ರಾಜಕೀಯ

ಅಭಿವೃದ್ಧಿ, ಹಿಂದುತ್ವಗಳೇ ಚುನಾವಣೆಯ ಪ್ರಮುಖ ವಿಚಾರಗಳು: ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ

ಹಿಂದುತ್ವ, ಹಿಂದುಗಳ ಮೇಲಿನ ದಾಳಿ ಹಾಗೂ ಅಭಿವೃದ್ಧಿಗಳೇ ಚುನಾವಣೆಯ ಪ್ರಮುಖ ವಿಚಾರಗಳು ಎಂದು ಬಿಜೆಪಿ ನಾಯಕ ಹಾಗೂ ವಿಧಾನಪರಿಷತ್'ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದಾರೆ...

ಅಭಿವೃದ್ಧಿ, ಹಿಂದುತ್ವಗಳೇ ಚುನಾವಣೆಯ ಪ್ರಮುಖ ವಿಚಾರಗಳು: ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ
ಬಿಜೆಪಿ ಹಿರಿಯ ನಾಯಕ ಹಾಗೂ ವಿಧಾನಪರಿಷತ್'ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ
Published On :
ಶಿವಮೊಗ್ಗ; ಹಿಂದುತ್ವ, ಹಿಂದುಗಳ ಮೇಲಿನ ದಾಳಿ ಹಾಗೂ ಅಭಿವೃದ್ಧಿಗಳೇ ಚುನಾವಣೆಯ ಪ್ರಮುಖ ವಿಚಾರಗಳು ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ವಿಧಾನಪರಿಷತ್'ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದಾರೆ. 
ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಈಶ್ವರಪ್ಪ ಅವರು ಮಾತನಾಡಿದ್ದಾರೆ. 
ಚುನಾವಣೆಯಲ್ಲಿ ಬಿಜೆಪಿ ಭವಿಷ್ಯವನ್ನು ಹೇಗೆ ನೋಡುತ್ತೀರಿ? 
2013ರ ಚುನಾವಣೆಗಿಂತಲೂ 2018 ವಿಭಿನ್ನವಾಗಿದೆ. ಜನರಿಗೆ ಬಿಜೆಪಿ ಹಾಗೂ ಕೆಜೆಪಿ ಆಯ್ಕೆಗಳಿದ್ದು, ಅದು ಕಾಂಗ್ರೆಸ್ ಪಕ್ಷಕ್ಕೆ ಗೆಲುವಿನ ಹಾದಿ ಮಾಡಿಕೊಡಲಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೇಶದ ಹಲವೆಡೆ ಗೆಲುವು ಸಾಧಿಸಿತ್ತು. ಎಲ್ಲಾ ರಾಜ್ಯಗಳಿಲ್ಲೂ ಕಾಂಗ್ರೆಸ್ ಪಕ್ಷ ಸೋಲು ಕಂಡಿತ್ತು. ಇಂದು ಪ್ರಧಾನಮಂತ್ರಿ ಮೋದಿ, ಅಮಿತ್ ಶಾ ಹಾಗೂ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಬಿಜೆಪಿಗೆ ಅತ್ಯುತ್ತಮ ಅವಕಾಶ ದೊರಕಿಗೆ ಎಂದು ಹೇಳಿದ್ದಾರೆ. 
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ವಿಚಾರಗಳೇನಿದೆ? 
ಮಹಿಳೆಯರ ಮೇಲಿನ ದೌರ್ಜನ್ಯ, ಹಿಂದು ಕಾರ್ಯಕರ್ತರ ಮೇಲಿನ ದಾಳಿ, ಹಿಂದುತ್ವ, ಕಾಂಗ್ರೆಸ್ ಸರ್ಕಾರದ ವೈಫಲ್ಯಗಳೇ ಚುನಾವಣೆಯ ಪ್ರಮುಖ ವಿಚಾರಗಳಾಗಿವೆ. ತ್ರಿವಳಿ ತಲಾಖ್ ಸೇರಿದಂತೆ ಇನ್ನಿತರೆ ಜನಪರ ನೀತಿ, ಕಾರ್ಯಗಳು ಚುನಾವಣೆ ವೇಳೆ ನಮಗೆ ಸಹಾಯಕ್ಕೆ ಬರಲಿದೆ. ಅಭಿವೃದ್ಧಿ ಹಾಗೂ ಹಿಂದುತ್ವವೇ ಚುನಾವಣೆ ವೇಳೆ ನಮಗೆ ಪ್ರಮುಖ ವಿಚಾರಗಳಾಗಲಿವೆ ಎಂದು ಹೇಳಿದ್ದಾರೆ. 
