ಕರ್ನಾಟಕ ರಾಜಕೀಯದಲ್ಲಿ ಮತ್ತೆ ಲಿಂಗಾಯತ-ಒಕ್ಕಲಿಗ ಪ್ರಾಬಲ್ಯ
ಮುಖ್ಯಮಂತ್ರಿ ಹುದ್ದೆಯಿಂದ ಬಿ.ಎಸ್.ಯಡಿಯೂರಪ್ಪ ನಿರ್ಗಮಿಸಿದ ನಂತರ ಕರ್ನಾಟಕ ರಾಜಕೀಯದಲ್ಲಿ ...

ಮೈಸೂರು: ಮುಖ್ಯಮಂತ್ರಿ ಹುದ್ದೆಯಿಂದ ಬಿ.ಎಸ್.ಯಡಿಯೂರಪ್ಪ ನಿರ್ಗಮಿಸಿದ ನಂತರ ಕರ್ನಾಟಕ ರಾಜಕೀಯದಲ್ಲಿ ಲಿಂಗಾಯತ-ಒಕ್ಕಲಿಗ ರಾಜಕೀಯ ದ್ವೇಷ ಮತ್ತೆ ಚಿಗುರೊಡೆದಿದೆ.
ರಾಜ್ಯ ರಾಜಕೀಯದಲ್ಲಿ ಈ ಎರಡು ಸಮುದಾಯಗಳು ಪ್ರಮುಖ ಪಾತ್ರ ವಹಿಸುವುದರಿಂದ ಈ ಎರಡೂ ಸಮುದಾಯಗಳನ್ನು ಪ್ರತಿನಿಧಿಸುವ ರಾಜಕೀಯ ಮುಖಂಡರು ಒಟ್ಟಾಗಿ ರಾಜ್ಯವನ್ನು 42 ವರ್ಷಗಳ ಕಾಲ ಆಳಿದ್ದಾರೆ, ಅದರಲ್ಲಿ 21 ವರ್ಷ ವೀರಶೈವ-ಲಿಂಗಾಯತ ಮುಖಂಡರಾಗಿದ್ದಾರೆ.
2008ರಲ್ಲಿ ಹೆಚ್ ಡಿ ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರ ಆಳ್ವಿಕೆಯಲ್ಲಿ ಬಿ.ಎಸ್.ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡಲು ನಿರಾಕರಿಸಿದ ನಂತರ ಬಿಜೆಪಿ-ಜೆಡಿಎಸ್ ನಡುವೆ ಸಂಬಂಧ ಅಷ್ಟೊಂದು ಸೌಹಾರ್ದಯುತವಾಗಿಲ್ಲದಿದ್ದರೂ ಕೂಡ ತಮ್ಮ ಹಿಂದಿನ ದ್ವೇಷ ಮತ್ತು ಕಹಿನೆನಪುಗಳನ್ನು ಮರೆತು ಈ ಬಾರಿಯ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಅಹಿಂದ ತತ್ವವನ್ನು ಸೋಲಿಸುವುದರತ್ತ ಗಮನ ಹರಿಸಿದ್ದರು.
ಹಳೆ ಮೈಸೂರು ಪ್ರಾಂತ್ಯದ ಚಾಮುಂಡೇಶ್ವರಿ, ಮಳವಳ್ಳಿ, ಟಿ ನರಸೀಪುರ ಮೊದಲಾದ ಕಡೆಗಳಲ್ಲಿ ಬಿಜೆಪಿ ಪರ ಅನುಕಂಪದಾರರು ಕಾಂಗ್ರೆಸ್ ನ್ನು ಸೋಲಿಸಲು ಜೆಡಿಎಸ್ ಪರ ಮತ ಹಾಕಿದರು. ಆದರೆ ಚುನಾವಣೆ ಫಲಿತಾಂಶ ಬಂದ ಮೇಲೆ ರಾಜಕೀಯ ಪರಿಸ್ಥಿತಿ ಸಂಪೂರ್ಣ ಬದಲಾಯಿತು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದನ್ನು ನೋಡಬೇಕು ಎಂಬ ಉದ್ದೇಶದಿಂದ ಒಕ್ಕಲಿಗರು ಕುಮಾರಸ್ವಾಮಿ ಪರ ಒಲವು ತೋರಿಸಿದ್ದು, ಫಲಿತಾಂಶ ಬಂದ ಮೇಲೆ ಯಡಿಯೂರಪ್ಪನವರಿಗೆ ಅಧಿಕಾರ ಸಿಗದಂತೆ ಮಾಡಬೇಕೆಂಬ ಉದ್ದೇಶದಿಂದ ಮೈತ್ರಿಗೆ ಮುಂದಾದ ಕಾಂಗ್ರೆಸ್ ಜೊತೆ ಕೈಜೋಡಿಸಿತು. ಇದೀಗ ಆ ಎರಡೂ ಪಕ್ಷಗಳು ಒಟ್ಟಾದವು.
ಆದರೆ ಕರ್ನಾಟಕದಲ್ಲಿ ಇದುವರೆಗೆ ಶೇಕಡಾ 24ರಷ್ಟು ಜನಸಂಖ್ಯೆಯಿರುವ ದಲಿತರು ಮತ್ತು ಶೇಕಡಾ 17ರಷ್ಟಿರುವ ಮುಸಲ್ಮಾನ ಸಮುದಾಯದ ಮುಖಂಡರು ಮುಖ್ಯಮಂತ್ರಿಯಾಗಿಲ್ಲ. ಡಿ. ದೇವರಾಜ ಅರಸ್, ಎಸ್. ಬಂಗಾರಪ್ಪ, ಎಂ. ವೀರಪ್ಪ ಮೊಯ್ಲಿ, ಎನ್. ಧರ್ಮಸಿಂಗ್ ಮತ್ತು ಸಿದ್ದರಾಮಯ್ಯ ಒಟ್ಟಾಗಿ 17 ವರ್ಷ ಆಡಳಿತ ನಡೆಸಿದರೂ ಕೂಡ ಮತ್ತೆ ಅಧಿಕಾರ ಹಿಡಿಯುವಲ್ಲಿ ಅವರು ವಿಫಲರಾಗಿದ್ದಾರೆ.
ಲಿಂಗಾಯತ ಮುಖ್ಯಮಂತ್ರಿಯಾಗುವುದರಿಂದ ಬಿ.ಎಸ್.ಯಡಿಯೂರಪ್ಪನವರನ್ನು ತಡೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿವೆ ಎಂದು ಬಿಜೆಪಿ ನಾಯಕ ಜಿ ಮಧುಸೂಧನ್ ಹೇಳುತ್ತಾರೆ. ರಾಜಕೀಯ ವಿಶ್ಲೇಷಕ ಹರೀಶ್ ರಾಮಸ್ವಾಮಿ ಹೇಳುವ ಪ್ರಕಾರ, ರಾಜ್ಯ ರಾಜಕೀಯದಲ್ಲಿ ಇನ್ನು ಕೂಡ ಒಕ್ಕಲಿಗರು ಮತ್ತು ಲಿಂಗಾಯತರು ಪ್ರಾಬಲ್ಯ ಹೊಂದಿದ್ದಾರೆ. ಕರಾವಳಿ ಜಿಲ್ಲೆಯಲ್ಲಿ ಬ್ರಾಹ್ಮಣರು, ಬಂಟರು ಮತ್ತು ಬಿಲ್ಲವರ ಮತಗಳನ್ನು ಸೆಳೆಯುವಲ್ಲಿ ಬಿಜೆಪಿ ಸಫಲವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


