ರಾಜಕೀಯ

ವಿಧಾನ ಸಭೆಯಲ್ಲಿ ಎಚ್ ಡಿಕೆ ಬಜೆಟ್ ಮಂಡನೆ: ಸದನಕ್ಕೆ ಗೈರಾಗಿ ಮಠದಲ್ಲಿ ಡಿಕೆಶಿ, ಹೋಮ-ಹವನ ನಡೆಸಿದ್ದು ಏಕೆ?

ಸಚಿವ ಡಿ.ಕೆ ಶಿವಕುಮಾರ್ ಗೈರಾಗಿದ್ದರು. ಸದನಕ್ಕೆ ಬಾರದ ಡಿಕೆಶಿ ಪತ್ನಿ ಉಷಾ ಅವರೊಂದಿಗೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಸೋಮೆಕಟ್ಟೆ ಕಾಡುಸಿದ್ದೇಶ್ವರ...

ವಿಧಾನ ಸಭೆಯಲ್ಲಿ ಎಚ್ ಡಿಕೆ ಬಜೆಟ್ ಮಂಡನೆ: ಸದನಕ್ಕೆ ಗೈರಾಗಿ ಮಠದಲ್ಲಿ ಡಿಕೆಶಿ, ಹೋಮ-ಹವನ ನಡೆಸಿದ್ದು ಏಕೆ?
ಮಠದಲ್ಲಿ ಪತ್ನಿಯೊಂದಿಗೆ ಧಾರ್ಮಿಕ ವಿಧಿ ವಿಧಾನದತ್ತೆ ತೊಡಗಿರುವ ಸಚಿವ ಡಿಕೆ ಶಿವಕುಮಾರ್
Published On :
ತುಮಕೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಿಎಂ ಕುಮಾರ ಸ್ವಾಮಿ ಗುರುವಾರ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದರು. ಈ ವೇಳೆ ಕಾಂಗ್ರೆಸ್ ಪ್ರಭಾವಿ ಸಚಿವ ಡಿ.ಕೆ ಶಿವಕುಮಾರ್ ಗೈರಾಗಿದ್ದರು. ಸದನಕ್ಕೆ ಬಾರದ ಡಿಕೆಶಿ ಪತ್ನಿ ಉಷಾ ಅವರೊಂದಿಗೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಸೋಮೆಕಟ್ಟೆ ಕಾಡಸಿದ್ದೇಶ್ವರ ಮಠದಲ್ಲಿ ಪೂಜಾ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದರು.
ಜುಲೈ 1 ರಂದು ಆರಂಭವಾದ ಈ ಧಾರ್ಮಿಕ ವಿಧಿ ವಿಧಾನದಲ್ಲಿ ಹಲವು ಹೋಮ ಹವನ ನಡೆದಿದ್ದವು, ಅಂತಿಮ ದಿನವಾದ ಗುರುವಾರ ಪೂರ್ಣಾಹುತಿ ನೀಡಬೇಕಿತ್ತು, ಇದಕ್ಕೆ ಡಿಕೆ ಶಿವಕುಮಾರ್ ಕಡ್ಡಾಯವಾಗಿ ಹಾಜರಾಗಬೇಕೆಂದು ಮಠದ ಸ್ವಾಮಿಜೀ ತಿಳಿಸಿದ್ದರು. ಹೀಗಾಗಿ ಅವರು ಭಾಗವಹಿಸಿದ್ದರು ಎಂದು ಮಠದ ದಯಾನಂದ ಸಾಗರ ತಿಳಿಸಿದ್ದಾರೆ.
ಡಿ,ಕೆ ಶಿವಕುಮಾರ್ ಮುಂದೊಮ್ಮೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಸ್ವಾಮೀಜಿಗಳು ಭವಿಷ್ಯ ನುಡಿದಿದ್ದು ಅವರ ಸಲಹೆಯಂತೆ ಪೂಜೆ ನಡೆದಿದೆ. ಶಿವಕುಮಾರ್ ಅವರ ಆಪ್ತ ಜ್ಯೋತಿಷಿ  ನಾಗರಾಜ್ ಶಾಸ್ತ್ರಿ ಸಲಹೆ ಮೇರೆಗೆ ಸಚಿವರು ಪೂಜಾ ಕೈಂಕರ್ಯ ನಡೆಸಿದ್ದಾರೆ.
ಇದೊಂದು ಪೂರ್ವ ನಿರ್ಧರಿತ ಕೆಲಸವಾಗಿತ್ತು. ಇದರ ಬಗ್ಗೆ ನಾನು ಮುಖ್ಯಮಂತ್ರಿ ಅವರಿಗೆ ತಿಳಿಸಿದ್ದೆ, ನಾನು ಬಜೆಟ್ ಮಂಡಿಸುವ ವೇಳೆ ಹಾಜರಿರಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ಶಿವಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಳೆದ 15 ವರ್ಷಗಳಿಂದ ಶಿವಕುಮಾರ್ ಮಠದ ಭಕ್ತಾದಿಯಾಗಿದ್ದಾರೆ. ಹಿಂದೊಮ್ಮೆ ಎಸ್ ಎಂ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು. ಮಠಕ್ಕೆ ಭೇಟಿ ನೀಡಿದ ನಂತರ 2005 ರಲ್ಲಿ ಕೃಷ್ಣ ಮಹಾರಾಷ್ಟ್ರ ರಾಜ್ಯಪಾಲರಾಗಿ ನೇಮಕಗೊಂಡಿದ್ದರು.
ಮಠಕ್ಕೆ ಭೇಟಿ ನೀಡಿದ ನಂತರ ನನ್ನ ರಾಜಕೀಯ ಜೀವನದ ಭವಿಷ್ಯವೇ ಬದಲಾಯಿತು ಎಂದು ಕೃಷ್ಣ ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.