ಮೋದಿ... ಮೋದಿ ಎಂದು ತೆಗಳುವ ಬದಲು, ಅಧಿಕಾರಾವಧಿಯ ಲೆಕ್ಕ ಕೊಡಿ: ಕಾಂಗ್ರೆಸ್'ಗೆ ಪ್ರಧಾನಿ ಮೋದಿ
ಬಿಸಿಲನಾಡು ರಾಯಚೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಷಣ ಮಾಡುತ್ತಿದ್ದು, ಕಾಂಗ್ರೆಸ್ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ...

Published On :
ರಾಯಚೂರು; ಬಿಸಿಲನಾಡು ರಾಯಚೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಷಣ ಮಾಡುತ್ತಿದ್ದು, ಕಾಂಗ್ರೆಸ್ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ,
ಕನ್ನಡದಲ್ಲಿ ಭಾಷಣವನ್ನು ಆರಂಭಿಸಿದ ಪ್ರಧಾನಿ ಮೋದಿಯವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದ ರಾಜ್ಯದಲ್ಲಿ 5 ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಏನು ಮಾಡಿದೆ? ಲೆಕ್ಕ ಕೊಡಲಿ... ಕರ್ನಾಟಕದ ಗಲ್ಲಿಯ ನಾಯಕರಾಗಲೀ ಅಥವಾ ದೆಹಲಿಯ ನಾಯಕರಾಗಲಿ ಲೆಕ್ಕವನ್ನು ಕೊಟ್ಟಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ.
ಜನಸಂಘ ಹಾಗೂ ರಾಯಚೂರಿನ ಸಂಬಂಧ ಬಹಳ ಹಳೆಯದ್ದು, ಕರ್ನಾಟಕದ ಪರ ಆಗಲೇ ಜನಸಂಘ ನಿಂತಿತ್ತು. ಆಗ ಕಾಂಗ್ರೆಸ್ ಪಕ್ಷ ನಿಮ್ಮ ವಿರುದ್ಧ ನಿಂತಿತ್ತು. ಇಲ್ಲಿನ ಮಹಿಳೆಯರಿಗೆ ರಕ್ಷಣೆ, ಇಲ್ಲಿನ ರೈತರ ಅಭಿವೃದ್ಧಿ, ಯುವಕರಿಗೆ ಅವಕಾಶಗಳನ್ನು ಕೊಡಲು ಬಿಜೆಪಿಗೆ ಮಾತ್ರವೇ ಸಾಧ್ಯ. ಒಂದು ಕಡೆ ನಾವು ಎಲ್ಲರೊಂದಿಗೆ ಎಲ್ಲರ ಪ್ರಗತಿ ಎಂದು ಹೇಳುತ್ತಿದ್ದರೆ, ಮತ್ತೊಂದೆಡೆ ಕುಟುಂಬದ ಅಭಿವೃದ್ಧಿ ಉದ್ದೇಶ ಕಾಂಗ್ರೆಸ್ ಹೊಂದಿದೆ.
ಒಂದೆಡೆ ಬಿಜೆಪಿ ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಭ್ರಷ್ಟರಿಗೆ ಸಹಾಯ ಮಾಡುತ್ತಿದೆ. ಬಿಜೆಪಿ ಜನರ ದನಿಗಳಿಗೆ ದನಿಯಾಗುವ ಉದ್ದೇಶವನ್ನು ಹೊಂದಿದೆ, ಕಾಂಗ್ರೆಸ್ ಜನರ ದನಿಯನ್ನು ಹತ್ತಿಕ್ಕುವ ಗುರಿಯನ್ನು ಹೊಂದಿದೆ.
ಕರ್ನಾಟಕ ರಾಜ್ಯದಲ್ಲಿ 5 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರ ನಡೆಸಿದೆ. ಆದರೆ, 5 ವರ್ಷಗಳ ಸಾಧನೆಯೇನು ಎಂಬುದನ್ನು ಹೇಳಿಲ್ಲ. ಮತದಾನಕ್ಕೆ 5 ಉಳಿದಿದೆ. ಆದರೆ, ಈ ವರೆಗೆ ಯಾವ ಕಾಂಗ್ರೆಸ್ಸಿಗರೂ ಸರ್ಕಾರದ ಸಾಧನೆಗಳನ್ನು ಹೇಳಿಲ್ಲ. ಕಾಂಗ್ರೆಸ್ ನಾಯಕರು ಬೆಳಿಗ್ಗೆಯಿಂದ ಸಂಜೆಯವರೆಗೂ ಮೋದಿ, ಮೋದಿ ಎಂದು ಹೇಳುತ್ತಿದ್ದಾರೆ. ಮೋದಿಯನ್ನು ತೆಗಳುವುದರಲ್ಲಿ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ನನ್ನನ್ನು ತೆಗಳುವುದರಲ್ಲಿ ಸಮಯ ವ್ಯರ್ಥ ಮಾಡುವ ಬದಲು ನಿಮ್ಮ ಸಾಧನೆಗಳ ಬಗ್ಗೆ ಹೇಳಿ ಎಂದು ಕಾಂಗ್ರೆಸ್ ಕಾಲೆಳೆದಿದ್ದಾರೆ.
