ರಾಜಕೀಯ

ಸಮ್ಮಿಶ್ರ ಸರ್ಕಾರದ ಏಕೈಕ ಮಹಿಳಾ ಸಚಿವೆ ಜಯಮಾಲಾ!

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ 25 ಸಚಿವರಲ್ಲಿ ಚಿತ್ರ ನಟಿ ಜಯಮಾಲಾ ಏಕೈಕ ಸಚಿವೆಯಾಗಿದ್ದಾರೆ, ...

ಸಮ್ಮಿಶ್ರ ಸರ್ಕಾರದ ಏಕೈಕ ಮಹಿಳಾ ಸಚಿವೆ ಜಯಮಾಲಾ!
ಜಯಮಾಲಾ
Published On :
ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ 25 ಸಚಿವರಲ್ಲಿ ಚಿತ್ರ ನಟಿ ಜಯಮಾಲಾ ಏಕೈಕ ಸಚಿವೆಯಾಗಿದ್ದಾರೆ, 62 ವರ್ಷದ ಜಯಮಾಲಾ ಸಮ್ಮಿಶ್ರ ಸರ್ಕಾರದ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಕುಮಾರ್ ಬಂಗಾರಪ್ಪ, ಉಮಾಶ್ರಿ, ಅನಂತ್ ನಾಗ್ ಮುಂತಾದ ನಟು ಕಿರಿಯ ಸಚಿವರಾಗಿದ್ದರು, ಆದರೆ ಜಯಮಾಲಾ ಮೊದಸ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಪಡೆದಿದ್ದಾರೆ, ಬಿಲ್ಲವ ಸಮುದಾಯದ ಎಂಎಲ್ ಸಿ ಆಗಿರುವ ಜಯಮಾಲಾ ಮೊದಲ ಬಾರಿಗೆ ಪರಿಷತ್ ನಿಂದ ನೇರವಾಗಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ, ಜೊತೆಗೆ ಮೇಲ್ಮನೆಯ ಸಭಾನಾಯಕಿಯಾಗಿದ್ದಾರೆ.
ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಾಗಿರಲಿಲ್ಲ, ನನ್ನ ಪ್ರತಿಭೆಯನ್ನು ಗುರುತಿಸಿ ನೀಡಿದ್ದಾರೆ ಎಂದು ಜಯಮಾಲಾ ಪ್ರತಿಕ್ರಿಯಿಸಿದ್ದಾರೆ.ಕಾನೂನು ವ್ಯವಹಾರಗಳ ಖಾತೆ ಹೊರತು ಪಡಿಸಿ ಬೇರೆ ಯಾವುದೇ ಜವಾಬ್ದಾರಿ ನೀಡಿದರು ನಿರ್ವಹಿಸುವುದಾಗಿ ತಿಳಿಸಿದ್ದಾರೆ.
ಮಹಿಳೆಯರ ಸಂಬಂಧಿತ ವಿಷಯಗಳಲ್ಲಿ ನನಗೆ ಹೆಚ್ಚು ಆಸಕ್ತಿ, ಆಲಮಟ್ಟಿ ಯೋಜನೆ ನಂತರ ಮಹಿಳೆರಯ ಪುನರ್ವಸತಿ ಬಗ್ಗೆ ಪಿಎಚ್ ಡಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಬಿಲ್ಲವ ಸಮುದಾಯದ ಏಕಮಾತ್ರ ಪ್ರತಿನಿಧಿಯಾಗಿರುವ ಜಯಮಾಲಾಗೆ ಒತ್ತಡದಿಂದಾಗಿ ಸಂಪುಟದಲ್ಲಿ ಸ್ಥಾನ ನೀಡಿರಬಹುದು ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ,
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜನಿಸಿದರೂ ಚಿಕ್ಕಮಗಳೂರಿನ ಗೌರಿಕಾಲುವೆಯಲ್ಲಿ ಬಾಲ್ಯ ಕಳೆದಿದ್ದ ಜಯಮಾಲಾ ನಂತರ ಚಲನಚಿತ್ರ ಕ್ಷೇತ್ರದಲ್ಲಿ ಹಂತ ಹಂತವಾಗಿ ಬೆಳೆದು ಪ್ರಸಿದ್ಧಿಗೆ ಬಂದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.