ರಾಜಕೀಯ

ಹುಬ್ಭಳ್ಳಿಯ 'ಕಸಬಾಪೇಟೆ ಮಿನಿ ಪಾಕಿಸ್ತಾನ', ಹೇಳಿಕ ಸಮರ್ಥಿಸಿಕೊಂಡ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿಯ ಕಸಬಾಪೇಟೆ ನೋಡಲು ಪಾಕಿಸ್ತಾನದಂತೆಯೇ ಕಾಣುತ್ತದೆ. ಹೀಗಾಗಿ ಅದನ್ನು ಮಿನಿ ಪಾಕಿಸ್ತಾನ ಎಂದಿದ್ದೆ....

ಹುಬ್ಭಳ್ಳಿಯ 'ಕಸಬಾಪೇಟೆ ಮಿನಿ ಪಾಕಿಸ್ತಾನ', ಹೇಳಿಕ ಸಮರ್ಥಿಸಿಕೊಂಡ  ಪ್ರಹ್ಲಾದ್ ಜೋಶಿ
ಪ್ರಹ್ಲಾಜ್ ಜೋಶಿ
Published On :
ಹುಬ್ಬಳ್ಳಿ: ಹುಬ್ಬಳ್ಳಿಯ ಕಸಬಾಪೇಟೆ ನೋಡಲು ಪಾಕಿಸ್ತಾನದಂತೆಯೇ ಕಾಣುತ್ತದೆ. ಹೀಗಾಗಿ ಅದನ್ನು ಮಿನಿ ಪಾಕಿಸ್ತಾನ ಎಂದಿದ್ದೆ ಎಂದು ಧಾರವಾಡ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ತಮ್ಮ ಹೇಳಿಕೆಯನ್ನು ಭಾನುವಾರ ಸಮರ್ಥಿಸಿಕೊಂಡಿದ್ದಾರೆ.
ಈ ಸಂಬಂಧ ತಮ್ಮ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿರುವ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಜೋಶಿ, ಕಸಬಾಪೇಟೆಯ ಬಗ್ಗೆ ನನಗೆ ಹಲವು ದೂರುಗಳು ಬಂದಿದ್ದು, ಆ ಪ್ರದೇಶದ ಸ್ಥಿತಿ ಪಾಕಿಸ್ತಾನದಂತೆಯೇ ಇದೆ. ಹಾಗಾಗಿ ಈ ರೀತಿ ಹೇಳಿಕೆ ನೀಡಿದ್ದೆ. ಆದರೆ ನ್ಯಾಯಾಂಗ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದ್ದು, ಹೋರಾಟ ನಡೆಸುವುದಾಗಿ ಎಎನ್ ಐಗೆ ತಿಳಿಸಿದ್ದಾರೆ.
ಪ್ರಹ್ಲಾದ್ ಜೋಶಿ ಅವರು ಇತ್ತೀಚಿಗೆ ಹತ್ಯೆಯಾದ ಹಿಂದೂ ಯುವಕ ಗವಿಸಿದ್ದಪ್ಪ ಅಂಬಿಗೇರ ಮನೆಗೆ ಭೇಟಿ ಸಂದರ್ಭ, ಕಸಬಾಪೇಟೆ ಮಿನಿ ಪಾಕಿಸ್ತಾನದಂತೆ ಕಾಣುತ್ತಿದೆ. ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದ್ದರು. 
ಈ ಸಂಬಂಧ ಜಮಾತ್ ಮಸೀದಿ ಮುಖ್ಯಸ್ಥರಾದ ಮೊಹಮ್ಮದ್ ಹನೀಫ್ ಜೋಪಡಿ ಅವರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ನಿನ್ನೆ ಪ್ರಕರಣ ದಾಖಲಾಗಿದೆ.
ಐಪಿಸಿ ಸೆಕ್ಷನ್ 153a, 298ರಡಿ ಪ್ರಹ್ಲಾದ್ ಜೋಶಿ ವಿರುದ್ಧ ಪ್ರಕರಣ ದಾಖಲಾಗಿದೆ. ಧರ್ಮಗಳ ನಡುವೆ ಶತ್ರತ್ವ ಬೆಳೆಸುವ ಯತ್ನ(153 ಎ) ಮತ್ತು ಉದ್ದೇಶ ಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಮಾಡಿದ ಆರೋಪ(ಸೆಕ್ಷನ್ 298) ಕೇಸ್ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.