ಬಿಜೆಪಿಗೆ ಬದಲು ಜಾತ್ಯಾತೀತ ಪಕ್ಷಗಳಿಗೆ ಮತ ನೀಡಿ: ಜಿಗ್ನೇಶ್ ಮೇವಾನಿ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 12ರಂದು ಮತದಾನ ನಡೆಯಲಿದ್ದು ಈ ಬಾರಿ ಬಿಜೆಪಿಗೆ ಬದಲು ಜಾತ್ಯಾತೀತ ಪಕ್ಷಗಳಿಗೆ ಮತ ನೀಡುವಂತೆ ಗುಜರಾತ್ ಶಾಸಕ ಮತ್ತು ದಲಿತ...

Published On :
ಹುಬ್ಬಳ್ಳಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 12ರಂದು ಮತದಾನ ನಡೆಯಲಿದ್ದು ಈ ಬಾರಿ ಬಿಜೆಪಿಗೆ ಬದಲು ಜಾತ್ಯಾತೀತ ಪಕ್ಷಗಳಿಗೆ ಮತ ನೀಡುವಂತೆ ಗುಜರಾತ್ ಶಾಸಕ ಮತ್ತು ದಲಿತ ಮುಖಂಡ ಜಿಗ್ನೇಶ್ ಮೇವಾನಿ ಕರೆ ನೀಡಿದ್ದಾರೆ.
ಸಂವಿಧಾನದ ಉಳಿವಿಗಾಗಿ ಎಂಬ ಪ್ರಚಾರ ಕಾರ್ಯಕ್ರಮದಲ್ಲಿ ಸಫಾಯಿ ಕರ್ಮಚಾರಿಗಳ ಜತೆ ಮಾತನಾಡಿದ ಜಿಗ್ನೇಶ್ ಮೇವಾನಿ ಕರ್ನಾಟಕ ಜನತೆ ಬಿಜೆಪಿ(ಕಳ್ಳ ಕಾವಲುಗಾರ)ಗೆ ಮತ ನೀಡಬೇಡಿ. ಅದರ ಬದಲಿಗೆ ಜಾತ್ಯಾತೀತ ಪಕ್ಷಗಳಿಗೆ ಮತ ನೀಡುವಂತೆ ತಿಳಿಸಿದ್ದಾರೆ.
ಕಳ್ಳ ಕಾವಲುಗಾರ(ಪ್ರಧಾನಮಂತ್ರಿ ನರೇಂದ್ರ ಮೋದಿ) ಬಡವರಿಂದ ಹಣವನ್ನು ದೋಚಿ ಶ್ರೀಮಂತರಿಗೆ ನೀಡುತ್ತಿದ್ದಾರೆ. ಇಂತಹವರ ಪಕ್ಷಕ್ಕೆ ಮತ ನೀಡಬೇಡಿ ಎಂದು ಹೇಳಿದ್ದಾರೆ.
ಬಿಜೆಪಿ ಯಾವಾಗಲೂ ದಲಿತರನ್ನು ವಿರೋಧಿಸುತ್ತದೆ. ವಂಚಿತ ಸಮುದಾಯದ ಅಭಿವೃದ್ಧಿಯನ್ನು ಬಯಸುವುದಿಲ್ಲ. ನಿಮ್ಮನ್ನು ಕಸ ಎತ್ತುವವರಂತೆ ನೋಡಲು ಬಯಸುತ್ತದೆ. ಮೇ 12ರಂದು ಬಿಜೆಪಿಗೆ ಮತ ನೀಡಿದರೆ ಅವರು ನಮ್ಮ ಜೀವನವನ್ನು ಇನ್ನಷ್ಟು ಅಸಹನೀಯವಾಗಿಸುತ್ತಾರೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpಬಿಜೆಪಿsecular partiesJignesh Mevaniಜಿಗ್ನೇಶ್ ಮೇವಾನಿಜಾತ್ಯಾತೀತ ಪಕ್ಷಕರ್ನಾಟಕ ವಿಧಾನಸಭೆ ಚುನಾವಣೆKarnataka Assembly Elections
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


