ರಾಜಕೀಯ

ಮೋದಿ ದೇಶದ ಪ್ರಧಾನಿ, ಅವರ ಮೇಲೆ ವೈಯಕ್ತಿಕ ಟೀಕೆ ಇಲ್ಲ : ರಾಹುಲ್ ಗಾಂಧಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರಮೋದಿ ಮೇಲೆ ವೈಯಕ್ತಿಕವಾಗಿ ದಾಳಿಯಿಂದ ಹಿಂದೆ ಸರಿದಿದ್ದಾರೆ.ಅತ್ಯುನ್ನತ ಸ್ಥಾನದಲ್ಲಿರುವವರ ಮೇಲೆ ದಾಳಿ ಮಾಡುವುದು ಉತ್ತಮ ನಡತೆ ಅಲ್ಲ ಎಂದಿದ್ದಾರೆ.

ಮೋದಿ ದೇಶದ ಪ್ರಧಾನಿ,  ಅವರ ಮೇಲೆ ವೈಯಕ್ತಿಕ ಟೀಕೆ ಇಲ್ಲ : ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published On :

ಔರಾದ್ :  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರಮೋದಿ ಮೇಲೆ ವೈಯಕ್ತಿಕವಾಗಿ ದಾಳಿಯಿಂದ ಹಿಂದೆ ಸರಿದಿದ್ದಾರೆ.ಅತ್ಯುನ್ನತ ಸ್ಥಾನದಲ್ಲಿರುವವರ ಮೇಲೆ  ದಾಳಿ ಮಾಡುವುದು ಉತ್ತಮ ನಡತೆ ಅಲ್ಲ ಎಂದಿದ್ದಾರೆ.

ಬೀದರ್ ಜಿಲ್ಲೆಯ ಔರಾದ್ ನಲ್ಲಿಂದು ಕಾಂಗ್ರೆಸ್ ಚುನಾವಣಾಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ,  ರಾಫೆಲ್  ಯುದ್ಧ ವಿಮಾನ, ನೀರವ್ ಮೋದಿ  ಹಗರಣ, ಮತ್ತಿತರ ವಿವಾದಗಳಿಗೆ ನರೇಂದ್ರಮೋದಿ ಉತ್ತರ ನೀಡುತ್ತಿಲ್ಲ. ಆದ್ದರಿಂದ ವೈಯಕ್ತಿಕವಾಗಿ ದಾಳಿ ನಡೆಸುತ್ತಿದೆ ಎಂದಿದ್ದಾರೆ.

ಮೋದಿ ವೈಯಕ್ತಿಕವಾಗಿ ದಾಳಿ ನಡೆಸುವುದು ಜಾಸ್ತಿ. ಅನಾರೋಗ್ಯಕ್ಕೀಡಾದವರಂತೆ ಮಾತನಾಡುತ್ತಾರೆ. ತಪ್ಪಾಗಿ ಮಾತನಾಡುತ್ತಾರೆ, ಅವರಿಗೂ ತಮ್ಮಗೂ ಇರುವ ವ್ಯತ್ಯಾಸ ಇದೆ  ಎಂದರು.

ಕರ್ನಾಟಕದಲ್ಲಿನ ಮೋದಿ ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ನನ್ನ ಬಗ್ಗೆ ಏನಾದರೂ ಮಾತನಾಡಿಕೊಳ್ಳಲಿ , ಅದು ತಪ್ಪು ಇರಬಹುದು ಅಥವಾ ಸರಿ ಇರಬಹುದು, ಆದರೆ,ಇದು ಯಾವುದೇ ಭಿನ್ನಾಭಿಪ್ರಾಯ ಮೂಡಿಸುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

ಮೋದಿ  ದೇಶದ ಪ್ರಧಾನಿಯಾಗಿದ್ದಾರೆ.   ಅವರ ಮೇಲೆ ವೈಯಕ್ತಿಕವಾಗಿ ದಾಳಿ ನಡೆಸುವುದಿಲ್ಲ ಎಂದು ಹೇಳಿದ ರಾಹುಲ್ ಗಾಂಧಿ, ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿದ್ದ ರೆಡ್ಡಿ ಸಹೋದರನಿಗೆ ಬಿಜೆಪಿ ಟಿಕೆಟ್ ನೀಡಿದೆ. ಗಬ್ಬರ್ ಸಿಂಗ್ ಟ್ಯಾಕ್ಸ್  ಜಾರಿಗೊಸಿರುವ ಬಿಜೆಪಿ ಗಬ್ಬರ್ ಸಿಂಗ್   ಗ್ಯಾಂಗ್ ಆಗಿದೆ ಎಂದು ಲೇವಡಿ ಮಾಡಿದರು.

 ಬಿಜೆಪಿಯಲ್ಲಿ ಗಬ್ಬರ್, ಸಾಂಬಾ, ಕಾಲಿಯಾ ಎಲ್ಲರೂ ಇದ್ದಾರೆ. ರೆಡ್ಡಿ ಸಹೋದರರು ಜೈಲಿಗೆ ಹೋಗಿ ಬಂದಿದ್ದಾರೆ.  ಅವರನ್ನು ಚುನಾವಣೆಗೆ ನಿಲ್ಲಿಸಿದ್ದು, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ದೇಶದ ಜನತೆ ಮುಂದೆ ಹೇಳಿ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.