ರಾಜಕೀಯ

ಅಮ್ಮ ಭಗವಾನ್​ ಪಾದುಕೆಯನ್ನು ಮೈಗೆ ಸವರಿಕೊಂಡ ಶಿಕ್ಷಣ ಸಚಿವ ಎನ್.ಮಹೇಶ್: ವಿಡಿಯೋ ವೈರಲ್

ಅಮ್ಮ ಭಗವಾನ್​ ಪಾದುಕೆಯನ್ನು ಸಚಿವ ಎನ್.ಮಹೇಶ್ ತನ್ನ ಮೈಗೆ ಸವರಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ....

ಅಮ್ಮ ಭಗವಾನ್​ ಪಾದುಕೆಯನ್ನು ಮೈಗೆ ಸವರಿಕೊಂಡ ಶಿಕ್ಷಣ ಸಚಿವ ಎನ್.ಮಹೇಶ್: ವಿಡಿಯೋ ವೈರಲ್
ಚಪ್ಪಲಿ ಮೈ ಮೇಲೆ ಸವರಿಕೊಳ್ಳುತ್ತಿರುವ ಸಚಿವ ಮಹೇಶ್
Published On :
ಮೈಸೂರು: ಅಮ್ಮ ಭಗವಾನ್​ ಪಾದುಕೆಯನ್ನು ಸಚಿವ ಎನ್.ಮಹೇಶ್ ತನ್ನ ಮೈಗೆ ಸವರಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಬಿಎಸ್​​ಪಿಯಿಂದ ಗೆದ್ದು  ಸಮ್ಮಿಶ್ರ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿರಾಗಿರುವ ಎನ್.​ಮಹೇಶ್, ವಿಡಿಯೋದಲ್ಲಿ ಅಮ್ಮ ಭಗವಾನ್‌ ಅವರ ಚಪ್ಪಲಿಯನ್ನು ಮೈಮೇಲೆ ಸವರಿಕೊಳ್ಳುವ ಮೂಲಕ ಅಂಬೇಡ್ಕರ್ ಸಿದ್ಧಾಂತವನ್ನು ಗಾಳಿಗೆ ತೂರಿದ್ದಾರೆ ಎಂದು ಅವರ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 
ಅಂಬೇಡ್ಕರ್ ವಿಚಾರಧಾರೆಯನ್ನು ಊರೆಲ್ಲ ಹರಡಿ‌, ಅಂಬೇಡ್ಕರ್ ಸ್ವಾಭಿಮಾನ ಹರಾಜು ಹಾಕಿದ್ದಾರೆ. ಅಂಬೇಡ್ಕರ್ ಸ್ವಾಭಿಮಾನದ ಚಿಂತನೆಯನ್ನು ಸ್ವಾಮೀಜಿ ಅವರ ಚಪ್ಪಲಿ‌ ತಳಕ್ಕಿಟ್ಟಿದ್ದಾರೆ. ಅವರ ಘನತೆ ಕೆಡವಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.