ರಾಜಕೀಯ

2019 ಲೋಕಸಭಾ ಚುನಾವಣೆಗೆ ಸಿದ್ಧರಾಗಿ: ಪಕ್ಷದ ನಾಯಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತಗೊಂಡ ಶಾಸಕರು ಕುಗ್ಗದೆ 2019ರ ಲೋಕಸಭಾ ಚುನಾವಣೆಗೆ ಸಿದ್ಧರಾಗುವಂತೆ ಕಾಂಗ್ರೆಸ್ ನಾಯಕರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ...

2019 ಲೋಕಸಭಾ ಚುನಾವಣೆಗೆ ಸಿದ್ಧರಾಗಿ: ಪಕ್ಷದ ನಾಯಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
Published On :
ಮೈಸೂರು; ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತಗೊಂಡ ಶಾಸಕರು ಕುಗ್ಗದೆ 2019ರ ಲೋಕಸಭಾ ಚುನಾವಣೆಗೆ ಸಿದ್ಧರಾಗುವಂತೆ ಕಾಂಗ್ರೆಸ್ ನಾಯಕರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 
ನಗರದಲ್ಲಿ ಬುಧವಾರ ನಡೆದ ವಿಜೇತ ಮತ್ತು ಪರಾಜಿತ ಅಭ್ಯರ್ಥಿಗಳ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿರುವ ಅವರು, ಲೋಕಸಭಾ ಚುನಾವಣೆ ಹತ್ತಿರದಲ್ಲಿಯೇ ಇದ್ದು, ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ಹೀಗಾಗಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋತ ಕಾರಣಕ್ಕೆ ಕುಗ್ಗದೆ, ಜನರಿಂದ ದೂರವಿರದೆ, ಚುನಾವಣೆಗೆ ಸಿದ್ಧತೆಗಳನ್ನು ನಡೆಸುವಂತೆ ನಾಯಕರಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. 
ಸಭೆಯಲ್ಲಿ ಪ್ರತೀಯೊಬ್ಬ ಅಭ್ಯರ್ಥಿಯ ಮಾತುಗಳನ್ನೂ ಸಿದ್ದರಾಮಯ್ಯ ಅವರು ತಾಳ್ಮೆಯಿಂದ ಕೇಳಿದರು. ಸಭೆಯಲ್ಲಿ ಮಾತನಾಡಿದ ಪೆರಿಯಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಕೆ. ವೆಂಕಟೇಶ್ ಅವರು, ಪ್ರತ್ಯೇಕ ಸಮುದಾಯವೊಂದು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದೇ ಇರುವುದು ನಿಜಕ್ಕೂ ಆಶ್ಚರ್ಯವನ್ನು ತಂದಿದೆ. ಬಿಜೆಪಿ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಳಿಸಿತ್ತು. ಇದರಿಂದ ಕೆಲ ಸಮುದಾಯಗಳು ಜೆಡಿಎಸ್ ಪಕ್ಷಕ್ಕೆ ಮತಹಾಕಲು ಸಹಾಯಕವಾದವು ಎಂದು ಹೇಳಿದ್ದಾರೆ. 
ಬಳಿಕ ಮಾತನಾಡಿದ ಹುಣಸೂರು ಶಾಸಕ ಹೆಚ್.ಪಿ ಮಂಜುನಾಥ್ ಅವರು, ಪಕ್ಷದ ಕಾರ್ಯಕರ್ತರು ಹಾಗೂ ನಾಯಕರ ಮೇಲೆ ಅತಿಯಾದ ನಂಬಿಕೆಯನ್ನು ಇಟ್ಟಿದ್ದೇ ಸೋಲಿಗೆ ಕಾರಣವಾಯಿತು ಎಂದು ಹೇಳಿದ್ದಾರೆ. 
ಪಕ್ಷದೊಳಗಿನ ನಾಯಕರಲ್ಲಿ ಮೂಡಿದ್ದ ಗೊಂದಲಗಳಿಂದಾಗಿ ಪಕ್ಷ ಸೋಲು ಕಾಣುವಂತಾಯಿತು ಎಂದು ಚಾಮರಾಜ ಕ್ಷೇತ್ರ ಶಾಸಕ ವಾಸು ಅವರು ಹೇಳಿದರು. 
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಮತ್ತೆಂದೂ ಈ ರೀತಿಯ ತಪ್ಪುಗಳು ಸಂಭವಿಸದಂತೆ ಕೆಪಿಸಿಸಿ ಮುಖ್ಯಸ್ಥರ ಬಳಿ ದೂರು ದಾಖಲಿಸುವಂತೆ ಸಲಹೆ ನೀಡಿದರು. 
ಸರ್ಕಾರ ಹಾಗೂ ಪಕ್ಷ ಉತ್ತಮವಾಗಿ ಕೆಲಸ ಮಾಡಿದ್ದರಿಂದಾಗಿ ಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲು ಕಾರಣವಾಯಿತು. ಮೈತ್ರಿ ಮಾಡಿಕೊಂಡ ಕಾರಣಕ್ಕೆ ನಾವು ಗೆಲವು ಸಾಧಿಸಿದ್ದಲ್ಲ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಹಳೆಯ ನೆನಪುಗಳನ್ನು ಮೆಲಕು ಹಾಕಿದ ಸಿದ್ದರಾಮಯ್ಯ ಅವರು, ರಾಜಕೀಯಕ್ಕಿಂತ ನನಗೆ ಖುಷಿ ಕೊಟ್ಟಿದ್ದು ಶಿಕ್ಷಕ ವೃತ್ತಿ. ಮೂರು ವರ್ಷ ಪಾಠ ಮಾಡಿದ್ದೆ. ವಿದ್ಯಾರ್ಥಿಗಳೊಂದಿಗೆ ಉತ್ತಮ ಒಡನಾಟ ಇತ್ತು. 1 ಗಂಟೆಯ ಕಾಲ ಪಾಠ ಮಾಡುವುದು ಅತ್ಯಂತ ಖುಷಿ ಕೊಡುತ್ತಿತ್ತು. ಒಂದು ವೇಳೆ ರಾಜಕೀಯಕ್ಕೆ ಬರಲಿಲ್ಲ ಎಂದಿದ್ದರೆ, ಪ್ರಖ್ಯಾತ ಪ್ರಾಧ್ಯಾಪಕನಾಗುತ್ತಿದ್ದೆ ಎಂದು ತಮ್ಮ ಶಿಕ್ಷಕ ವೃತ್ತಿ ಜೀವನವನ್ನು ನೆನಪಿಸಿಕೊಂಡರು. 
ಈಗಲೂ ಶಿಕ್ಷಕ ವೃತ್ತಿಯ ಅಭಿಮಾನ, ಪ್ರೀತಿ ಇದೆ. ಆದರೆ, ಈಗ ಏನು ಮಾಡೋದು, 71 ವರ್ಷ ವಯಸ್ಸಾಗಿದೆ. ಈಗ ಪಾಠ ಮಾಡೋಕೆ ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.