ಸ್ಯಾಂಡಲ್ವುಡ್ ಹಬ್ ಗಾಂಧಿನಗರ: ಮತ ವಿಭಜನೆಯಿಂದಾಗಿ ದಿನೇಶ್ ಗುಂಡೂರಾವ್ ಗೆಲುವು ಸುಲಭವಲ್ಲ!
ತಗ್ಗು ಪ್ರದೇಶಗಳಿಗೆ ನುಗ್ಗುವ ನೀರು, ಕಸದ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಪಾರ್ಕಿಂಗ್ ಸ್ಥಳದ ಕೊರತೆ ಸೇರಿದಂತೆ ಗಾಂಧಿನಗರ ವಿಧಾನ ಸಭೆ ಕ್ಷೇತ್ರ ಹತ್ತು ...

Published On :
ಬೆಂಗಳೂರು: ತಗ್ಗು ಪ್ರದೇಶಗಳಿಗೆ ನುಗ್ಗುವ ನೀರು, ಕಸದ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಪಾರ್ಕಿಂಗ್ ಸ್ಥಳದ ಕೊರತೆ ಸೇರಿದಂತೆ ಗಾಂಧಿನಗರ ವಿಧಾನ ಸಭೆ ಕ್ಷೇತ್ರ ಹತ್ತು ಹಲವು ಸಮಸ್ಯೆಗಳ ಆಗರವಾಗಿದೆ.
ಇದೆಲ್ಲಾ ಸಮಸ್ಯೆಗಳ ಹೊರತಾಗಿಯೂ ಚಿತ್ರರಂಗದ ಹಲವು ಗಾಸಿಪ್ ಗಳಿಂದಾಗಿ ಸದಾ ಸುದ್ದಿಯಲ್ಲಿರುವ ಗಾಂಧಿನಗರದಲ್ಲಿ ಮಾಜಿ ಸಿಎಂ ಗುಂಡೂರಾವ್ ಪುತ್ರ ದಿನೇಶ್ ಇಲ್ಲಿಗೆ ಅಚ್ಚು ಮೆಚ್ಚು.
ಇಲ್ಲಿನ ಹಲವು ಥಿಯೇಟರ್ ಗಳು ಮಾಲ್ ಗಳಾಗಿ ಬದಲಾಗಿವೆ, ಕೇವಲ ರಂಗಭೂಮಿ ಚಟುವಟಿಕೆಗಳು ಮಾತ್ರ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆಯುತ್ತವೆ, ಸಾಮಾನ್ಯ ಕುಂದುಕೊರತೆಗಳು ಇಲ್ಲಿ ಹೆಚ್ಚಿದ್ದರೂ ಜನ ಸಂಖ್ಯೆ ಮಾತ್ರ ಕಡಿಮೆಯಿಲ್ಲ,
ಮಾಜಿ ಸಚಿವ ರಾಮಚಂದ್ರ ಗೌಡ ಅವರ ಪುತ್ರ ಸಪ್ತಗಿರಿ ಗೌಡ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ, ಸಪ್ತಗಿರಿಗೌಡ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ, ಮೋದಿ ಅಲೆ ಬಿಜೆಪಿ ಇಲ್ಲಿ ಸಹಾಯ ಮಾಡಬಹುದು ಮಾಜಿ ಕಾರ್ಪೋರೇಟರ್ ವಿ. ನಾಗರಾಜ್ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ,
ದಿನೇಶ್ ಗುಂಡೂರಾವ್ ಮತ್ತ ಪೊಲೀಸರು ತನ್ನ ರಾಜಕೀಯ ಜೀವನವನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ನಾಗರಾಜ್ ಸುದ್ದಿಗೋಷ್ಠಿಯಲ್ಲಿಯೇ ವಿಷಸೇವಿಸಲು ಯತ್ನಿಸಿದ್ದರು. ಆದರೆ ಅವರು ಯಾರು ಎಂಬುದೇ ನನಗೆ ತಿಳಿದಿಲ್ಲ ಎಂದು ರಾವ್ ಹೇಳಿದ್ದರು.
ಓಕಳಿಪುರಂ, ಶ್ರೀರಾಮಪುರಂ, ಚಿಕ್ಕಪೇಟೆ, ಕಾಟನ್ ಪೇಟೆ, ಬಿನ್ನಿಪೇಟೆ, ಸುಭಾಷ್ ನಗರಗಳಲ್ಲಿರುವ ತಮಿಳು ಮತಗಳನ್ನು ಪಡೆಯಲು ನಾಗರಾಜ್ ಹವಣಿಸುತ್ತಿದ್ದಾರೆ. ಬ್ಯುಸಿನೆಸ್ ಸಮುದಾಯ ಬಿಜೆಪಿ ಬೆಂಬಲಿಸುತ್ತದೆ ಎಂದು ಕಂಡು ಬಂದರೂ, ಜಿಎಸ್ ಟಿ ಯಿಂದ ವ್ಯವಾಹರದ ಮೇಲೆ ಉಂಟಾದ ಪರಿಣಾಮವನ್ನು ಕೂಡ ಇಲ್ಲಿನ ವ್ಯಾಪಾರಸ್ಥ ಸಮುದಾಯ ಪರಿಗಣಿಸುವ ಸಾಧ್ಯತೆಯಿದೆ.
ಪರಿಶಿಷ್ಟ ಜಾತಿಗೆ ಸೇರಿದ ವಿ, ನಾರಾಯಣ ಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ, ಕಳೆದ ಎರಡು ವರ್ಷಗಳಿಂದ ನಾರಾಯಣ ಸ್ವಾಮಿ ಇಲ್ಲಿ ಕೆಲಸ ಮಾಡಿದ್ದಾರೆ,ನಾರಾಯಣ ಸ್ವಾಮಿ ಅವರ ಕಠಿಣ ಕೆಲಸಗಳು ದಿನೇಶ್ ಗುಂಡೂರಾವ್ ಅವರಿಗೆ ಬೆವರಿಳಿಸುವ ಸಾಧ್ಯತೆಗಳಿವೆ, ಎಕೆಂದರೇ ಇಲ್ಲಿ ಪರಿಶಿಷ್ಟ ಜಾತಿಯ ಮತಗಳೇ ಅತಿ ಹೆಚ್ಚು ನಿರ್ಣಾಯಕವಾದದ್ದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Dinesh Gundu Raoದಿನೇಶ್ ಗುಂಡೂರಾವ್ಗಾಂಧಿನಗರGandhinagarKarnataka Assembly Electionಕರ್ನಾಟಕ ವಿಧಾನ ಸಭೆ ಚುನಾವಣೆSapthagiri Gowdaಸಪ್ತಗಿರಿ ಗೌಡ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


