ರಾಜಕೀಯ

ಇಟಲಿಯಿಂದ ಬಂದವರಿಂದ ಹಿಂದೂ ಧರ್ಮ, ಸಂಸ್ಕೃತಿ ತಿಳಿದುಕೊಳ್ಳುವ ಅವಶ್ಯಕತೆಯಿಲ್ಲ: ಬಿಎಸ್ ವೈ

ಬಹಿರಂಗ ಚುನಾವಣಾ ಪ್ರಚಾರಕ್ಕೆ ನಿನ್ನೆ ಕೊನೆಯ ದಿನವಾದ ಕಾರಣ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಗುರುವಾರ ಬಾದಾಮಿ ಮತ್ತು ಶಿಕಾರಿಪುರಗಳಲ್ಲಿ ರೋಡ್ ಶೋ ನಡೆಸಿದರು.

ಇಟಲಿಯಿಂದ ಬಂದವರಿಂದ ಹಿಂದೂ ಧರ್ಮ, ಸಂಸ್ಕೃತಿ ತಿಳಿದುಕೊಳ್ಳುವ ಅವಶ್ಯಕತೆಯಿಲ್ಲ: ಬಿಎಸ್ ವೈ
ಶಿಕಾರಿಪುರದಲ್ಡಿ ಯಡಿಯೂರಪ್ಪ ರೋಡ್ ಶೋ
Published On :
ಬಾದಾಮಿ/ ಶಿಕಾರಿಪುರ: ಬಹಿರಂಗ ಚುನಾವಣಾ ಪ್ರಚಾರಕ್ಕೆ ನಿನ್ನೆ ಕೊನೆಯ ದಿನವಾದ ಕಾರಣ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಗುರುವಾರ ಬಾದಾಮಿ ಮತ್ತು ಶಿಕಾರಿಪುರಗಳಲ್ಲಿ  ರೋಡ್ ಶೋ ನಡೆಸಿದರು.
ತವರು ಕ್ಷೇತ್ರ ಶಿಕಾರಿಪುರದಲ್ಲಿ ರೋಡ್ ಶೋ ನಡೆಸಿದ ಯಡಿಯೂರಪ್ಪ, ನಂತರ ಬಾದಾಮಿಯ ಗುಳೇದ ಗುಡ್ಡದಲ್ಲಿ ಪಕ್ಷದ ಅಭ್ಯರ್ಥಿ ಶ್ರೀರಾಮುಲು ಪರ ಪ್ರಚಾರ ನಡೆಸಿದರು. 
ಶಿಕಾರಿಪುರದಲ್ಲಿ ದಿನಚರಿ ಆರಂಭಿಸಿದ ಬಿಎಸ್ ವೈ ಹಿರೇಕೆರೂರು 30 ಕಿಮೀ ಪ್ರಯಾಣ ಬೆಳೆಸಿದರು, ಹಿರೇಕೆರೂರಿನಿಂದ ಬಾದಾಮಿಗೆ ಉತರ ಬಿಜೆಪಿ ನಾಯಕರೊಂದಿಗೆ ತೆರಳಿದರು. ಅಮಿತ್ ಶಾ ಬಾದಾಮಿಯಲ್ಲಿ ರೋಡ್ ಶೋ ನಡೆಸಿದರು. 
ಈ ವೇಳೆ ಮಾತನಾಡಿದ ಅಮಿತ್ ಶಾ, ಲಿಂಗಾಯತ-ವೀರಶೈವ ಧರ್ಮ ವಿಭಜನೆ ಕಾರಣಕ್ಕಾಗಿ ಬಾದಾಮಿ ಜನ ಸಿಎಂ ಸಿದ್ದರಾಮಯ್ಯ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ, ಶ್ರೀರಾಮುಲು 25 ಸಾವಿರ ಮತಗಳಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೇ ಬಾದಾಮಿ ಅಭಿವೃದ್ಧಿಗಾಗಿ 200 ಕೋಟಿ ರು ಹಣ  ನೀಡುವುದಾಗಿ ಘೋಷಿಸಿದ್ದಾರೆ.
ಅಮಿತ್ ಶಾ ಬೆಂಗಳೂರಿಗೆ ತೆರಳಿದರು, ನಂತರ  ಗುಳೇದ ಗುಡ್ಡದಲ್ಲಿ ಯಡಿಯೂರಪ್ಪ ಬೃಹತ್ ರೋಡ್ ಶೋ ನಲ್ಲಿ ಭಾಗವಹಿಸಿದರು. ಬಳಿಕ ಬಿಎಸ್ ವೈ ಶಿಕಾರಿಪುರಕ್ಕೆ ತೆರಳಿದರು, ಅಲ್ಲಿ ಹುಚ್ಚರಾಯ ಸ್ವಾಮಿಯ ಆಶೀರ್ವಾದ ಪಡೆದು ಸಂಜೆ 5 ಗಂಟೆ ವರೆಗೂ ಮತ್ತೊಂದು ರೋಡ್ ಶೋನಲ್ಲಿ ಬಾಗವಹಿಸಿದರು, ಶಿಕಾರಿಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯಡಿಯೂರಪ್ಪ, ಪ್ರದಾನಿ ಮೋದಿ ಅವರ ವಿರುದ್ಧ ಮಾತನಾಡುವ ಮುನ್ನ ರಾಹುಲ್ ಗಾಂಧಿ ಹಿಂದೂತ್ವ ಎಂದರೇ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲಿ, ಇಟಲಿಯಿಂದ ಬಂದವರಿಂದ ಹಿಂದೂ ಧರ್ಮದ ಬಗ್ಗೆ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳುವ ಅಗತ್ಯ ವಿಲ್ಲ ಎಂದರು. 
ಬಾದಾಮಿಯಲ್ಲಿ ಗುರುವಾರ ಏರ್ಪಡಿಸಿದ್ದ  ರೋಡ್ ಶೋ ಸಿಕ್ಕ ಬೆಂಬಲದಿಂದಾಗಿ ನನ್ನ ಹೃದಯ ತುಂಬಿ ಬಂದಿದೆ, ಸಿದ್ದರಾಮಯ್ಯ ಸೋಲುತ್ತಾರೆ ಎಂಬುದಕ್ಕೆ ಅಲ್ಲಿ ನೆರೆದಿದ್ದ ಜನ ಸ್ತೋಮವೇ ಸಾಕ್ಷಿ ಎಂದು ಹೇಳಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.