ರಾಜಕೀಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬಾದಾಮಿಯಲ್ಲಿ ಕಿಚ್ಚ ಸುದೀಪ್ ಮೇ. 9ರಂದು ಪ್ರಚಾರ

ತೀವ್ರ ಕುತೂಹಲ ಕೆರಳಿಸಿರುವ ಜಿದ್ದಾಜಿದ್ದಿನ ಕ್ಷೇತ್ರವಾದ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಮುಖ್ಯಮಂತ್ರಿ ...

ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬಾದಾಮಿಯಲ್ಲಿ  ಕಿಚ್ಚ ಸುದೀಪ್ ಮೇ. 9ರಂದು ಪ್ರಚಾರ
ಮುಖ್ಯಮಂತ್ರಿಯವರನ್ನು ಕೆಲ ದಿನಗಳ ಹಿಂದೆ ಭೇಟಿಯಾಗಿದ್ದ ನಟ ಸುದೀಪ್
Published On :

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಜಿದ್ದಾಜಿದ್ದಿನ ಕ್ಷೇತ್ರವಾದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ ನಟ ಕಿಚ್ಚ ಸುದೀಪ್ ಚುನಾವಣಾ ಪ್ರಚಾರ ನಡೆಸಲು ಒಪ್ಪಿಕೊಂಡಿದ್ದಾರೆ.

ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರನ್ನು ಶತಾಯಗತಾಯ ಸೋಲಿಸಲು ಬಹುದೊಡ್ಡ ತಂತ್ರ ಅನುಸರಿಸುತ್ತಿರುವ ಸಿದ್ದರಾಮಯ್ಯ ಕೊನೆಗೂ ಸುದೀಪ್ ಅವರನ್ನು ತಮ್ಮ ಪರ ಪ್ರಚಾರ ಕೈಗೊಳ್ಳಲು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಕಿಚ್ಚ ಸುದೀಪ್ ಇದೇ ತಿಂಗಳ 9ರಂದು ಬಾದಾಮಿ ಕ್ಷೇತ್ರದಾದ್ಯಂತ ತೆರಳಿ ಸಿದ್ದರಾಮಯ್ಯನವರ ಪರ ಜನರಲ್ಲಿ ಮತ ಯಾಚನೆ ಮಾಡಲಿದ್ದಾರೆ. ಈ ವಿಷಯನನ್ನು ನಟ ಸುದೀಪ್ ಅವರೇ ಖಚಿತಪಡಿಸಿದ್ದಾರೆ. ಸಿದ್ದರಾಮಯ್ಯನವರನ್ನು ಬಾದಾಮಿ ಕ್ಷೇತ್ರದಲ್ಲಿ ಗೆಲ್ಲಿಸಲು ಜನರ ಮನವೊಲಿಸಲು ಅಂದು ಇಡೀ ದಿನ ಪ್ರಚಾರ ನಡೆಸಲಿದ್ದಾರೆ.

ಅತಿ ಗಣ್ಯ ಮತ್ತು ದೊಡ್ಡ ಸ್ಥಾನದಲ್ಲಿರುವ  ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನಗೆ ಹಲವು ಸಮಯಗಳಿಂದ ಆತ್ಮೀಯರಾಗಿದ್ದರು. ಯಾವುದೇ ವಿಷಯಗಳ ಕುರಿತು ಮಾತುಕತೆ, ಚರ್ಚೆ ನಡೆಸಲು ಹೋಗಿದ್ದಾಗ ಚುನಾವಣೆಗೆ ಮುಂಚೆಯೇ ಮುಖ್ಯಮಂತ್ರಿಯಾಗಿ ಅವರು ನನಗೆ ಕಾಲಾವಕಾಶ ನೀಡಿದ್ದರು. ನಾನು ಅವರ ಮುಂದೆ ತುಂಬಾ ಚಿಕ್ಕವನು. ಅವರ ಮೇಲಿನ ಪ್ರೀತಿ,ಅಭಿಮಾನ ಮತ್ತು ಗೌರವದಿಂದ ಪ್ರಚಾರ ಕಾರ್ಯ ನಡೆಸಲು ಹೋಗುತ್ತಿದ್ದೇನೆಯೇ ಹೊರತು ಹಣಕ್ಕಾಗಿ ಅಥವಾ ಬೇರಾವ ಉದ್ದೇಶಕ್ಕೂ ಅಲ್ಲ. ಇಲ್ಲಿ ನನಗೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾಗಿದೆ. ನಾನು ಪ್ರಚಾರ ನಡೆಸಿದ ಮಾತ್ರಕ್ಕೆ ಸಿದ್ದರಾಮಯ್ಯನವರು ಗೆಲ್ಲುತ್ತಾರೆ ಎಂಬ ಅಹಂ ಕೂಡ ನನ್ನಲ್ಲಿ ಇಲ್ಲ ಎಂದು ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.