ರಾಜಕೀಯ

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ: ಎಚ್ ಡಿಕೆ

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಥಾನ ...

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ: ಎಚ್ ಡಿಕೆ
ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ
Published On :

ಮಂಗಳೂರು: ಕರ್ನಾಟಕ  ವಿಧಾನಸಭೆಯಿಂದ  ರಾಜ್ಯಸಭೆಗೆ  ನಡೆಯಲಿರುವ ಚುನಾವಣೆಯಲ್ಲಿ ಸ್ಥಾನ ಪಡೆಯಲು  ಕಾಂಗ್ರೆಸ್  ಪಕ್ಷವನ್ನು ಬೇಡಿಕೊಳ್ಳುವ  ಅಗತ್ಯ ಜೆಡಿಎಸ್ ಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ  ಜೆಡಿಎಸ್ ರಾಜ್ಯಾಧ್ಯಕ್ಷ  ಎಚ್.ಡಿ.ಕುಮಾರಸ್ವಾಮಿ  ಹೇಳಿದ್ದಾರೆ. 
 
ಮಂಗಳೂರಿನಲ್ಲಿ ನಿನ್ನೆ   ಸುದ್ದಿಗಾರರೊಂದಿಗೆ ಮಾತನಾಡಿದ  ಅವರು,  ತಮ್ಮ  ಪಕ್ಷದೊಂದಿಗೆ  ಯಾವುದೇ  ರೀತಿಯ  ಹೊಂದಾಣಿಕೆ  ಮಾಡಿಕೊಳ್ಳುವ  ಅಗತ್ಯವಿಲ್ಲ  ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸುತ್ತ ಕಳೆದ ರಾಜ್ಯಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಆಡಿದ ನಾಟಕವನ್ನು ಜೆಡಿಎಸ್ ಮರೆತಿಲ್ಲ  ಎಂದು  ತಿರುಗೇಟು  ನೀಡಿದರು. 

ನಂಜನಗೂಡು-ಗುಂಡ್ಲುಪೇಟೆ  ವಿಧಾನಸಭಾ ಉಪಚುನಾವಣೆ  ಮತ್ತು   ಬೆಂಗಳೂರು  ಮೇಯರ್ ಚುನಾವಣೆ  ವೇಳೆ  ಹೊಂದಾಣಿಕೆಗಾಗಿ  ತಮಗೆ  ಕರೆ  ಮಾಡಿದ್ದು,  ಯಾರು  ಎಂದು ಮುಖ್ಯಮಂತ್ರಿಗೆ  ನೆನಪಿಲ್ಲವೇ  ಎಂದು  ಪ್ರಶ್ನಿಸಿದರು. 

ನೈಸ್ ಹಗರಣದ ಪ್ರಮುಖ ಆರೋಪಿ ಅಶೋಕ್ ಖೇಣಿ ಅವರನ್ನು ಪಕ್ಷಕ್ಕೆ  ಸೇರಿಸಿಕೊಂಡು,
ತನ್ನ  ಭ್ರಷ್ಟ ಗುಣವನ್ನು ಕಾಂಗ್ರೆಸ್ ಪಕ್ಷ ಬಹಿರಂಗಗೊಳಿಸಿದೆ ಎಂದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.