ಎಂಎಲ್'ಸಿ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕರಾಗಿ ಶಿವಮೊಗ್ಗದಲ್ಲಿ ಸ್ಪರ್ಧಿಸಲು ಏಕೆ ಇಚ್ಛಿಸುತ್ತಿದ್ದೀರಿ? 
ಇದು ನನ್ನ ನಿರ್ಧಾರವಲ್ಲ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ನಿರ್ದೇಶನ ನೀಡಿದಂತೆ ನಾನು ನಡೆಯುತ್ತಿದ್ದೇನೆ. ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೇ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುವಂತೆ ತಿಳಿಸಿದ್ದರು. ಆ ನಿರ್ದೇಶನವನ್ನಷ್ಟೇ ನಾನು ಪಾಲಿಸುತ್ತಿದ್ದೇನೆಂದು ಹೇಳಿದ್ದಾರೆ. 
ವಿವಾದಾತ್ಮಕ ಹೇಳಿಕೆ ನೀಡುವದರಲ್ಲಿ ಹೆಸರುವಾಸಿ?
ನಾನು ಯಾವಾಗಲೂ ಸತ್ಯವನ್ನೇ ಹೇಳುತ್ತೇನೆ. ಸತ್ಯವನ್ನು ಹೇಳಲು ನಾನು ಹಿಂಜರಿಯುವುದಿಲ್ಲ. ಎಷ್ಟೋ ಬಾರಿ ಜನರು ಆ ಕ್ಷಣದಲ್ಲಿ ಅಲ್ಲದೇ ಹೋದರು ನಂತರ ನನ್ನ ಮಾತು ಸತ್ಯ ಎಂದು ಒಪ್ಪಿಕೊಳ್ಳುತ್ತಾರೆ. ಸತ್ಯ ಹೇಳುವುದೇ ನನ್ನ ಶಕ್ತ. ಅದಕ್ಕೆ ನಾನು ಎಂದಿಗೂ ಹೆದರುವುದಿಲ್ಲ ಎಂದು ತಿಳಿಸಿದ್ದಾರೆ. 
ರೆಡ್ಡಿ ಬ್ರದರ್ಸ್ ಹಾಗೂ ಅವರ ಹಿಂಬಾಲಕರಿಗೆ ಪಕ್ಷದ ಟಿಕೆಟ್ ನೀಡುವ ನಿರ್ಧಾರ ಸರಿಯೇ? 
ಜನಾರ್ಧನ ರೆಡ್ಡಿಯವರಿಗೆ ಪಕ್ಷ ಟಿಕೆಟ್ ನೀಡಿಲ್ಲ. ರೆಡ್ಡಿಯೊಂದಿಗೆ ಪಕ್ಷಕ್ಕೆ ಯಾವುದೇ ರೀತಿಯ ಸಂಪರ್ಕವನ್ನೂ ಹೊಂದಿಲ್ಲ. ಕಳೆದ ಬಾರಿ ಹಾಗೂ ಈ ಬಾರಿ ಅವರ ಸಹೋದರ ಟಿಕೆಟ್ ಪಡೆದುಕೊಂಡಿದ್ದಾರೆ. ಹೀಗಾಗಿ ಇದರಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದಿದ್ದಾರೆ. 
ಸಾಕಷ್ಟು ಪ್ರಾಮಾಣಿಕ ಕಾರ್ಯಕರ್ತರಿಗೆ ಟಿಕೆಟ್ ನಿರಾಕರಿಸಲಾಗಿದೆ, ಹೀಗಾಗಿ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಅಸಮಾಧಾನವನ್ನು ಪಕ್ಷ ಹೇಗೆ ನಿಭಾಯಿಸುತ್ತದೆ? 
ಇದರಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಪ್ರಾಮಾಣಿಕವಾಗಿರುವ ಸಾಕಷ್ಟು ಕಾರ್ಯಕರ್ತರಿಗೆ ಟಿಕೆಟ್ ನೀಡಿಲ್ಲ. ಈ ಬಗ್ಗೆ ಪಕ್ಷ ಸಮಾಲೋಚನೆ ನಡೆಸಲಿದೆ. ನಂತರ ಸಮಸ್ಯೆಗಳೆಲ್ಲವೂ ಪರಿಹಾರಗೊಳ್ಳಲಿದೆ. ಅಸಮಾಧಾನಗಳೇನೆ ಇದ್ದರೂ, ಎಲ್ಲವನ್ನೂ ಪಕ್ಕಕ್ಕಿಟ್ಟು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಲು ಕಾರ್ಯಕರ್ತರು ಹಾಗೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ. 