400 ಲೋಕಸಭಾ ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಇದೀಗ 40ಕ್ಕೆ ಬಂದು ನಿಂತಿದೆ. ಅಷ್ಟೇ ಅಲ್ಲ 22 ರಾಜ್ಯಗಳಿಂದ ಕಾಂಗ್ರೆಸ್ ದೂರಾಗಿದೆ. ಹಸಿದವರಿಗೆ ಅನ್ನ ನೀಡುತ್ತೇವೆಂದು ಇಲ್ಲಿನ ಸರ್ಕಾರ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆ ಒಳ್ಳೆಯದೇ ಆಧರೆ, ಅದರಲ್ಲಿ ಕೇಂದ್ರ ಸರ್ಕಾರದ ಹಣವೂ ಇದೆ ಎಂಬುದನ್ನು ಸರ್ಕಾರ ಮುಚ್ಚಿಡುತ್ತಿದೆ.
ಆಧಾರ್ ಲಿಂಗ್ ನ ನಂತರ ಒಂದೂವರೆ ಕೋಟಿಗೂ ಹೆಚ್ಚು ಅಕ್ರಮ ಹೆಸರುಗಳು ಹೊರಗೆ ಬಂದವು. ಅಸ್ತಿತ್ವದಲ್ಲಿ ಇಲ್ಲದ ಒಂದೂವರೆ ಕೋಟಿಗೂ ಹೆಚ್ಚು ಜನರಿಗೆ ಅಕ್ಕಿ ಹೋಗುತ್ತಿತ್ತು. ಅದನ್ನೆಲ್ಲಾ ನಾವು ಬಂದ್ ಮಾಡಿಬಿಟ್ಟಿದ್ದೇವೆ. ಫಲಾನುಭವಿಗಳಿಗೆ ನಾವು ನೋರವಾಗಿ ಯೋಜನೆಗಳನ್ನು ತಲುಪಿಸುತ್ತಿದ್ದೇವೆ.
ರಾಯಚೂರಿನ ಸೋನಾ ಮಸೂರಿ ಅಕ್ಕಿಗೆ ತನ್ನದಾ ಆದ ಪ್ರಖ್ಯಾತಿ ಇದೆ. ಆದರೆ, ಇಲ್ಲಿನ ರೈತರು ನೀರಿಗಾಗಿ ಒದ್ದಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ನೀರಿನ ವಿಷಯದಲ್ಲಿ ಹಣ ಮಾಡುವುದನ್ನು ಕಲಿತಿದ್ದಾರೆ. ಕೃಷ್ಣ-ತುಂಗಭದ್ರೆ ಇದ್ದರೂ ಇಲ್ಲಿನ ರೈತರಿಗೆ ನೀರಿಲ್ಲ.
2020ರೊಳಗೆ ಸೌರಶಕ್ತಿ ಉತ್ಪಾಸನೆಯನ್ನು ಶೇ.100ಹೆಚ್ಚು ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಎಲ್ಇಡಿ ಅಭಿಯಾನ ಕೂಡ ಮಾಡಿದ್ದೇವೆ. ಇದರಿಂದ ಮಧ್ಯಮವರ್ಗದ ಹೊರೆ ಕಡಿಮೆಯಾಗುತ್ತದೆ. ಎಲ್ಇಡಿ ಬಲ್ಪ್ ಕಾಂಗ್ರೆಸ್ ಸರ್ಕಾರ ಇದ್ದಾಗ ರೂ.350 ಇತ್ತು. ಆದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ರೂ.50-60 ಆಗಿಬಿಟ್ಟಿತು.
ಮಹಾರಾಷ್ಟ್ರ ರಾಜ್ಯದಲ್ಲಿಯೂ ಬರವಾಗುತ್ತದೆ. ಆದರೆ ಅಲ್ಲಿ ಡೀಸೀಲ್ಟಿಂಗ್ ಕಾರ್ಯ ಮಾಡಲಾಗಿದೆ. ಇದರಿಂದ ಇಂದು ಅಲ್ಲಿನ ಜನರು ಬರ ಪರಿಸ್ಥಿತಿಯನ್ನು ಸುಲಭವಾಗಿ ಎದುರಿಸುತ್ತಿದ್ದಾರೆ. ಇಲ್ಲಿನ ಸರ್ಕಾರ ಕೂಡ ಈ ಬಗ್ಗೆ ಮಾಡಿದ್ದರು. ಆದರೆ, 5 ವರ್ಷದಲ್ಲಿ ಅವರಿಗೆ ಅದರ ನೆನಪೇ ಆಗಿಲ್ಲ.
ವಿಶ್ವದೆಲ್ಲೆಡೆ ಇಂದು ಭಾರತದ ಪರ ಜೈಕಾರ ವ್ಯಕ್ತವಾಗುತ್ತಿದೆ ಇದಕ್ಕೆ ಮೋದಿ ಕಾರಣರಲ್ಲ. ಜನರು... ಇಲ್ಲಿನ ಜನ ಬಹುಮತದ ಸರ್ಕಾರ ಆಯ್ಕೆ ಮಾಡಿದ್ದರಿಂದಲೇ ಇದು ಸಾಧ್ಯವಾಗಿದೆ. ರಾಕ್ಷಸಿ ಮನಃಸ್ಥಿತಿಯ ಜನತೆಗೆ ನಾವು ಗಲ್ಲು ಶಿಕ್ಷೆ ನೀಡುವ ಬಗ್ಗೆ ಕಾನೂನು ತಿದ್ದುಪಡಿ ತಂದಿದ್ದೇವೆ. ಮೇ.12 ರಂದು ಬಿಜೆಪಿಗೆ ನೀವೆಲ್ಲಾ ಮತ ನೀಡಿ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್Modirallyರ್ಯಾಲಿRaichurರಾಯಚೂರುಮೋದಿKarnataka Assembly Electionಕರ್ನಾಟಕ ವಿಧಾನಸಭೆ ಚುನಾವಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


