ಖಾಸಗಿ ವಿಮಾನಕ್ಕೆ ಬ್ರೇಕ್, ಸ್ವಂತ ಹಣದಲ್ಲೇ ಇಂಧನ: ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗದಂತೆ ಸಿಎಂ ಕ್ರಮ
: ಅನಗತ್ಯ ಸಿಬ್ಬಂದಿ, ಕಚೇರಿಗಳ ನವೀಕರಣ ಸೇರದಂತೆ ಹಲವು ಅನುಪಯುಕ್ತ ವೆಚ್ಚಗಳಿಗೆ ಕಡಿವಾಣ ಹಾಕುವಂತೆ ಕುಮಾರ ಸ್ವಾಮಿ ಆದೇಶ ನೀಡಿದ ...

Published On :
ಬೆಂಗಳೂರು: ಅನಗತ್ಯ ಸಿಬ್ಬಂದಿ, ಕಚೇರಿಗಳ ನವೀಕರಣ ಸೇರದಂತೆ ಹಲವು ಅನುಪಯುಕ್ತ ವೆಚ್ಚಗಳಿಗೆ ಕಡಿವಾಣ ಹಾಕುವಂತೆ ಕುಮಾರ ಸ್ವಾಮಿ ಆದೇಶ ನೀಡಿದ ಬೆನ್ನಲ್ಲೇ ತಾವು ಖಾಸಗಿ ವಿಮಾನಗಳಲ್ಲಿ ಪ್ರಯಾಣಿಸುವುದಿಲ್ಲ ಎಂದು ಹೇಳಿ ಸಾರ್ವಜನಿಕರ ಹಣ ಪೋಲಾಗುವುದನ್ನು ತಪ್ಪಿಸಲು ಸಿಎಂ ಮುಂದಾಗಿದ್ದಾರೆ.
ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಮಾತನಾಡಿದ ಕುಮಾರ ಸ್ವಾಮಿ, ಮೇ 17 ರಿಂದ ಮೇ 20 ರವರೆಗೆ ಸಿಎಂ ಆಗಿದ್ದ ಯಡಿಯೂರಪ್ಪನವರು ಮೂರು ದಿನಗಳಲ್ಲಿ 13 ಲಕ್ಷ ಪ್ರಯಾಣ ವೆಚ್ಚ ಮಾಡಿದ್ದಾರೆ ಎಂದು ಟೀಕಿಸಿದರು.
ಒಂದನೇ ತರಗತಿಯಿಂದ ಪದವಿಯವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ಧೇಶವಿದೆ ಎಂದು ಹೇಳಿದ್ದಾರೆ. ನಾನು ಅದೃಷ್ಟದಿಂದ ಸಿಎಂ ಆಗಿದ್ದೇನೆ, ಕಾಂಗ್ರೆಸ್ ಬೆಂಬಲದಿಂದಾಗಿ ನಾನು ಸಿಎಂ ಆಗಿದ್ದೇನೆ, ನನಗೆ ಗೊತ್ತಿಲ್ಲ ಅವರು ಎಲ್ಲಿಯವರೆಗೂ ಬೆಂಬಲ ನೀಡುತ್ತಾರೋ ಅಲ್ಲಿಯವರೆಗೂ ಮಾತ್ರ ನಾನು ಮುಖ್ಯಮಂತ್ರಿ, ಅಲ್ಲಿಯವರೆಗೂ ನಾನು ಸಿಎಂ ಆಗಿ ಸರಿಯಾದದದ್ದನ್ನೇ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ,ರೈತರ ಸಾಲ ಮನ್ನಾ ಮಾಡಲು ಬಳಸುವುದಾಗಿ ತಿಳಿಸಿದ್ದಾರೆ, ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣ ನ್ಯಾಯಯುತಕವಾಗಿ ಬಳಕೆಯಾಗಬೇಕು, ಹೀಗಾಗಿ ನಾನು ಖಾಸಗಿ ವಿಮಾನಗಳಲ್ಲಿ ಪ್ರಯಾಣಿಸಲು ಜನರ ಹಣವನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ, ಸರ್ಕಾರಿ ಕಾರುಗಳನ್ನು ನಾನು ಬಳಸುವಾಗ ನನ್ನದೇ ಹಣದಿಂದ ಇಂಧನ ತುಂಬಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ತೆರಿಗೆಯ ಪ್ರತಿಯೊಂದು ಪೈಸೆ ಪರಿಣಾಮಕಾರಿಯಾಗಿ ಬಳಕೆಯಾಗಬೇಕು, ಸರ್ಕಾರದ ಆರ್ಥಿಕತೆಗೆ .ಯಾವುದೇ ತೊಂದರೆಯಾಗದಂತೆ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ..
ರಾಜ್ಯದ ಹಣಕಾಸು ವ್ಯವಸ್ಥೆಗೆ ಧಕ್ಕೆಯಾಗದಂತೆ ಚೌಕಟ್ಟಿನೊಳಗೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿಗಳಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ಕಾಲೇಜು ಶಿಕ್ಷಣ ಪಡೆದ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಆಡಳಿತ ಮಂಡಳಿ ಸನ್ಮಾನ ಸಮಾರಂಭ ಹಮ್ಮಿಕೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
HD Kumaraswamyಖಾಸಗಿ ವಿಮಾನಎಚ್ .ಡಿ ಕುಮಾರಸ್ವಾಮಿKarnataka politicsprivate flightsave public moneyಸಾರ್ವಜನಿಕರ ಹಣ ಉಳಿತಾಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


