ರಾಜಕೀಯ

ನಾಪತ್ತೆಯಾಗಿರುವ ಇಬ್ಬರೂ ಶಾಸಕರೂ ನಮಗೇ ಬೆಂಬಲ ನೀಡುತ್ತಾರೆ: ಡಿಕೆ ಶಿವಕುಮಾರ್

ನಾಪತ್ತೆಯಾಗಿರುವ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರಾದ ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ್ ಅವರು ನಮ್ಮನ್ನೇ ಬೆಂಬಲಿಸುತ್ತಾರೆಂದು ಕಾಂಗ್ರೆಸ ನಾಯಕ ಡಿ.ಕೆ.ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ...

ನಾಪತ್ತೆಯಾಗಿರುವ ಇಬ್ಬರೂ ಶಾಸಕರೂ ನಮಗೇ ಬೆಂಬಲ ನೀಡುತ್ತಾರೆ: ಡಿಕೆ ಶಿವಕುಮಾರ್
ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್
Published On :
ಬೆಂಗಳೂರು: ನಾಪತ್ತೆಯಾಗಿರುವ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರಾದ ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ್ ಅವರು ನಮ್ಮನ್ನೇ ಬೆಂಬಲಿಸುತ್ತಾರೆಂದು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ. 
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇಬ್ಬರು ಶಾಸಕರನ್ನು ಬಿಟ್ಟು ಉಳಿದೆಲ್ಲಾ ಶಾಸಕರು ಸದನದಲ್ಲಿ ಹಾಜರಿದ್ದಾರೆ. ನಾಪತ್ತೆಯಾಗಿರುವ ಇಬ್ಬರೂ ಶಾಸಕರೂ ನಮ್ಮೊಂದಿಗೆ ಗೆದ್ದಿದ್ದಾರೆ. ನಮ್ಮ ಜೊತೆಗೇ ಇರಲಿದ್ದಾರೆ. ಅಷ್ಟು ಸುಲಭವಾಗಿ ಅಡ್ಡ ಮತದಾನ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ, ಜನರೇ ಅವರನ್ನು ಸುಮ್ಮನೆ ಬಿಡುವುದಿಲ್ಲ. ಇನ್ನೂ ಸಮಯವಿದೆ. ನಾಪತ್ತೆಯಾಗಿರುವ ಶಾಸಕರು ನಮಗೇ ಬೆಂಬಲ ನೀಡಲಿದ್ದಾರೆಂದು ಹೇಳಿದ್ದಾರೆ. 
ಬಿಜೆಪಿಯಿಂದ ಸೋಮಶೇಖರ್ ರೆಡ್ಡಿ ಕೂಡ ನಾಪತ್ತೆಯಾಗಿದ್ದಾರೆ. ಬಹುಶಃ ಸೋಮಶೇಖರ್ ರೆಡ್ಡಿಯವರು ಇನ್ನೂ ಕುದುರೆ ವ್ಯಾಪಾರ ನಡೆಸುತ್ತಲೇ ಇರಬಹುದು. ಆದರೆ, ಶಾಸಕರೆಲ್ಲರೂ ನಮ್ಮೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. 
ಆದಾಯ ತೆರಿಗೆ ಇಲಾಖೆಯಿಂದ ಬೆದರಿಕೆಯೊಡ್ಡುವ ತಂತ್ರಗಳು ನಡೆಯುತ್ತಲೇ ಇವೆ. ಆದರೂ ಸದನದಲ್ಲಿ ನಾವು ಬಹುಮತ ಸಾಬೀತುಪಡಿಸುತ್ತೇವೆ. ಬಿಜೆಪಿಯ ತಂತ್ರಕ್ಕೆ ನಾವೂ ಕೂಡ ಪ್ರತಿತಂತ್ರವನ್ನು ರೂಪಿಸಿದ್ದೇವೆ. ನಮ್ಮ ತಂತ್ರವನ್ನು ಬಹಿರಂಗ ಪಡಿಸುವುದಿಲ್ಲ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.