ವರುಣಾ-ಚಾಮುಂಡೇಶ್ವರಿ ಸಿದ್ದರಾಮಯ್ಯ ಅವರ ಎರಡು ಕಣ್ಣುಗಳಾದದ್ದು ಹೇಗೆ?
ವರುಣಾ ಮತ್ತು ಚಾಮುಂಡೇಶ್ವರಿ ಎರಡು ಕ್ಷೇತ್ರಗಳು ನನ್ನ ಎರಡು ಕಣ್ಣುಗಳಿದ್ದಂತೆ ಎಂದು ಕಳೆದ ಐದು ವರ್ಷಗಳಲ್ಲಿ

Published On :
ಚಾಮರಾಜನಗರ: ವರುಣಾ ಮತ್ತು ಚಾಮುಂಡೇಶ್ವರಿ ಎರಡು ಕ್ಷೇತ್ರಗಳು ನನ್ನ ಎರಡು ಕಣ್ಣುಗಳಿದ್ದಂತೆ ಎಂದು ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯ ಅದೆಷ್ಟು ಬಾರಿ ಹೇಳಿದ್ದಾರೋ ಲೆಕ್ಕಕ್ಕೆ ಸಿಗದು.
ಕಳೆದ ಐದು ವರ್ಷಗಳಲ್ಲಿ ಸಿಎಂ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಮಟ್ಟಿಗೆ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಆದರೆ ಚಾಮುಂಡೇಶ್ವರಿ ಕ್ಷೇತ್ರವನ್ನು ದೂರವೇ ಇಟ್ಟಿದ್ದರು, ವರುಣಾದಲ್ಲಿ ಉತ್ತಮ ರಸ್ತೆಗಳು, ರಾಜಕಾಲುವೆ ನಿರ್ಮಾಣ, ಆಧುನೀಕರಣಗೊಂಡ ಕಾಲುವೆಗಳು, ಸಮೃದ್ಧ ಹಸಿರು ಪ್ರದೇಶ, ಶುದ್ದ ಕುಡಿಯುವ ನೀರಿನ ಘಟಕ, ನೂತನ ದೇವಾಲಯಗಳ ನಿರ್ಮಾಣ ಮತ್ತು ಜೀರ್ಣೋದ್ಧಾರ ಮತ್ತು ಸಮುದಾಯ ಭವನಗಳ ನಿರ್ಮಾಣವಾಗಿವೆ,
ಆದರೆ ಸಿಎಂ ಸಿದ್ದರಾಮಯ್ಯ ಅವರ ಮತ್ತೊಂದು ಕಣ್ಣು ಎಂದು ಹೇಳಲಾಗುವ ಚಾಮುಂಡೇಶ್ವರಿಯಲ್ಲಿ ಅಭಿವೃದ್ಧಿ ಎಂಬದು ದೂರವಾಗಿದೆ, ತಮ್ಮ ರಾಜಕೀಯ ಬದ್ಧ ವೈರಿ ಜೆಡಿಎಸ್ ನ ಜಿ.ಟಿ ದೇವೇಗೌಡ ಅವರನ್ನು ಸೋಲಿಸಲು ಸಿದ್ದರಾಮಯ್ಯ ಈ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿರಲಿಲ್ಲ, ಆದರೆ ಕಳೆದ 1 ವರ್ಷದಿಂದ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಸಿದ್ದರಾಮಯ್ಯ ಅವರಿಗೆ ಪ್ರೀತಿ ಉಕ್ಕಿ ಹರಿದಿದ್ದು, ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಚಾಮುಂಡೇಶ್ವರಿಯ ಕೆಲವು ರಸ್ತೆಗಳನ್ನು ರಿಪೇರಿ ಮಾಡಿಸಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಸಿಎಂ ಗೆ ಇದ್ದಕ್ಕಿದ್ದ ಹಾಗೆ ಪ್ರೀತಿ ಬರಲು ಕಾರಣವೂ ಇದೆ, ಏಕೆಂದರೇ 208ರ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರವನ್ನು ತಮ್ಮ ಪುತ್ರನಿಗೆ ಬಿಟ್ಟುಕೊಟ್ಟು ತಾವು ಚಾಮುಂಡೇಶ್ವರಿಯಿಂದ ಸ್ಫರ್ಧಿಸಲು ನಿರ್ಧರಿಸಿದ್ದರು.
