ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಮಂತ್ರಿಗಿರಿ ಖಾಯಂ ಮಾಡಿಕೊಂಡಿರುವ ಪರ್ಮನೆಂಟ್ ಸಚಿವರು ಇವರು!
: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸಮಯದಲ್ಲೂ ಸಚಿವಗಿರಿ ಖಾಯಂ ಮಾಡಿಕೊಂಡಿರುವ ಕೆಲ ಮುಖಂಡರು ಶಾಶ್ವತ ಸಚಿವರಾಗಿದ್ದಾರೆ. ...

Published On :
ಕೋಲಾರ: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸಮಯದಲ್ಲೂ ಸಚಿವಗಿರಿ ಖಾಯಂ ಮಾಡಿಕೊಂಡಿರುವ ಕೆಲ ಮುಖಂಡರು ಶಾಶ್ವತ ಸಚಿವರಾಗಿದ್ದಾರೆ. ಒಂದು ವೇಳೆ ಕಾಂಗ್ರೆಸ್ ತನ್ನ ನೀತಿಯನ್ನು ಬದಲಿಸಿಕೊಂಡರೇ ಈ ಪರ್ಮನೆಂಟ್ ಸಚಿವರು ತಮ್ಮ ಸ್ಥಾನವನ್ನು ಹೊಸಬರಿಗೆ ಅವಕಾಶ ನೀಡಬೇಕಾಗುತ್ತದೆ.
ಮೂರು ಬಾರಿಗೂ ಹೆಚ್ಚಿಗೂ ಶಾಸಕರಾಗಿ ಆಯ್ಕೆಯಾಗಿರುವವರಿಗೆ ಸಂಪುಟದಲ್ಲಿ ಅವಕಾಶ ನೀಡುವ ಉದ್ದೇಶದಿಂದ ಈ ಪರ್ಮನೆಂಟ್ ಸಚಿವರಿಗೆ ಹುದ್ದೆ ಬಿಟ್ಟುಕೊಡುವಂತೆ ಕಾಂಗ್ರೆಸ್ ಪಕ್ಷ ಸೂಚಿಸಲಿದೆ ಎಂದು ಮೂಲಗಳು ತಿಳಿಸಿವೆ.
ಒಬ್ಬರಿಗೆ ಯಾವಾಗಲೂ ಅಧಿಕಾರ ನೀಡುವ ಬದಲು ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ನಾಯಕರಿಗೆ ಸಚಿವ ಸ್ಥಾನ ನೀಡಿದಂತಾಗುತ್ತದೆ, ಸಚಿವ ಸ್ಥಾನದ ಆಕಾಂಕ್ಷಿಗಳಾದ ಹಿರಿಯ ಶಾಸಕರಿಗೂ ಮಂತ್ರಿಯಾಗುವ ಅವಕಾಶ ಸಿಗುತ್ತದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ 15 ದಿನಗಳು ಕಳೆದರೂ,ಸರ್ಕಾರ ಸಂಪೂರ್ಣವಾಗಿ ರಚನೆಯಾಗಿಲ್ಲ, ಹಲವು ಕಾಂಗ್ರೆಸ್ ನಾಯಕರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಸತತವಾಗಿ ಶಾಸಕರಾಗಿ ಆಯ್ಕೆಯಾಗಿದ್ದರೂ ಇದುವರೆಗೂ ಒಮ್ಮೆಯೂ ಸಚಿವರಾಗದೇ ಉಳಿದಿರುವ ಶಾಸಕರುಗಳಿಗೆ ಈ ಬಾರಿ ಅವಕಾಶ ನೀಡುವಂತೆ ಕಾಂಗ್ರೆಸ್ ಸಭೆಯಲ್ಲಿ ಚರ್ಚಿಸಲಾಗಿದೆ, ಹೀಗಾಗಿ ಪರ್ಮನೆಂಟ್ ಸಚಿವರು ತಮ್ಮ ಹುದ್ದೆ ತ್ಯಾಗ ಮಾಡುವ ಸಂದರ್ಭ ಒದಗಿ ಬಂದರೂ ಬರಬಹುದು.
ಈ ಐಡಿಯಾದಿಂದ ಹೊಸ ಮುಖಗಳು ಸಂಪುಟದಲ್ಲಿ ಸ್ಥಾನ ಪಡೆಯಲಿವೆ. ಮೂರು ಬಾರಿ ಆಯ್ಕೆಯಾಗರುವ ಶಾಸಕರು 2019ರ ವರೆಗೂ ಕೆಲಸ ಮಾಡಲಿ ಎಂದು ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ, ಸಿದ್ದರಾಮಯ್ಯ ಸಂಪುಟದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಶಾಸಕರು ಸಚಿವ ಸ್ಥಾನದಿಂದ ತೊರೆಯುವಂತೆ ಹೇಳಲಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ,ಸಿ ವೇಣುಗೋಪಾಲ್ ಮತ್ತು ಗುಲಾಮ್ ನಬಿ ಆಜಾದ್ ಅವರ ಜೊತೆ ನಡೆದ ಸರಣಿ ಸಭೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಈ ಸಲಹೆ ನೀಡಿದ್ದಾರೆ, ಹಲವು ಬಾರಿ ಸಚಿವರಾಗಿದ್ದರೂ ಮತ್ತೆ ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತಿರುವ ಒಕ್ಕಲಿಗರ ಪ್ರಬಾವಿ ನಾಯಕ ಡಿ,ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಪಟ್ಟು ಹಿಡಿದಿದ್ದಾರೆ.
ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವ ಬದಲು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿ ಕೆಲಸ ಮಾಡುವಂತೆ ಶಾಸಕರುಗಳಿಗೆ ಕೆ.ಸಿ ವೇಣುಗೋಪಾಲ್ ತಿಳಿಸಿದ್ದಾರೆ. ವೇಣು ಗೋಪಾಲ್ ಮತ್ತು ಗುಲಾಂ ನಬಿ ಆಜಾದ್, ಈ ವಿಷಯವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ತಿಳಿಸಲಿದ್ದಾರೆ. 2019ರ ವರೆಗೆ ಕೆಲವರನ್ನು ಸಚಿವರನ್ನಾಗಿಸುವಂತೆ ಕೇಳುವ ಸಾಧ್ಯತೆಯಿದೆ.ಒಬ್ಬರ ನಂತರ ಒಬ್ಬರು ಸರದಿಯಲ್ಲಿ ಕೆಲವು ಶಾಸಕರಿಗೆ ಮಂತ್ರಿ ಸ್ಥಾನ ನೀಡುವಂತೆ ಅವಕಾಶ ಕೋರಿದ್ದಾರೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


