ರಾಜಕೀಯ

ಜಮೀರ್ ವಿರುದ್ಧ ಜೆಡಿಎಸ್ ಹೂಡಿದ್ದ ತಂತ್ರ ವಿಫಲ

ಜೆಡಿಎಸ್ ವಿರುದ್ಧ ಬಂಡಾಯ ಸಾರಿ ಕಾಂಗ್ರೆಸ್ ನಿಂದ ಅದೃಷ್ಟಪರೀಕ್ಷೆಗಿಳಿದಿದ್ದ ಶಾಸಕ ಬಿ.ಝಡ್.ಜಮೀರ್ ಅಹಮ್ಮದ್ ಖಾನ್ ಹಿಂದಿನ ತಮ್ಮ ಮೂರು ಚುನಾವಣೆಗಳಿಗಿಂತಲೂ ಈ ಬಾರಿ ಇನ್ನೂ ಹೆಚ್ಚು ಮತಗಳನ್ನು ಪಡೆದು ನಾಲ್ಕನೇ ಬಾರಿ ಶಾಸಕಾರಿ ಆಯ್ಕೆಯಾಗಿದ್ದಾರೆ...

ಜಮೀರ್ ವಿರುದ್ಧ ಜೆಡಿಎಸ್ ಹೂಡಿದ್ದ ತಂತ್ರ ವಿಫಲ
ಜೆಡಿಎಸ್ ನಾಯಕರೊಂದಿಗೆ ಜಮೀರ್ ಅಹ್ಮದ್ ಖಾನ್ (ಸಂಗ್ರಹ ಚಿತ್ರ)
Published On :
ಬೆಂಗಳೂರು: ಜೆಡಿಎಸ್ ವಿರುದ್ಧ ಬಂಡಾಯ ಸಾರಿ ಕಾಂಗ್ರೆಸ್ ನಿಂದ ಅದೃಷ್ಟಪರೀಕ್ಷೆಗಿಳಿದಿದ್ದ ಶಾಸಕ ಬಿ.ಝಡ್.ಜಮೀರ್ ಅಹಮ್ಮದ್ ಖಾನ್ ಹಿಂದಿನ ತಮ್ಮ ಮೂರು ಚುನಾವಣೆಗಳಿಗಿಂತಲೂ ಈ ಬಾರಿ ಇನ್ನೂ ಹೆಚ್ಚು ಮತಗಳನ್ನು ಪಡೆದು ನಾಲ್ಕನೇ ಬಾರಿ ಶಾಸಕಾರಿ ಆಯ್ಕೆಯಾಗಿದ್ದಾರೆ. ಈ ಮೂಲಕ ಜಮೀರ್ ವಿರುದ್ಧ ಜೆಡಿಎಸ್ ಹೂಡಿದ್ದ ತಂತ್ರಗಳು ವಿಫಲವಾಗಿವೆ. 
ಸರಣಿ ಗೆಲುವಿನ ನಗೆ ಬೀರಿರುವ ಜಮೀರ್ ಖಾನ್'ಗೆ ಜೆಡಿಎಸ್ ನಿಂದ ಪೈಪೋಟಿಯೂ ಎದುರಾಗಿಲ್ಲ. ಬರೋಬ್ಬರಿ 65,339 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಲಕ್ಷ್ಮೀ ನಾರಾಯಣ ವಿರುದ್ಧ 26,633 ಮತಗಳ ಅಂತರದಿಂದ ಜಮೀರ್ ಜಯ ಸಾಧಿಸಿದ್ದಾರೆ. 
2013ರ ಚುನಾವಣೆಯಲ್ಲಿ 56,339 ಮತಗಳನ್ನು ಪಡೆದಿದ್ದ ಜಮೀರ್ ಅವರು ಈ ಬಾರಿ ಈ ಇನ್ನೂ 11 ಸಾವಿರದಷ್ಟು ಹೆಚ್ಚು ಮತಗಳನ್ನು ಪಡೆದು ಭರ್ಜರಿ ಗೆಲವು ಕಂಡಿದ್ದಾರೆ.
ಜಮೀರ್ ಅವರನ್ನು ಸೋಲಿಸಲೇಬೇಕೆಂದು ಪಣತೊಟ್ಟಿದ್ದ ಮಾಜಿ ಪ್ರಧಾನಮಂತ್ರಿ ದೇವೇಗೌಡ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾನಿ ನಡೆಸಿದ್ದ ಯಾವುದೇ ರಾಜಕೀಯ ತಂತ್ರ, ಶ್ರಮಗಳು ಯಶಸ್ವಿಯಾಗಿಲ್ಲ. ಅಲ್ಪಸಂಖ್ಯಾತ ಮತಗಳು ಸಂಪೂರ್ಣವಾಗಿ ಜಮೀರ್ ಕೈಹಿಡಿದಿರುವುದು ಗೆಲುವಿಗೆ ಕಾರಣವಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.