ಮಂಡ್ಯ: ಕುರುಬ ಮತದಾರರ ಓಲೈಕೆಗೆ ಜೆಡಿಎಸ್-ಬಿಜೆಪಿ ಹರಸಾಹಸ
ಮಂಡ್ಯ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ಪ್ರಚಾರಕ್ಕೆ ಇನ್ನೂ ಕೇವಲ ಒಂದೇ ಒಂದುದಿನ ಮಾತ್ರ ಬಾಕಿಯಿದೆ, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರುಗಳಿಗೆ ಪಕ್ಷದ ...

Published On :
ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ಪ್ರಚಾರಕ್ಕೆ ಇನ್ನೂ ಕೇವಲ ಒಂದೇ ಒಂದುದಿನ ಮಾತ್ರ ಬಾಕಿಯಿದೆ, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರುಗಳಿಗೆ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸುವುದೇ ದೊಡ್ಡ ಸವಾಲಾಗಿದೆ. ಸಮ್ಮಿಶ್ರ ಸರ್ಕಾರದ ಧರ್ಮದ ಪ್ರಕಾರ ಎರಡು ಪಕ್ಷಗಳು ಒಂದಾಗಿ ಉಪ ಚುನಾವಣೆ ಎದುರಿಸುತ್ತಿವೆ, ಆದರೆ ಈ ಮೈತ್ರಿಗೆ ಸ್ಥಳೀಯ ಮಟ್ಟದಲ್ಲಿ ತೀವ್ರ ವಿರೋಧ ಇನ್ನೂ ಮುಂದುವರಿದಿದೆ.
ಜೆಡಿಎಸ್ ಅಭ್ಯರ್ಥಿ ಎಲ್ ಆರ್ ಶಿವರಾಮೇಗೌಡ ಅವರನ್ನು ಕುರುಬ ಸಮುದಾಯ ವಿರೋಧ ವ್ಯಕ್ತ ಪಡಿಸಿದೆ,. ಇದರ ಲಾಭ ಪಡೆಯಲು ಹವಣಿಸುತ್ತಿರುವ ಬಿಜೆಪಿ ಕುರುಬ ಸಮುದಾಯದ ಮತಗಳನ್ನು ತನ್ನತ್ತ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ.
ಮಂಡ್ಯ ದ 8 ವಿಧಾನಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಲು ಕುರುಬ ಸಮುದಾಯ ಸಹಾಯಮಾಡಿತ್ತು,. ಕಳೆದ ವಿಧನಾಸಭೆ ಚುನಾವಣೆಯಲ್ಲಿ ಕುರುಬ ಸಮುದಾಯ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿತ್ತು, ಆದರೆ ಈ ಬಾರಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಿರುವುದಕ್ಕೆ ಅ,ಮಾಧಾನ ಹೊಂದಿದೆ.
ಕೆ.ಆರ್ ನಗರ ಶಾಸಕ ಹಾಗೂ ಸತಚಿವ ಸಾ.ರಾ ಮಹೇಶ್ ಕುರುಬ ವಿರೋಧಿ, ಸಿದ್ದರಾಮಯ್ಯ ಭಾಗವಹಿಸುವ ಯಾವುದೇ ಸುಮದಾಯದ ಕಾರ್ಯಕ್ರಮಗಳಲ್ಲಿ ಮಹೇಶ್ ಪಾಲ್ಗೊಳ್ಳುವುದಿಲ್ಲ,. ಶಿಷ್ಟಾಚಾರ ಉಲ್ಲಂಘಿಸಿ ಮಹೇಶ್ ಅವರ ಹೆಸರನ್ನು ಕಾಂಗ್ರೆಸ್ ಪರಾಜಿತ ಅಭ್ಯರ್ಥಿಯ ಹೆಸರಿನ ಕೆಳಗೆ ಮುದ್ರಿಸಲಾಗಿತ್ತು. ಈ ವಿಷಯ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಚುನಾವಣೆ ಬಹಿಷ್ಕರಿಸುವ ಹಂತ ತಲುಪಿತ್ತು.ನಾನು ಎಲ್ಲಾ ಸಮುದಾಯದವರ ಮತಗಳಿಂದ ಆರಿಸಿ ಬಂದಿದ್ದೇನೆ, ಹೀಗಾಗಿ ತಾವು ಸಮುದಾಯದ ಆಧಾರದ ಮೇಲೆ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಎಂದು ಮಹೇಶ್ ಹೇಳಿದ್ದಾರೆ.
ಮಂಡ್ಯದಲ್ಲಿ ಕುರುಬ ಸಮುದಾಯದ ಅಸಮಾಧಾನ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಿಗೆ ಗಂಭೀರ ಸಂದೇಶ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎ,ಎಚ್ ವಿಶ್ವನಾಥ್ ಸರಣಿ ಸಭೆ ನಡೆಸಿದ್ದಾರೆ.
ಕುರುಬ ಸಮುದಾಯ ರಾಜಕೀಯವಾಗಿ ಅಸ್ಪೃಶ್ಯವಾಗಿದೆ, ಹೀಗಾಗಿ ಸಮುದಾಯ ಜಾತ್ಯಾತಾತೀ ಮತಗಳನ್ನು ವಿಭಜಿಸುವುದಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Siddaramaiahಸಿದ್ದರಾಮಯ್ಯKuruba communityಕುರುಬ ಸಮುದಾಯಸಾ.ರಾ ಮಹೇಶ್S R MaheshMandya Lok Sabha bypollಮಂಡ್ಯ ಉಪ ಚುನಾವಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


