ಕಪ್ಪು ಹಣ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ: ಡಿವಿ ಸದಾನಂದ ಗೌಡ
ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಸರ್ಕಾರದ ವಿರುದ್ಧ ಯಾವುದೇ ಒಂದು ಭ್ರಷ್ಠಾಚಾರ ಆರೊಪಗಳೂ ಕೇಳಿ ಬಂದಿಲ್ಲ.

Published On :
ಹಾಸನ: ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಸರ್ಕಾರದ ವಿರುದ್ಧ ಯಾವುದೇ ಒಂದು ಭ್ರಷ್ಠಾಚಾರ ಆರೊಪಗಳೂ ಕೇಳಿ ಬಂದಿಲ್ಲ. ನಾವು ಪ್ರಧಾನಿಗಳು ನೀಡಿದ್ದ ಭರವಸೆಯನ್ನು ಈಡೇರಿಸುವ ಸಲುವಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. 5 ವರ್ಷದ ಆಡಳಿತಾವಧಿ ಪೂರ್ಣಗೊಳ್ಳುವ ವೇಳಗೆ ಎಲ್ಲಾ ಭರವಸೆಗಳನ್ನೂ ಸಂಪೂರ್ಣವಾಗಿ ಈಡೇರಿಸುತ್ತೇವೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಸದಾನಂದ ಗೌಡ ವಿದೇಶದಿಂದ ಕಪ್ಪು ಹಣ ತರುವ ಸಂಬಂಧ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.ಆದರೆ ಇದುವರೆಗೆ ಎಷ್ಟು ಹಣ ಬಂದಿದೆ ಎನ್ನುವುದು ನನಗೆ ಗೊತ್ತಿಲ್ಲ ಎಂದರು.
ನಾವು ದೇಶದ ಘನತೆ ಹೆಚ್ಚಿಸುವ ಕೆಲಸ ಮಾಡಿದ್ದೇವೆ.ನಮ್ಮ ವಿದೇಶೀ ವಿನಿಮಯ ಪ್ರಮಾಣ 41,700 ಕೋಟಿ ಡಾಲರ್ಗೆ ತಲುಪಿದೆ. ಜಾಗತಿಕವಾಗಿ ಪ್ರಮುಖ ನಿರ್ಣಯ ತೆಗೆದುಕೊಳ್ಳುವ ಸಂದರ್ಭ ಭಾರತದ ಸಲಹೆ ಕೇಳುವ ಮಟ್ಟಕ್ಕೆ ನಮ್ಮ ದೇಶ ಅಭಿವೃದ್ದಿ ಸಾಧಿಸಿದೆ ಎಂದ ಸದಾನಂದ ಗೌಡ ದೇಶದ ಆರ್ಥಿಕ ಪ್ರಗತಿ ಉತ್ತಮವಾಗಿದೆ ಎಂದಿದ್ದಾರೆ.
ಮಹದಾಯಿ ವಿವಾದ ಬಗೆಹರಿಸುವುದಕ್ಕೆ ಕಾಂಗ್ರೆಸ್ ಬಿಡಲಿಲ್ಲ. ವಿವಾದ ಪರಿಹಾರಕ್ಕೆ ಅಡ್ಡಗಾಲು ಹಾಕಿದ್ದು ಕಾಂಗ್ರೆಸ್ ಎಂದು ಡಿವಿಎಸ್ ವಾಗ್ದಾಳಿ ನ್ಬಡೆಸಿದ್ದಾರೆ.
ಪೇಜಾವರ ಶ್ರೀಗಳು ನರೇಂದ್ರ ಮೋದಿ ಸರ್ಕಾರ ಏನೂ ಕೆಲಸ ಮಾಡಿಲ್ಲ ಎಂದು ಹೇಳಿಲ್ಲ. ಅವರು ಕಪ್ಪು ಹಣ ಹಿಂದೆ ತನ್ನಿ, ಗಂಗಾ ನದಿ ಸ್ವಚ್ಚಗೊಳಿಸುವ ಕಾರ್ಯ ಮಾಡಿ ಎಂದು ಸಲಹೆ ಮಾಡಿದ್ದಾರೆ ಎಂದರು.
ಸಮ್ಮಿಶ್ರ ಸರ್ಕಾರ ಹಣ್ಣಾಗಿದೆ
ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಇದಾಗಲೇ ಹಣ್ಣಾಗಿದೆ, ಈ ಹಣ್ಣು ಯಾವಾಗ ಬೇಕಾದರೆ ಬಿಳಬಹುದು. ಮೇಲಾಗಿ ಇದಕ್ಕೆ ನಿಪಾ ಸೋಂಕು ಅಂಟಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
ದೋಸ್ತಿ ಸರ್ಕಾರ ಬಿದ್ದರೆ ನಾವು ಸರ್ಕಾರ ರಚಿಸುತ್ತೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಹ ಈ ಮೈತ್ರಿ ಮುಂದುವರಿಯಲಿದೆ ಎನ್ನುವುದಕ್ಕೆ ಯಾವ ಪುರಾವೆ ಇಲ್ಲ. ಏಕೆಂದರೆ ಅಲ್ಲಿಯವರೆಗೆ ಈ ಸರ್ಕಾರ ಉಳಿಯುತ್ತದೆಯೆ ಎನ್ನುವುದು ಪ್ರಶ್ನೆ ಎಂದು ಗೇಲಿ ಮಾಡಿದ್ದಾರೆ.
ಪೆಟ್ರೋಲಿಯಂ ಜಿಎಸ್ಟಿ ವ್ಯಾಪ್ತಿಗೆ ಬಂದರೆ ಬೆಲೆ ಕಡಿಮೆಯಾಗಲಿದೆ ಎಂದ ಗೌಡರು ಕಳೆದ ನಾಲ್ಕು ವರ್ಷಗಳಲ್ಲಿ ಆಡಳಿತದಲ್ಲಿ ಪಾರದರ್ಷಕತೆ ತರಲಾಗಿದೆ. ಇನ್ನು ನಮ್ಮ ರಿಪೋರ್ಟ್ ಕಾರ್ಡ್ ನ್ನು ಜನರ ಮುಂದೆ ಇಡುವ್ ಮೂಲಕ ಜನಮೌಲ್ಯ ಮಾಪನಮಾಡುವ ವ್ಯವಸ್ಥೆ ಮಾಡಲಿದ್ದೇವೆ. ಸಾರ್ವಜನಿಕರ ಅಭಿಪ್ರಾಯ ಪಡೆದು ಬಳಿಕ ಮುಂದಿನ ಬಜೆಟ್ ನ ಆದ್ಯತೆಯನ್ನು ನಿರ್ಧರಿಸಲಾಗುತ್ತದೆ ಎಂದರು..
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿBlack moneyDV Sadananda Gowdaಕಪ್ಪು ಹಣBribe caseಡಿ.ವಿ. ಸದಾನಂದ ಗೌಡಭ್ರಷ್ಠಾಚಾರ ಪ್ರಕರಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


