ರಾಜಕೀಯ

"ಅಪವಿತ್ರ ಮೈತ್ರಿ"ಯಿಂದ ರಚನೆಯಾದ ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ: ಅಮಿತ್ ಶಾ ಭವಿಷ್ಯ

’ಅಪವಿತ್ರ ಮೈತ್ರಿ’ ಯಿಂದ ರೂಪುಗೊಂಡ ಸರ್ಕಾರ ದೀರ್ಘಕಾಲ ಬಾಳುವುದಿಲ್ಲ" ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

"ಅಪವಿತ್ರ ಮೈತ್ರಿ"ಯಿಂದ ರಚನೆಯಾದ ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ: ಅಮಿತ್ ಶಾ ಭವಿಷ್ಯ
ಅಮಿತ್ ಶಾ
Published On :
ನವದೆಹಲಿ: ’ಅಪವಿತ್ರ ಮೈತ್ರಿ’ ಯಿಂದ ರೂಪುಗೊಂಡ ಸರ್ಕಾರ ದೀರ್ಘಕಾಲ ಬಾಳುವುದಿಲ್ಲ" ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್-ಜೇಡಿಎಸ್ ಮೈತ್ರಿ ಸರ್ಕಾರ ರಚನೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಶಾ ನಮ್ಮಲ್ಲಿ ಯಾರನ್ನೂ ಹತೋಟಿಯಲ್ಲಿರಿಸಿಕೊಳ್ಳುವ ಪದ್ದತಿ ಇಲ್ಲ. ಅದು ಕಾಂಗ್ರೆಸ್ ನಲ್ಲಿದೆ. ಅವರಲ್ಲಿ ಕೇವಲ ಕುದುರೆ ವ್ಯಾಪಾರವೆಂದಷ್ಟೇ ಅಲ್ಲದೆ ಎಲ್ಲಾ ವಿಧದದಲ್ಲಿಯೂ ಪಕ್ಷದ ಹೈಕಮಾಂಡ್ ಹಿಡಿತ ಬಲವಾಗಿರುತ್ತದೆ ಎಂದರು.
ಇಂಡಿಯಾ ಟಿವಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಮಾಡಿದ್ದ ಭ್ರಷ್ಟಾಚಾರದ ಆರೋಪಗಳ ಕುರಿತಂತೆ ಪ್ರಸ್ತಾಪಿಸಿದರು. "ನಾನು ಕಾಂಗ್ರೆಸ್ ಅಧ್ಯಕ್ಷರ ಆರೋಪಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ" ಅವರು ಹೇಳಿದ್ದಾರೆ.
"(ಕರ್ನಾಟಕದ) ಈ ಸರ್ಕಾರವು ಎಷ್ಟು ಸಮಯದವರೆಗೆ ಕಾರ್ಯ ನಿರ್ವಹಿಸಬಲ್ಲದು ಎಂಬುದರ ಬಗ್ಗೆ ನಾನು ಹೇಳಲಾರೆ, ಆದರೆ ಅಂತಹ ಅಪವಿತ್ರ ಮೈತ್ರಿಗಳ ಮೂಲಕ ರಚಿಸಲಾದ ಸರ್ಕಾರಗಳು ದೀರ್ಘಕಾಲದವರೆಗೆ ಕೆಲಸ ಮಾಡುವುದು ಅಸಂಭವ. ಕರ್ನಾಟಕದ ಮತದಾರ ಬಿಜೆಪಿ ಕಡೆ ಒಅಲವು ಹೊಂದಿದ್ದಾನೆ. ಹಾಗಾಗಿ ಅಲ್ಲಿ ನಾವು 104 ಸ್ಥಾನಗಳನ್ನು ಗೆದ್ದಿದ್ದೇವೆ" ಅವರು ಹೇಳಿದರು.
ಕರ್ನಾಟಕದ ಜನ ಕಾಂಗ್ರೆಸ್ ನ್ನು ತಿರಸ್ಕರಿಸಿದ್ದಾರೆ ಎಂದ ಶಾ ಕಾಂಗ್ರೆಸ್ ಈಗ ಜೆಡಿಎಸ್ ಜತೆ ಸೇರಿ ಹಿಂಬಾಗಿಲಿನಿಂದ ಅಧಿಕಾರಕ್ಕೇರಲು ಬಯಸಿದೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಏಕೈಕ ಉದ್ದೇಶದೊಡನೆ ಯಾವ ತತ್ವಗಳಿಲ್ಲದ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷ ಕುದುರೆ ವ್ಯಾಪಾರದ ಬಗ್ಗೆ ಮಾಡಿದ್ದ ಟೀಕೆಗೆ ಉತ್ತರಿಸಿದ ಅಮಿತ್ ಶಾ ಕುದುರೆ ವ್ಯಾಪಾರ ನಿಜಕ್ಕೂ ತಪ್ಪು, ಆದರೆ ಕಾಂಗ್ರೆಸ್ ಜೆಡಿಎಸ್ ನ ಎಲ್ಲಾ ಶಾಸಕರನ್ನೂ ಸೇರಿಸಿಕೊಂಡು ಸ್ಥಿರ ಸರ್ಕಾರ ರಚನೆ ಮಾಡುವೆನೆಂದು ಹೊರಟಿದ್ದು ಯಾವ ವ್ಯಾಪಾರ? ಎಂದು ಪ್ರಶ್ನಿಸಿದ್ದಾರೆ..
ರಾಜ್ಯದ ಜನತೆ ಕಾಂಗ್ರೆಸ್-ಜೆಡಿ (ಎಸ್) ಪಕ್ಷಗಳನ್ನು ಮುಂಬರುವ ಚುನಾವಣೆಗಳಲ್ಲಿ ಶಿಕ್ಷಿಸುತ್ತಾರೆ.  2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕ ಹಾಗೂ ಉತ್ತರ ಪ್ರದೇಶಗಳಲ್ಲಿ ಹೆಚ್ಚಿನ ಸ್ಥಾನ ಗಳಿಸಲಿದೆ ಎಂದು ಶಾ ಹೇಳಿದ್ದಾರೆ.
2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ  2014 ರಲ್ಲಿ ಪಡೆದದ್ದಕ್ಕಿಂತ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.