ಮೈಸೂರು: ಶಿಕ್ಷಣ ಸಚಿವ ತನ್ವೀರ್ ಸೇಠ್ ಬೆಂಬಲಿಗರಿಂದ ಪತ್ರಕರ್ತನ ಮೇಲೆ ಗೂಂಡಾಗಿರಿ
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವರದಿ ಮಾಡುತ್ತಿದ್ದ ರಾಷ್ಟ್ರೀಯ ಆಂಗ್ಲ ಪತ್ರಿಕೆ ಪತ್ರಕರ್ತನ ಮೇಲೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಬೆಂಬಲಿಗರು...

Published On :
ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವರದಿ ಮಾಡುತ್ತಿದ್ದ ರಾಷ್ಟ್ರೀಯ ಆಂಗ್ಲ ಪತ್ರಿಕೆ ಪತ್ರಕರ್ತನ ಮೇಲೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಪತ್ರಿಕೆಯಲ್ಲಿ ತನ್ವೀರ್ ಸೇಠ್ ಕುರಿತು ಋಣಾತ್ಮಕವಾಗಿ ಬರೆಯಲಾಗಿದೆ ಎಂದು ಸೇಠ್ ಬೆಂಬಲಿಗರು ನರಸಿಂಹರಾಜ ಕ್ಷೇತ್ರದ ಗಾಯತ್ರಿಪುರಂನಲ್ಲಿ ಬೆಳಗ್ಗೆ 11.30ರ ಸುಮಾರಿಗೆ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಕರ್ತ ಹಾಗೂ ಛಾಯಾಗ್ರಾಹಕನ ಸಮ್ಮುಖದಲ್ಲೇ ಸೇಠ್ ಬೆಂಬಲಿಗರು ಪತ್ರಕರ್ತನಿಗೆ ನಿಮ್ಮ ಪತ್ರಿಕೆಯಲ್ಲಿ ಇತರ ನಾಯಕರ ಕುರಿತು ಧನಾತ್ಮಕವಾಗಿ ಬರೆದಿದ್ದೀರಾ ಆದರೆ ತನ್ವೀರ್ ಸೇಠ್ ಬಗ್ಗೆ ಋಣಾತ್ಮಕವಾಗಿ ಬರೆದಿರುವುದು ಯಾಕೆ ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ.
ಪತ್ರಕರ್ತನಿಗೆ ಕೆಟ್ಟ ಭಾಷೆಯಲ್ಲಿ ಬೈದಿರುವ ಬೆಂಬಲಿಗರು ಆತನ ನೋಟ್ ಪ್ಯಾಡ್, ಮೊಬೈಲ್ ಮತ್ತು ಪೆನ್ ಅನ್ನು ಕಸಿದುಕೊಂಡಿದ್ದಾರೆ. ಇನ್ನು ಘಟನೆ ನಡೆದ ಸ್ಥಳದಲ್ಲೇ ತನ್ವೀರ್ ಸೇಠ್ ಸಹ ಅಲ್ಲೇ ಇದ್ದರು. ಈ ವೇಳೆ ಇತರ ಪತ್ರಕರ್ತರು ಹಲ್ಲೆಕೋರರ ಫೋಟೋ ತೆಗೆಯುವಷ್ಟರಲ್ಲೇ ಅವರನ್ನು ಅಲ್ಲಿಂದ ಪರಾರಿಯಾಗುವಂತೆ ಸೂಚಿಸಲಾಗಿತ್ತು.
ತನ್ವೀರ್ ಸೇಠ್ ಮತ ಪ್ರಚಾರ ನಡೆಸುತ್ತಿದ್ದು ಕಾರ್ಯಕ್ರಮ ನಡೆಯುವವರೆಗೂ ಪತ್ರಕರ್ತನನ್ನು ಕಾಂಗ್ರೆಸ್ ಕಾರ್ಯಕರ್ತರು ಬಲವಂತವಾಗಿ 15 ನಿಮಿಷಗಳ ಕಾಲ ಮನೆಯಲ್ಲಿ ಕೂಡಿಹಾಕಿದ್ದರು. ಈ ಕುರಿತು ಟಿಎನ್ಐಇ ಪತ್ರಕರ್ತರು ಸಚಿವರ ಪ್ರತಿಕ್ರಿಯೆಯನ್ನು ಕೇಳಲು ಕಾರ್ಯಕರ್ತರು ಅವಕಾಶ ನೀಡಲಿಲ್ಲ. ಇನ್ನು ಈ ಘಟನೆಯನ್ನು ಖಂಡಿಸಿ ಲಾ ಕೋರ್ಟ್ ಕಾಂಪ್ಲೆಕ್ಸ್ ಬಳಿ ಮೈಸೂರು ಜಿಲ್ಲಾ ಪತ್ರಕರ್ತರ ಅಸೋಸಿಯೇಶನ್ ಪ್ರತಿಭಟನೆ ನಡೆಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
attackಹಲ್ಲೆJournalistಪತ್ರಕರ್ತTanveer Saitತನ್ವೀರ್ ಸೇಠ್Karnataka Assembly Electionಕರ್ನಾಟಕ ವಿಧಾನಸಭೆ ಚುನಾವಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


