ ಬಂದಾಗ ಯು ಟರ್ನ್ ಹೊಡೆಯುವುದು ಬಿಜೆಪಿಯವರಿಗೆ ಮಾಮೂಲಿ, ಬಿಜೆಪಿಯವರು ಚೆನ್ನಾಗಿದ್ದರೆ ಮಾತ್ರ ಜೊತೆಗಿರುತ್ತಾರೆ. ಹೆಚ್ಚು ಕಡಿಮೆ ಆದರೆ ಮಾತ್ರ ಬಿಟ್ಟು ಬಿಡುತ್ತಾರೆ ಎಂದು ಟೀಕಿಸಿದ್ದಾರೆ.
ಜನಾರ್ದನ ರೆಡ್ಡಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಜನಾರ್ಧನ ರೆಡ್ಡಿ ಬಿಜೆಪಿಯಲ್ಲೇ ಇದ್ದಾರೆ. ಜನಾರ್ದನ ರೆಡ್ಡಿ ಅವರು ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿದ್ದಾರೆ.
ಬಿ ಎಸ್ ಯಡಿಯೂರಪ್ಪ ಕಳೆದ ಮೂರ್ನಾಲ್ಕು ತಿಂಗಳಿಂದ ಬಿಎಸ್ವೈ ನಿದ್ದೆ ಮಾಡಿಲ್ಲ, ಮುಖ್ಯಮಂತ್ರಿ ಆದೆ ಎಂದು ಬಿಎಸ್ವೈ ಕನಸು ಕಾಣುತ್ತಾರಂತೆ. ಕನಸು ಕಾಣುವುದು ತಪ್ಪಲ್ಲ. ಆದರೆ, ಎಲ್ಲರೂ ರಾತ್ರಿ ಕನಸು ಕಂಡರೆ ಬಿಎಸ್ವೈ ಅವರು ಹಗಲುಗನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಮಮಂದಿರ ಕಟ್ಟಲು ಮುಸಲ್ಮಾನರ ವಿರೋಧ ಇಲ್ಲ. ಲೋಕಸಭಾ ಚುನಾವಣೆ ಬಂದರೆ ಬಿಜೆಪಿಯವರಿಗೆ ರಾಮಮಂದಿರ ನೆನಪಾಗುತ್ತದೆ. ನಾಲ್ಕೂವರೆ ವರ್ಷದಲ್ಲಿ ರಾಮಮಂದಿರ ಜ್ಞಾಪಕಕ್ಕೆ ಬಂದಿಲ್ಲ ಎಂದು ಹೇಳಿದರು.
ಇನ್ನೂ ರಾಜ್ಯದಲ್ಲಿರುವ ಅಸ್ತಿತ್ವದಲ್ಲಿರುವ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ, ಮೈತ್ರಿ ಸರ್ಕಾರ ಐದು ವರ್ಷ ಪೂರ್ಣಗೊಳಿಸುತ್ತದೆ ಎಂದು ಭರವಸೆ ವ್ಯಕ್ತ ಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpಬಿಜೆಪಿZameer ahmed khanಜಮೀರ್ ಅಹ್ಮದ್ ಖಾನ್ಜನಾರ್ಧನ ರೆಡ್ಡಿBS Yadyurappaಬಿ.ಎಸ್ ಯಡ್ಯೂರಪ್ಪJanardhana\'Reddy
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


