ರಾಜಕೀಯ

ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಜನಾರ್ಧನ ರೆಡ್ಡಿಯ ಈ ಹೇಳಿಕೆ!

ಇತ್ತೀಚೆಗೆ ನಡೆದ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಸೋಲಿಗೆ ಮಾಜಿ ಸಚಿವರುಗಳಾದ ಜನಾರ್ಧಾನ ರೆಡ್ಡಿ ಮತ್ತು ವಿ.ಸೋಮಣ್ಣ ಅವರ...

ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಜನಾರ್ಧನ ರೆಡ್ಡಿಯ ಈ ಹೇಳಿಕೆ!
ಜನಾರ್ಧನ ರೆಡ್ಡಿ
Published On :
ಬೆಂಗಳೂರು: ಇತ್ತೀಚೆಗೆ ನಡೆದ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಸೋಲಿಗೆ ಮಾಜಿ ಸಚಿವರುಗಳಾದ ಜನಾರ್ಧಾನ ರೆಡ್ಡಿ ಮತ್ತು ವಿ.ಸೋಮಣ್ಣ ಅವರ ಅಪದ್ಧ ಹೇಳಿಕೆಗಳು ಕಾರಣ ಎಂದು ಹೇಳಲಾಗುತ್ತಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪಾಪಗಳಿಂದಾಗಿ ಅವರ ಮಗ  ರಾಕೇಶ್ ಸಿದ್ದರಾಮಯ್ಯ ಸತ್ತ ಎಂದು  ಜನಾರ್ದನ ರೆಡ್ಡಿ ಹೇಳಿದ್ದಾರೆ. ಇನ್ನೂ ಬಳ್ಳಾರಿ ಅಭ್ಯರ್ಥಿ ಜೆ.ಶಾಂತಾ ಅವರ ಪರ ಪ್ರಚಾರ ಮಾಡುವಾಗ ವಿ. ಸೋಮಣ್ಣ, ನಾಯಕ ಸಮುದಾಯದ ಮುಂದಿನ ಮುಖ್ಯಮಂತ್ರಿ ಶ್ರೀರಾಮುಲು ಅವರು ಎಂದು ಹೇಳಿಕೆ ನೀಡಿದ್ದರು. 
ಇತ್ತೀಚೆಗೆ ನಡೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಸೋಲಿಗೆ ಕಾರಣ ಹಾಗೂ ತಪ್ಪುಗಳನ್ನು ಬಿಜೆಪಿ ಪರಾಮರ್ಶಿಸಿದ್ದು, ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಬದಿಗೊತ್ತುತ್ತಿರುವುದನ್ನು ವಿರೋಧಿಸಿರುವ ಲಿಂಗಾಯತರು ಕಾಂಗ್ರೆಸ್ ಗೆ ಮತ ನೀಡಿದ್ದಾರೆ, 
ಹಾಗೆಯೇ ಜನಾರ್ದನ ರೆಡ್ಡಿ ನೀಡಿದ ಹೇಳಿಕೆ ಕೇವಲ ಕುರುಬ ಮತದಾರರು ಮಾತ್ರವಲ್ಲ,  ಕಾಂಗ್ರೆಸ್ ಗೆ ನಾಯಕ ಸಮುದಾಯದವರ ಮತಗಳನ್ನು ಸೆಳೆಯಲು ಕಾರಣವಾಯಿತು, ಜೊತೆಗೆ ಬಳ್ಳಾರಿಯಲ್ಲಿ ಶ್ರೀರಾಮುಲು ಒನ್ ಮ್ಯಾನ್ ಶೋ ಕೂಡ ಸೋಲಿಗೆ ಕಾರಣ ಎಂದು ಹೇಳಲಾಗಿದೆ.
ಆದರೆ ಮಂಡ್ಯ ಲೋಕಸಬೆ ಕ್ಷೇತ್ರದಲ್ಲಿ ಬಿಜೆಪಿ ಗಣನೀಯ ಸಾಧನೆ ಮಾಡಿದೆ,.ಹೊಸ ಮುಖ ಡಾ.,ಸಿದ್ದರಾಮಯ್ಯ ಮಂಡ್ಯ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ ಎಂದು ಬಿಜೆಪಿ ಆಂತರಿಕ ವರದಿ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.