ರಾಜಕೀಯ

ನನಗೆ ನೋವಾದಾಗ ತುಂಬಾ ಭಾವುಕನಾಗುತ್ತೇನೆ: ಸಿಎಂ ಕುಮಾರ ಸ್ವಾಮಿ

ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಾನು ಕಠಿಣನಾಗಿರುತ್ತೇನೆ ಹಾಗೆಯೇ ನೋವಾದಾಗ ತುಂಬಾ ಭಾವುಕನಾಗುತ್ತೇನೆ ಎಂದು ಸಿಎಂ ಎಚ್.ಡಿ ...

ನನಗೆ ನೋವಾದಾಗ ತುಂಬಾ ಭಾವುಕನಾಗುತ್ತೇನೆ: ಸಿಎಂ ಕುಮಾರ ಸ್ವಾಮಿ
ಎಚ್.ಡಿ ಕುಮಾರಸ್ವಾಮಿ
Published On :
ಬೆಂಗಳೂರು: ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಾನು ಕಠಿಣನಾಗಿರುತ್ತೇನೆ ಹಾಗೆಯೇ ನೋವಾದಾಗ ತುಂಬಾ ಭಾವುಕನಾಗುತ್ತೇನೆ ಎಂದು ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಸಿಎಂ, ಇದು ನನ್ನ ಸ್ವಾಭಾವಿಕ ವರ್ತನೆ, ಜನರ ಮುಂದೆ ಬಹಿರಂಗವಾಗಿ ನನ್ನ ನೋವನ್ನು ತೋಡಿಕೊಳ್ಳುತ್ತೇನೆ, ನನಗೆ  ಅದೊಂದು ನೈಸರ್ಗಿಕ ಕ್ರಿಯೆ, ಅದಕ್ಕೆ ಯಾವುದೇ ಬಣ್ಣ ಇರುವುದಿಲ್ಲ, ನನ್ನ ನಡವಳಿಕೆಯಂತೆ ನನ್ನ ಕಣ್ಣೀರು ಕೂಡ ಪಾರದರ್ಶಕವಾಗಿರುತ್ತದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕ್ರಮದಲ್ಲಿ ಮಾತನಾಡುವಾದಗ ಕುಮಾರ ಸ್ವಾಮಿ ಭಾವುಕರಾಗಿ ಕಣ್ಣೀರು ಹಾಕಿದ್ದರು, ನನ್ನ ನೋವನ್ನು ಜನರ ಜೊತೆ ಹಂಚಿಕೊಂಡಿದ್ದೇನೆ, ನನ್ನ ಕಣ್ಣೀರು ಸತ್ಯವಾದದ್ದು, ಇದಕ್ಕೆ ವಿಭಿನ್ನ ಅರ್ಥಕೊಡುವ ಅಗತ್ಯವಿಲ್ಲ ಎಂದು ಕುಮಾರ ಸ್ವಾಮಿ ತಿಳಿಸಿದ್ದಾರೆ.
ಮುಖ್ಯಮಂತ್ರಿಯಾಗಿ ನಾನು ರೈತರ ಸಾಲ ಮನ್ನಾ ಮಾಡಲು ತುಂಬಾ ಶ್ರಮಿಸುತ್ತಿದ್ದೇನೆ, ನಾನು ಪ್ರಯತ್ನ ಪಡುತ್ತಿದ್ದರೂ ಜನ ನನ್ನನ್ನು ಪ್ರೋತ್ಸಾಹಿಸುತ್ತಿಲ್ಲ,ಹೀಗಾಗಿ ನಾನು ನೋವು ವ್ಯಕ್ತ ಪಡಿಸಿದೆ ಎಂದು ತಿಳಿಸಿದ್ದಾರೆ.
ಸದ್ಯ ದೆಹಲಿಯಲ್ಲಿರುವ ಸಿಎಂ ಕುಮಾರ ಸ್ವಾಮಿ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದಾರೆ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಹಾಗೂ  ರಾಜ್ಯದ ಹಲವು ಸಂಸದರನ್ನು ಸಿಎಂ ಭೇಟಿಯಾಗಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.