ಯಾವಾಗಲೂ ಸಿದ್ದರಾಮಯ್ಯ ಅವರನ್ನೇ ಏಕೆ ಗುರಿ ಮಾಡುತ್ತೀರಿ?
ಸಿದ್ದರಾಮಯ್ಯ ಅವರು ತಾವೊಬ್ಬ ಸಾಮಾಜಿಕ ಕಾರ್ಯಕರ್ತನೆಂದು ಹೇಳಿಕೊಳ್ಳುತ್ತಾರೆ. ಆದರೆ, ಅವರ ದೃಷ್ಟಿ ಯಾವಾಗರೂ ಅವಕಾಶವಾದಿಯಂತಿರುತ್ತದೆ. ಹೀಗಾಗಿಯೇ ಕುರುಬರ ಮತಗಳನ್ನು ಸೆಳೆಯುವ ಸಲುವಾಗಿ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯುತ್ತಿದ್ದಾರೆ. ತಾವೊಬ್ಬ ಹಿಂದುಳಿದ ವರ್ಗದವನೆಂದು ಕೂಡ ಸಿದ್ದರಾಮಯ್ಯ ಅವರು ಹೇಳಿಕೊಳ್ಳುತ್ತಾರೆ. ಕಳೆದ 5 ವರ್ಷಗಳಲ್ಲಿ ಹಿಂದುಳಿದವರ ಕಲ್ಯಾಣಕ್ಕಾಗಿ ಏನು ಮಾಡಿದ್ದಾರೆ?... ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದವರ ಅಭಿವೃದ್ಧಿ ಕಾರ್ಯ ಮಾಡುವುದರಲ್ಲಿ ಸಿದ್ದರಾಮಯ್ಯ ಅವರು ವಿಫಲರಾಗಿದ್ದಾರೆಂದು ತಿಳಿಸಿದ್ದಾರೆ. 
ಶಿವಮೊಗ್ಗ ಕ್ಷೇತ್ರದ ಕಣದಲ್ಲಿ ಸ್ಪರ್ಧೆಗಿಳಿಯುತ್ತಿರುವವ ಬಹುತೇಕ ಅಭ್ಯರ್ಥಿಗಳು ಬ್ರಾಹ್ಮಣಕರು, ಕಾಂಗ್ರೆಸ್ ಅಭ್ಯರ್ಥಿ ಕೂಡ ಬ್ರಾಹ್ಮಣ...ಚುನಾವಣೆಯಲ್ಲಿ ಅವರು ನಿರ್ಧಾರಕ ಅಂಶವೆಂದು ನೀವು ಭಾವಿಸುವಿರಾ?
1989ರಲ್ಲಿ ಕಣಕ್ಕಿಳಿಯುವಂತೆ ಪಕ್ಷ ಹೇಳಿದಾಗ, ಕ್ಷೇತ್ರದಲ್ಲಿರುವ ಪ್ರತೀಯೊಬ್ಬರು, ಬ್ರಾಹ್ಮಣರೂ ಸೇರಿ ಎಲ್ಲರೂ ನನಗೆ ಬೆಂಬಲ ವ್ಯಕ್ತಪಡಿಸಿದ್ದರು. ಬ್ರಾಹ್ಮಣರು ಯಾವಾಗಲೂ ಬಿಜೆಪಿಯನ್ನೇ ಬೆಂಬಲಿಸಿದ್ದಾರೆ. ಈ ಬಾರಿ ಕೂಡ ಬಿಜೆಪಿಗೇ ಮತ ನೀಡಲಿದ್ದಾರೆ. ಮುಸ್ಲಿಮರ ಮತ ಕಾಂಗ್ರೆಸ್ ಪರವಾಗಿದೆ ಎಂಬ ವದಂತಿಗಳಿವೆ. ಆದರೆ, ಅವೆಲ್ಲಾ ಸುಳ್ಳು. ಇಡೀ ಸಮುದಾಯ ಒಂದು ಪಕ್ಷದ ಪರವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಾಕಷ್ಟು ವಿಚಾರಗಳನ್ನು ತಲೆಯಲ್ಲಿಟ್ಟುಕೊಂಡೇ ಜನರು ಮತವನ್ನು ಹಾಕುತ್ತಾರೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.