ಜಿಟಿ ದೇವೇಗೌಡರ ಉನ್ನತ ಶಿಕ್ಷಣ ಖಾತೆ ಬದಲಿಸಲು ಸಿಎಂ ಕುಮಾರಸ್ವಾಮಿ ಒಪ್ಪಿಗೆ
ಉನ್ನತ ಶಿಕ್ಷಣ ಖಾತೆ ವಹಿಸಿಕೊಳ್ಳಲು ನಿರಾಕರಿಸಿದ್ದ ಸಚಿವ ಜಿ.ಟಿ. ದೇವೇಗೌಡ ಅವರ ಖಾತೆಯನ್ನು ಬದಲಿಸಲು...

Published On :
ಮೈಸೂರು: ಉನ್ನತ ಶಿಕ್ಷಣ ಖಾತೆ ವಹಿಸಿಕೊಳ್ಳಲು ನಿರಾಕರಿಸಿದ್ದ ಸಚಿವ ಜಿ.ಟಿ. ದೇವೇಗೌಡ ಅವರ ಖಾತೆಯನ್ನು ಬದಲಿಸಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ.
ಜಿ.ಟಿ. ದೇವೇಗೌಡರಿಗೆ ನೀಡಿರುವ ಉನ್ನತ ಶಿಕ್ಷಣ ಖಾತೆಯನ್ನು ವಾಪಸ್ ಪಡೆದು, ಅವರಿಗೆ ಸಹಕಾರ ಖಾತೆ ನೀಡಲು ಕುಮಾರಸ್ವಾಮಿ ಒಪ್ಪಿದ್ದು, ಇನ್ನು ಒಂದೆರಡು ದಿನಗಳಲ್ಲೇ ಈ ಕುರಿತು ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.
ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ ಬದಲು ಅಬಕಾರಿ ಖಾತೆ ನೀಡುವ ಉದ್ದೇಶ ಇತ್ತು. ಆದರೆ, ದೇವೇಗೌಡರು ರೈತರು, ಜನರ ಮಧ್ಯೆ ಕೆಲಸ ಮಾಡುವ ಖಾತೆ ನೀಡುವಂತೆ ಕೋರಿದ ನಂತರ ಸಹಕಾರ ಖಾತೆ ವಹಿಸಲು ಕುಮಾರಸ್ವಾಮಿ ನಿರ್ಧಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಜೆಟಿ ದೇವೇಗೌಡ ಅವರು, ನನಗೆ ನೀಡಿದ್ದ ಉನ್ನತ ಶಿಕ್ಷಣ ಖಾತೆ ಬದಲು ಸಹಕಾರ ಖಾತೆ ಕೊಡಲು ಸಿಎಂ ಕುಮಾರಸ್ವಾಮಿ ಒಪ್ಪಿದ್ದಾರೆ. ಉನ್ನತ ಶಿಕ್ಷಣ ಖಾತೆಯನ್ನು ನಿಭಾಯಿಸಲು ಆಗೋದಿಲ್ಲ ಅಂತ ಅಲ್ಲ. ರೈತರು, ಜನಸಾಮಾನ್ಯರ ಜೊತೆ ಇದ್ದು ಕೆಲಸ ಮಾಡುವ ಖಾತೆ ನೀಡುವಂತೆ ಕೋರಿದ್ದೆ. ಅಬಕಾರಿ ಖಾತೆ ಕೊಡುವುದಾಗಿ ಹೇಳಿದರು. ಆದರೆ, ಈ ಖಾತೆ ಬೇಡ ಎಂದು ಮನವಿ ಮಾಡಿದೆ. ಸಹಕಾರ ಖಾತೆ ಸಿಗುವ ಭರವಸೆ ಇದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


