ರಾಜಕೀಯ

ಕಾಂಗ್ರೆಸ್-ಜೆಡಿಎಸ್ ನಡುವೆ ರಹಸ್ಯ ಮೈತ್ರಿ, ಇದಕ್ಕೆ ಬಿಬಿಎಂಪಿ ಸಾಕ್ಷಿ: ಪ್ರಧಾನಿ ಮೋದಿ

ಕಲ್ಪತರು ನಾಡು ತುಮಕೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆಯನ್ನುದ್ದೇಶಿಸಿ ಮಾತನಾಡುತ್ತಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಶನಿವಾರ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ...

ಕಾಂಗ್ರೆಸ್-ಜೆಡಿಎಸ್ ನಡುವೆ ರಹಸ್ಯ ಮೈತ್ರಿ, ಇದಕ್ಕೆ ಬಿಬಿಎಂಪಿ ಸಾಕ್ಷಿ: ಪ್ರಧಾನಿ ಮೋದಿ
ಕಲ್ಪತರು ನಾಡು ತುಮಕೂರಿನಲ್ಲಿ ಪ್ರಧಾನಿ ಮೋದಿ; ಕಾಂಗ್ರೆಸ್, ಜೆಡಿಎಸ್ ವಿರುದ್ಧ ವಾಗ್ದಾಳಿ
Published On :
ತುಮಕೂರು; ಕಲ್ಪತರು ನಾಡು ತುಮಕೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆಯನ್ನುದ್ದೇಶಿಸಿ ಮಾತನಾಡುತ್ತಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಶನಿವಾರ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. 
ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿಯವರು ಮೊದಲಿಗೆ ಸಿದ್ದಗಂಗಾ ಶ್ರೀಗಳಿಗೆ ಪ್ರಮಾಣ ಸಲ್ಲಿಸಿದರು. ನಂತರ ಜಕಣಾಚಾರಿ ಹಾಗೂ ಗುಬ್ಬಿ ವೀರಣ್ಣ ಅವರನ್ನು ಸ್ಮರಿಸಿದರು. 
ಇಷ್ಟೊಂದು ಉತ್ಸಾಹ ನಾನೆಂದೂ ಕಂಡಿಲ್ಲ. ರಾಜಾರಾಮಣ್ಣ ಈ ನೆಲದ ಸುಪುತ್ರ. ದೇಶದ ಪ್ರಧಾನಮಂತ್ರಿಯಾದ ಬಳಿಕ ತುಮಕೂರಿಗೆ ಭೇಟಿ ನೀಡಿದ್ದೆ. ಈ ವೇಳೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡಿದ್ದೆ. ಶ್ರೀಗಳ ಜೊಕೆ ಮಾತನಾಡಿರುವ ಸೌಭಾಗ್ಯ ನನಗೆ ದೊರಕಿತ್ತು. ಈ ಭಾಗ ಅನೇಕ ಮಠ ಮಂದಿರಗಳಿಗೆ ಹೆಸರುವಾಸಿಯಾಗಿದ್ದು, ಸಮಾಜಕ್ಕೆ ಮಠಗಳ ಕೊಡುಗೆ ಅಪಾರ. ಅನ್ನದಾಸೋಹ, ಅಕ್ಷರ ದಾಸೋಹದ ಮೂಲಕ ಜನಾನುರಾಗಿಯಾಗಿವೆ. ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿ ಜನರಿಗೆ ನೆರವು ನೀಡಿವೆ ಇದು ಅನನ್ಯವಾದದ್ದು ಎಂದು ಹೇಳಿದ್ದಾರೆ. 
ಬಳಿಕ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿರುವ ಅವರು ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿನ ಜನ ಇಂದಿರಾಗಾಂಧಿ ಕಾಲದಿಂದಲೂ ಬೆಂಬಲಿಸಿಕೊಂಡು ಬಂದಿದೆ. ಅವರ ಕಾಲದಿಂದ ನೋಡಿದರೆ, ಅವರು ಬರೀ ಬಡತನದ ಬಗ್ಗೆ ಮಾತನಾಡಿದರು. ಅದೇ ಹೆಸರಲ್ಲಿ ಗೆದ್ದು ಜನರ ಕಣ್ಣಿಗೆ ಮಣ್ಣೆರಚಿ ಓಡಿ ಹೋದರು. ಯಾವಾಗ ಒಬ್ಬ ಬಡ ವ್ಯಕ್ತಿ ದೇಶಕ್ಕೆ ಪ್ರಧಾನಿಮಂತ್ರಿಯಾದರೂ ಅಂದಿನಿಂತ ಕಾಂಗ್ರೆಸ್ ಬಡವರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದೆ. 
ಚುನಾವಣೆ ಬಂದಾಗ ಕಾಂಗ್ರೆಸ್ ಬಡತನ, ಬಡವರ ಪರವಾಗಿ ಮಾತನಾಡುತ್ತದೆ. ಆದರೆ, ಚುನಾವಣೆ ಅಂತ್ಯಗೊಂಡ ಬಳಿಕ ಬಡವರ ಬಗ್ಗೆ ಕಾಳಜಿ ವಹಿಸುವುದಿಲ್ಲ. 