ವರುಣಾ ಕ್ಷೇತ್ರದ ಅಭೂತಪೂರ್ವ ಅಭಿವೃದ್ಧಿಯ ಹೊರತಾಗಿಯೂ ಒಕ್ಕಲಿಗರ ಮತ್ತು ಲಿಂಗಾಯತ ಸಮುದಾಯಗಳನ್ನು ಸಿಎಂ ಕಡೆಗಣಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಿದ್ದರಾಮಯ್ಯ ಅವರ ತವರಾದ ಸಿದ್ದರಾಮನ ಹುಂಡಿಯೇ ಇದಕ್ಕೆ ಜ್ವಲಂತ ಸಾಕ್ಷಿ. ಲಿಂಗಾಯತ ಮ್ತು ಒಕ್ಕಲಿಗರ ಕಾಲೋನಿಗಳಲ್ಲಿ ಉತ್ತಮ ಗುಣಮಟ್ಟದ ರಾಜಕಾಲುವೆ ಹಾಗೂ ರಸ್ತೆಗಳನ್ನು ನಿರ್ಮಿಸಲಿಲ್ಲ, ಆದರೆ ಕುರುಬರ ಕಾಲೋನಿಯಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗಿದೆ.
ಸರ್ಕಾದ ಅನುದಾನ ಸಿಂಹಪಾಲು ಗುತ್ತಗೆ ಕೆಲಸ, ಮೈಸೂರು ವಿವಿಯಲ್ಲಿ ಉದ್ಯೋಗ, ಹಾಗೂ ಹೊಸದಾಗಿ ನಿರ್ಮಿತವಾದ ಜಯದೇವ ಹೃದ್ರೋಗ ಆಸ್ಪತ್ರೆ, ಗಾಗಿ ಖರ್ಚು ಮಾಡಲಾಗಿದೆ. ಇಲ್ಲೆಲ್ಲಾ ಸಿದ್ದರಾಮಯ್ಯ ಅವರ ಬೆಂಬಲಿಗರದ್ದೇ ಕಾರುಬಾರು, ಹೀಗಾಗಿ ಜನ ಸಿದ್ದರಾಮಯ್ಯ ಅವರನ್ನು ನಿಂದಿಸುತ್ತಿಲ್ಲ, ಅವರ ಹಿಂದಿರುವ ಬೆಂಬಲಿಗರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಅಲತ್ತೂರಿನ ಲಿಂಗಾಯತ ಸಮುದಾಯವೂ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಹದಿನಾರು, ಮೂಡಳ್ಳಿ, ಮಲ್ಲರಾಜನಹುಂಜಿ ಸೇರಿದಂತೆ ಹಲವು ಗ್ರಾಮಗಳು ಸಿದ್ದರಾಮಯ್ಯ ಅವರ ಜಾತಿ ತಾರತಮ್ಯಕ್ಕೆ ತುತ್ತಾಗಿವೆ.
ಮದ್ದೂರು, ದೂರ, ಮಾರ್ಬಳ್ಳಿ, ಹೊಸನಕೆರೆ, ಹಾಲ್ಯ, ಪುರ ಕೆಂಚೇನಹಳ್ಳಿ,ಸೇರಿದಂತೆ ಹಲವು ಗ್ರಾಮಗಳಲ್ಲಿನ ಕೆರೆಗಳು ಹಲವು ವರ್ಷಗಳಿಂದ ಬರಿದಾಗಿವೆ, ಆದರೆ ಈಈ ಕರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿಲ್ಲ,
ಇನ್ನೂ ಬೀರಿ ಹುಂಡಿ ಎಂಬ ಗ್ರಾಮ ರಾಜಕೀಯ ವೈಷಮ್ಯಕ್ಕೆ ಸಿಲುಕಿ ನರಳುತ್ತಿದೆ,ಜೆಡಿಎಸ್ ಜಿಲ್ಲಾ ಪಂಚಾಯಿತಿ ಸದಸ್ಯ ಬೀರಿಹುಂಡಿ ಬಸವಣ್ಣ ಹಾಗೂ ಕಾಂಗ್ರೆಸ್ ಮುಖಂಡ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮರಿಗೌಡರ ನಡುವೆ ರಾಜಕೀಯ ವೈರತ್ವ ತಾರಕ್ಕೇರಿದ್ದು, ಇಬ್ಬರು ಪರಸ್ಪರ ಬದ್ಧವೈರಗಳಾಗಿದ್ದಾರೆ, ಈ ಗ್ರಾಮದಲ್ಲಿ ರಸ್ತೆಗಳು ಹದಗೆಟ್ಟಿದ್ದು, ಸ್ವಚ್ಛ ಕುಡಿಯುವ ನೀರಿಗೆ ಪರದಾಡುವಂತ ಪರಿಸ್ಥಿತಿ ಎದುರಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Siddaramaiahಸಿದ್ದರಾಮಯ್ಯVarunaವರುಣಾChamundeshwariಚಾಮುಂಡೇಶ್ವರಿKarnataka Assembly Electionಕರ್ನಾಟಕ ವಿಧಾನಸಭೆ ಚುನಾವಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


