ಯಡಿಯೂರಪ್ಪ ರೀತಿ ಮೋದಿಗೂ ಸದ್ಯದಲ್ಲೇ ಕಾದಿದೆ 'ಶಾಸ್ತಿ': ಸಿದ್ದರಾಮಯ್ಯ
ರಾಫೆಲ್ ಯುದ್ದ ವಿಮಾನ ಖರೀದಿ ಹಗರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವದ ಪಾತ್ರವಿದೆ. ಯಡಿಯೂರಪ್ಪ ರೀತಿ ಮೋದಿಗೂ ಸದ್ಯದಲ್ಲೇ ಶಿಕ್ಷೆ ಕಾಯ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜಮಖಂಡಿ : ರಾಫೆಲ್ ಯುದ್ದ ವಿಮಾನ ಖರೀದಿ ಹಗರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವದ ಪಾತ್ರವಿದೆ. ಯಡಿಯೂರಪ್ಪ ರೀತಿ ಮೋದಿಗೂ ಸದ್ಯದಲ್ಲೇ ಶಿಕ್ಷೆ ಕಾಯ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಜಮಖಂಡಿಯಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮೋದಿ ಹಿಂದಿನ ಕಾಂಗ್ರೆಸ್ ಸರ್ಕಾರನ್ನು ಶೇ, 10 ರಷ್ಟು ಕಮಿಷನ್ ಸರ್ಕಾರ ಎಂದಿದ್ದರು. ಆದರೆ. ರಾಫೆಲ್ ಯುದ್ದ ವಿಮಾನ ಹಗರಣದಲ್ಲಿ ಫ್ರಾನ್ಸ್ ನಿಂದ ಪಡೆದ ಕಮೀಷನ್ ಬಗ್ಗೆ ಗೌಪ್ಯವಾಗಿಡಲಾಗಿದೆ. ನರೇಂದ್ರ ಮೋದಿ ದೇಶದ ಜನರನ್ನು ವಂಚಿಸಲು ಸಾಧ್ಯವಿಲ್ಲ ಎಂದರು.
ರಾಫೆಲ್ ಯುದ್ಧ ವಿಮಾನ ಖರೀದಿ ಸಂಬಂಧ ಫ್ರಾನ್ಸ್ ಸರ್ಕಾರದೊಂದಿಗೆ ಅಕ್ರಮ ವ್ಯವಹಾರ ನಡೆಸಿರುವ ಜವಾಬ್ದಾರಿಯನ್ನು ಮೋದಿ ಹೊರಬೇಕಾಗುತ್ತದೆ. ಸುಪ್ರೀಂಕೋರ್ಟ್ ನಿಂದ ಶಿಕ್ಷೆಗೊಳಗಾಗುತ್ತಾರೆ ಎಂದು ಹೇಳಿದರು.
ಅಂಬಾನಿ, ಅದಾನಿ, ನೀರವ್ ಮೋದಿ, ಮಲ್ಯ ಮತ್ತಿತರ ದೊಡ್ಡ ಉದ್ಯಮಿಗಳಿಗೆ ಮಾತ್ರ ಮೋದಿ ಆಡಳಿತ ಉತ್ತಮ ದಿನವಾಗಿದೆ. ಬಡವರು, ಸಾಮಾನ್ಯವರ್ಗದವರು, ಮಹಿಳೆಯರು ಮತ್ತು ಯುವಕರು ಸಂಕಷ್ಟದಲ್ಲಿದ್ದಾರೆ. ಮಧ್ಯಮ ವರ್ಗದವರಿಗೆ ಸಹಾಯ ಮಾಡುತ್ತಾರೆ ಎಂಬ ಅತಿ ಭರವಸೆಯೊಂದಿಗೆ ಜನರು ಮೋದಿಯನ್ನು ಗೆಲ್ಲಿಸಿದರು. ಆದರೆ. ಅವರನ್ನು ಮೋದಿ ವಂಚಿಸಿದ್ದಾರೆ. ಇದೇನಾ ಅಚ್ಚೇ ದಿನಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


