ರಾಜಕೀಯ

ನನಗೆ ಜನಾಶೀರ್ವಾದ ಇಲ್ಲ, ಪುಣ್ಯಾತ್ಮ ರಾಹುಲ್ ಗಾಂಧಿ ಅಧಿಕಾರ ನೀಡಿದರು: ಕುಮಾರ ಸ್ವಾಮಿ

ನನಗೆ ಸರ್ಕಾರ ರಚಿಸಲು ಜನತೆಯ ಆಶೀರ್ವಾದ ಇಲ್ಲ. ಪುಣ್ಯಾತ್ಮ ರಾಹುಲ್‌ ಗಾಂಧಿ ಒಂದು ಅವಕಾಶ ಕೊಟ್ಟಿದ್ದಾರೆ...

ನನಗೆ ಜನಾಶೀರ್ವಾದ ಇಲ್ಲ, ಪುಣ್ಯಾತ್ಮ ರಾಹುಲ್ ಗಾಂಧಿ ಅಧಿಕಾರ ನೀಡಿದರು: ಕುಮಾರ ಸ್ವಾಮಿ
ರಾಹುಲ್ ಗಾಂಧಿ ಮತ್ತು ಕುಮಾರ ಸ್ವಾಮಿ
Published On :
ಬೆಂಗಳೂರು: ನನಗೆ ಸರ್ಕಾರ ರಚಿಸಲು ಜನತೆಯ ಆಶೀರ್ವಾದ ಇಲ್ಲ. ಪುಣ್ಯಾತ್ಮ ರಾಹುಲ್‌ ಗಾಂಧಿ ಒಂದು ಅವಕಾಶ ಕೊಟ್ಟಿದ್ದಾರೆ ಎಂದು ಸಿಎಂ ಕುಮಾರ ಸ್ವಾಮಿ ಎಐಸಿಸಿ ಅಧ್ಯಕ್ಷರನ್ನು ಹಾಡಿ ಹೊಗಳಿದ್ದಾರೆ.
ರೈತ ಸಂಘಟನೆಗಳು ಹಾಗೂ ಪ್ರತಿನಿಧಿಗಳ ಜತೆಗೆ ವಿಧಾನಸೌಧದಲ್ಲಿ ಸುದೀರ್ಘ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಪುಣ್ಯಾತ್ಮ. ನನಗೆ ಮುಖ್ಯಮಂತ್ರಿ ಆಗಲು ಅವಕಾಶ ಕಲ್ಪಿಸಿದರು’   ಹೀಗಾಗಿ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ರೈತರಿಗೆ ಇದೊಂದು ಸುವರ್ಣವಕಾಶ,  ಇದನ್ನು ಸದುಪಯೋಗ ಪಡಿಸಿಕೊಳ್ಳಿ, ನಮ್ಮ ಜೊತೆ ನಿಲ್ಲಿ, ಚುನಾವಣೆ ಬಂದಾಗ ನಿಮಗೆ ಯಾರು ಬೇಕೋ ಅವರಿಗೆ ಮತ ನೀಡಿ, ಆದರೆ ಈಗ ಈ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ತಿಳಿಸಿದ್ದಾರೆ. 
ರೈತರ ಬಾಳಿಗೆ ನೆಮ್ಮದಿ ತರುವ ಕೆಲಸ ಮಾಡಲು ನನಗೊಂದು ಸುವರ್ಣ ಅವಕಾಶ ಸಿಕ್ಕಿದೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ನನಗೂ ರಾಜಕೀಯ ಮಾಡಲು ಗೊತ್ತಿದೆ’ ಎಂದು ಅವರು ಬಿಜೆಪಿಗೆ ತಿರುಗೇಟು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.