ರಾಜಕೀಯ

ವಾಸ್ತು ದೋಷ: ಅನುಗ್ರಹದಲ್ಲಿ ಉಳಿದುಕೊಳ್ಳಲು ಹೆಚ್‍ಡಿ ಕುಮಾರಸ್ವಾಮಿ ಹಿಂದೇಟು?

ಸದ್ಯ ರಾಜ್ಯದ 25ನೇ ಮುಖ್ಯಮಂತ್ರಿಯಾಗಲಿರುವ ಜೆಡಿಎಸ್ ನ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಅಧಿಕೃತ ನಿವಾಸ ಅನುಗ್ರಹದಲ್ಲಿ ಉಳಿದುಕೊಳ್ಳಲು...

ವಾಸ್ತು ದೋಷ: ಅನುಗ್ರಹದಲ್ಲಿ ಉಳಿದುಕೊಳ್ಳಲು ಹೆಚ್‍ಡಿ ಕುಮಾರಸ್ವಾಮಿ ಹಿಂದೇಟು?
ಹೆಚ್ ಡಿ ಕುಮಾರಸ್ವಾಮಿ
Published On :
ಬೆಂಗಳೂರು: ಸದ್ಯ ರಾಜ್ಯದ 25ನೇ ಮುಖ್ಯಮಂತ್ರಿಯಾಗಲಿರುವ ಜೆಡಿಎಸ್ ನ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಅಧಿಕೃತ ನಿವಾಸ ಅನುಗ್ರಹದಲ್ಲಿ ಉಳಿದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸರ್ಕಾರಿ ಬಂಗಲೆ ಅನುಗ್ರಹದಲ್ಲಿ ವಾಸ್ತು ಸರಿಯಿಲ್ಲ ಎಂದು ಕೆಲ ಸೂಚನೆಗಳು ಕೆಲ ವಾಸ್ತು ತಜ್ಞರಿಂದ ಬಂದ ಹಿನ್ನೆಲೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರು ಅನುಗ್ರಹದಲ್ಲಿ ಉಳಿದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. 
ಕುಮಾರಸ್ವಾಮಿ ಅವರು ಸಿಎಂ ಅಧಿಕೃತ ನಿವಾಸ ಅನುಗ್ರಹದಲ್ಲಿ ಉಳಿಯುವುದಕ್ಕೂ ಮುನ್ನ ಕೆಲ ವಾಸ್ತುತಜ್ಞರು ಮನೆಯನ್ನು ಪರಿಶೀಲಿಸಿ, ಮನೆಯ ವಾಸ್ತು ಸರಿಯಿಲ್ಲ. ಇದು ಕುಮಾರಸ್ವಾಮಿ ಅವರ ಏಳಿಗೆಗೆ ತೊಂದರೆಯಾಗುತ್ತದೆ. ಇದರಿಂದಾಗಿ ಕುಮಾರಸ್ವಾಮಿ ಅವರ ಈ ಮನೆಯಿಂದ ದೂರ ಇರುವುದೇ ಉತ್ತಮ ಎಂದು ವಾಸ್ತುತಜ್ಞರು ಹೇಳಿದ್ದಾರೆ. 
ಇನ್ನೊಂದೆಡೆ ಅನುಗ್ರಹದಲ್ಲಿ ಮುಖ್ಯಮಂತ್ರಿ, ಮಂತ್ರಿಯಾದವರು ನೆಲೆಸಿದರೇ ಅವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆಯಿದ್ದು ಇದರಿಂದಾಗಿ ಮತ್ತೆರಡು ಅಧಿಕೃತ ನಿವಾಸಗಳಾದ ಕಾವೇರಿ ಅಥವಾ ಕೃಷ್ಣದಲ್ಲಿ ಇರಲು ಬಯಸುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.