ರಾಜಕೀಯ

ಬಿಬಿಎಂಪಿ ಹಗರಣ: ಕಾಂಗ್ರೆಸ್ ಗೆ ಬಿಜೆಪಿಯಿಂದ ಬಹಿರಂಗ ಚರ್ಚೆಗೆ ಆಹ್ವಾನ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದಿರುವ ಹಗರಣಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ಬರುವಂತೆ ಬಿಜೆಪಿ ಮುಖಂಡರು ಸಚಿವ ರಾಮಲಿಂಗಾ ರೆಡ್ಡಿಗೆ ಆಹ್ವಾನ ನೀಡಿದ್ದಾರೆ...

ಬಿಬಿಎಂಪಿ ಹಗರಣ:  ಕಾಂಗ್ರೆಸ್ ಗೆ ಬಿಜೆಪಿಯಿಂದ ಬಹಿರಂಗ ಚರ್ಚೆಗೆ ಆಹ್ವಾನ
ಬಿಬಿಎಂಪಿ
Published On :
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದಿರುವ ಹಗರಣಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ಬರುವಂತೆ  ಬಿಜೆಪಿ ಮುಖಂಡರು ಸಚಿವ ರಾಮಲಿಂಗಾ ರೆಡ್ಡಿಗೆ ಆಹ್ವಾನ ನೀಡಿದ್ದಾರೆ.
2013– 14ನೇ ಸಾಲಿನಿಂದ ಈವರೆಗೆ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು 21,700 ‍ಪುಟಗಳಷ್ಟು ದಾಖಲೆಗಳನ್ನು ಪ್ರದರ್ಶಿಸಿದ ಬಿಜೆಪಿ ಮುಖಂಡರು, ಈ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿದ್ದಾರೆ.
ಬಿಬಿಎಂಪಿಯ 74 ಹಗರಣಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡಿದ್ದೇವೆ. ಅದರಲ್ಲಿ ಯಾವುದೂ ನಕಲಿ ಅಲ್ಲ. ನಮ್ಮ ಪಕ್ಷದ ನಗರ ಘಟಕದ ವಕ್ತಾರ ಎನ್‌.ಆರ್. ರಮೇಶ್ ಬಿಡುಗಡೆ ಮಾಡಿದ್ದರು. ಆರೋಪಗಳಿಗೆ ದಾಖಲೆ ಕೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಉತ್ತರ ನೀಡಬೇಕು’ ಎಂದು ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ ಒತ್ತಾಯಿಸಿದರು.
ಎಲ್ಲ ಹಗರಣಗಳ ಬಗ್ಗೆ ದಾಖಲೆ ಇಟ್ಟುಕೊಂಡೆ ಆರೋಪ ಮಾಡಿದ್ದೇವೆ. ಕಾಂಗ್ರೆಸ್‌ನವರು ದಿನಾಂಕ ನಿಗದಿ ಮಾಡಿದರೆ ಇಷ್ಟೂ ದಾಖಲೆಗಳನ್ನು ಟೌನ್‌ ಹಾಲ್ ಮುಂದೆ ಪ್ರದರ್ಶನಕ್ಕೆ ಇಡುತ್ತೇವೆ. ಅಲ್ಲೇ ಬಹಿರಂಗ ಚರ್ಚೆ ನಡೆಸೋಣ’ ಎಂದು ಸವಾಲು ಹಾಕಿದರು.‌
‘ಈ ಹಗರಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ಜೆ. ಜಾರ್ಜ್, ಡಿ.ಕೆ.ಶಿವಕುಮಾರ್‌‌ಗೂ ಪಾಲು ಹೋಗಿದೆ. ಈ ಆರೋಪ ಸುಳ್ಳಾಗಿದ್ದರೆ ನನ್ನ ವಿರುದ್ಧ ಯಾರೊಬ್ಬರೂ ಏಕೆ ಮಾನನಷ್ಟ ಮೊಕದ್ದಮೆ ದಾಖಲಿಸಿಲ್ಲ’ ಎಂದು ಅವರು ಪ್ರಶ್ನಿಸಿದರು.
ಈ ಆರೋಪಗಳ ಬಗ್ಗೆ ಮಂಪುರು ಪರೀಕ್ಷೆಗೆ ಒಳಪಡಲು ನಾನು ಸಿದ್ಧನಿದ್ದೇನೆ. ಕಿಕ್‌ ಬ್ಯಾಕ್ ಪಡೆದಿಲ್ಲ ಎಂದರೆ ಕಾಂಗ್ರೆಸ್ ನಾಯಕರು ಮಂಪರು ಪರೀಕ್ಷೆಗೆ ಸಿದ್ಧರಾಗಲಿ’ ಎಂದರು.
‘ಬಿಬಿಎಂಪಿ ಸ್ವತ್ತುಗಳನ್ನು ಬಿಜೆಪಿ ಮಾತ್ರ ಅಡಮಾನ ಇಟ್ಟಿಲ್ಲ. ಕಾಂಗ್ರೆಸ್ ಆಡಳಿದ ಅವಧಿಯಲ್ಲೂ ಕೆಂಪೇಗೌಡ ಮ್ಯೂಸಿಯಂ ಅಡವಿಟ್ಟು ರು 1,430 ಕೋಟಿ ಸಾಲ ಪಡೆಯಲಾಗಿದೆ. ವಿಶ್ವ ವಾಣಿಜ್ಯ ಕಟ್ಟಡದ ಮಾದರಿಯಲ್ಲಿ ಕಟ್ಟಡ ನಿರ್ಮಿಸಲು ಸಾಲ ಪಡೆಯಲಾಗಿದೆ. ಆದರೆ, ಆ ಕಟ್ಟಡ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಮಹಾರಾಜ ಕಾಂಪ್ಲೆಕ್ಸ್‌ ಮಾರಾಟ ಮಾಡಿದ್ದು ಯಾರು’ ಎಂದು ಅವರು ಪ್ರಶ್ನಿಸಿದರು.
ಇನ್ನೂ ಬಿಜೆಪಿ ನಾಯಕರು ಸವಾಲಿಗೆ ಪ್ರತಿಕ್ರಿಯಿಸಿರುವ  ಗೃಹ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ನಾಯಕರು ಕೂಡ ಹಣ ಲೂಟಿ ಮಾಡಿದ್ದಾರೆ, ಸಾರ್ವಜನಿಕರ ಹಣವನ್ನು ನುಂಗಿ ಹಾಕಿದ್ದಾರೆ, ಬಿಜೆಪಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ  ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.