ಕಳೆದ 70 ವರ್ಷಗಳಿಂದ ಕಾಂಗ್ರೆಸ್ ದೇಶದಲ್ಲಿ ಆಡಳಿತ ನಡೆಸಿತ್ತು. ಕೇಂದ್ರ ಸರ್ಕಾರ ರೈತರಿಗೆ ಯಾವ ಕೊಡುಗೆ ನೀಡಿದೆ. ರೈತರ ಆತ್ಮಹತ್ಯೆ ತಡೆಯಲು ಏಕೆ ಸಾಧ್ಯವಾಗಿಲ್ಲ. ಚುನಾವಣೆ ಹತ್ತಿರ ಬಂದಾಗ ರೈತರ ಸಾಲ ಮನ್ನಾ ಬಗ್ಗೆ ಮತನಾಡುತ್ತೀರಿ. ಹಿಂದೆ ಏನಾಗಿತ್ತು. ನಿಮ್ಮದೇ ಆಡಳಿತ ಇದ್ದಾಗ...ಏನು ಮಾಡಿದ್ದಿರಿ? ಇಂದು ದೇಶದಲ್ಲಿ ನಿರ್ಮಾಣಗೊಂಡಿರುವ ರೈತರ ಪರಿಸ್ಥಿತಿಗೆ ಕಾಂಗ್ರೆಸ್ ನೀತಿಯೇ ಕಾರಣ. ಅವರ ದುರಾಡಳಿತದ ಫಲವೇ ರೈತರ ಈ ಅವಸ್ಥೆಗೆ ಕಾರಣ ಎಂದು ಕಿಡಿಕಾರಿದ್ದಾರೆ. 
ನಂತರ ಜೆಡಿಎಸ್ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದ ಮೋದಿಯವರು, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ರಹಸ್ಯ ಮೈತ್ರಿಯಾಗಿದೆ. ಇದಕ್ಕೆ ಸಾಕ್ಷಿ ಬಿಬಿಎಂಪಿ. ಅಲ್ಲಿ ಕಾಂಗ್ರೆಸ್ ಪಕ್ಷದವರನ್ನು ಮೇಯರ್ ಮಾಡಿರುವುದು ಜೆಡಿಎಸ್. ನಿಮ್ಮ ನಡುವೆ ಮೈತ್ರಿ ಇಲ್ಲ ಎಂದರೆ, ಅದನ್ನು ಜನರ ಮುಂದೆ ಸ್ಪಷ್ಟಪಡಿಸಿ. 
2014ರ ಚುನಾವಣೆ ವೇಳೆ ಮಾಜಿ ಪ್ರಧಾನಿ ದೇವೇಗೌಡ ಅವರು, ನಾನು ಪ್ರಧಾನಮಂತ್ರಿಯಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳಿದ್ದರು. ಆದರೆ, ನಾನು ದೇಶದ ಪ್ರಧಾನಿಯಾದೆ. ಅಧರಣೀಯ ಮಾಜಿ ಪ್ರಧಾನಿ ದೇವೇಗೌಡರೇ ಆತ್ಮಹತ್ಯೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ನಮ್ಮ ಮತ್ತು ಅವರ ಮಧ್ಯೆ ತೀಕ್ಷ್ಣ ಸ್ಪರ್ಧೆ ಇದ್ದಾಗ ಆಮಾತನ್ನಾಡಿದ್ದರು. ಆದರೆ, ಅವರಿಗೆ ಗೌರವ ಪೂರ್ವಕವಾಗಿಯೇ ತಿರುಗೇಟು ನೀಡಿದ್ದೆ ಎಂದಿದ್ದಾರೆ. 
ತುಮಕೂರು ಜನರಿಗೆ ಕುಡಿಯುವ ನೀರು ಪೂರೈಸಿರುವ ಎತ್ತಿನ ಹೊಳೆ ಯೋಜನೆ ಇನ್ನೂ ಕುಂಟುತ್ತಾ ಸಾಗಿದೆ. ಕೇಂದ್ರ ಸರ್ಕಾರ ವಾಜಪೇಯಿಯವರ ಕನಸ್ಸಾದ ನದಿ ಜೋಡಣೆಯನ್ನು ಕೈಗೆತ್ತಿಕೊಂಡಿದೆ. ಹೇಮಾವತಿ ಮತ್ತು ನೇತ್ರಾವತಿ ನದಿಗಳನ್ನು ಜೋಡಣೆ ಮಾಡುವ ಕಾರ್ಯಗಳು ಮುಂದುವರೆದಿದೆ. 
5 ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಭ್ರಷ್ಟಾಚಾರ, ರೈತರ ಆತ್ಮಹತ್ಯೆಗಳಾಗಿವೆ. ರಾಜ್ಯ ಅಭಿವೃದ್ಧಿಯಾಗಿಲ್ಲ. ಆದರೆ, ಮಂತ್ರಿಗಳ ಖಜಾನೆ ಮಾತ್ರ ತುಂಬಿದೆ. ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದ ಬಳಿಕ ತುಮಕೂರಿನಲ್ಲಿ ಆಹಾಹ ಸಂಸ್ಕರಣಾ ಘಟಕವನ್ನು ಸ್ಥಾಪನೆ ಮಾಡಿದ್ದೇವೆ. ಇದರಿಂದ ತುಮಕೂರು ಭಾಗದ ರೈತರಿಗೆ ಅನುಕೂಲವಾಗಿದೆ. 
ಕರ್ನಾಟಕದ 7 ಸ್ಮಾರ್ಟ್ ಸಿಟಿಯ ಯೋಜನೆಗಳಲ್ಲಿ ತುಮಕೂರು ಸಹ ಸೇರಿದೆ. ಸ್ಮಾರ್ಟ್ ಸಿಟಿ ಯೋಜನೆಗೆ ಅಗತ್ಯವಿರುವ ಅನುದಾನವನ್ನು ನಾವು ಈಗಾಗಲೇ ರಾಜ್ಯಕ್ಕೆ ನೀಡಿದ್ದೇವೆ. ಆದರೆ, ಸರ್ಕಾರ ಆ ಹಣವನ್ನು ಖರ್ಚು ಮಾಡದೆಯೇ ಬಾಕಿ ಉಳಿಸಿಕೊಂಡಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.