ರಾಜಕೀಯ

ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ತಡೆ ಹಾಕುವ ಅಗತ್ಯವಿದೆ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಗೆಲುವಿನ ಪ್ರವೃತ್ತಿ ಹೊಂದಿರುವ ಬಿಜೆಪಿಯನ್ನು ಹಿಮ್ಮೆಟ್ಟಿಸುವ ಅಗತ್ಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ...

ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ತಡೆ ಹಾಕುವ ಅಗತ್ಯವಿದೆ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
Published On :
ಬೆಂಗಳೂರು; ಗೆಲುವಿನ ಪ್ರವೃತ್ತಿ ಹೊಂದಿರುವ ಬಿಜೆಪಿಯನ್ನು ಹಿಮ್ಮೆಟ್ಟಿಸುವ ಅಗತ್ಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ದಿನೇಶ್ ಗುಂಡೂರಾವ್ ಅವರು ಮನಬಿಚ್ಚಿ ಮಾತನಾಡಿದ್ದಾರೆ. 
ಕಾದಿದ್ದಕ್ಕೆ ಕೆಪಿಸಿಸಿ ಮುಖ್ಯಸ್ಥನಾಗಿ ನೇಮಕಗೊಂಡಿದ್ದು ಸಂತಸ ತಂದಿದೆಯೇ ಅಥವಾ ಸಂಪುಟದಲ್ಲಿರಬೇಕಿತ್ತು ಎನಿಸುತ್ತಿದೆಯೇ? 
ಪಕ್ಷಕ್ಕಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಮುಖ್ಯವಾದದ್ದು. ನಾನು ಸಚಿವನಾಗಿದ್ದರೂ ಕೂಡ ಪಕ್ಷಕ್ಕಾಗಿ ನಾನು ನನ್ನ ಸಚಿವ ಸ್ಥಾನವನ್ನು ತೊರೆಯುತ್ತಿದ್ದೆ. ಸಂಪುಟದಿಂದ ಕೈಬಿಟ್ಟ ಬಳಿಕ ಕಳೆದ ಬಾರಿ ನನ್ನನ್ನು ಕಾರ್ಯಕಾರಿ ಅಧ್ಯಕ್ಷನಾಗಿ ಮಾಡಿದ್ದರು. ಪಕ್ಷದ ಸಿದ್ಧಾಂತಗಳನ್ನು ನಾನು ನಂಬಿದ್ದೇನೆ. ಪಕ್ಷ ಇರುವವರೆಗೂ ಪ್ರಬಲರಾಗಿರುತ್ತೇವೆ.
ಕೆಪಿಸಿಸಿ ಮುಖ್ಯಸ್ಥನಾಗಿ ಬ್ರಾಹ್ಮಣರೊಬ್ಬರನ್ನು ನೇಮಕ ಮಾಡಿರುವುದು ವೋಟ್ ಬ್ಯಾಕ್ ಕುರಿತಂತೆ ಕಾಂಗ್ರೆಸ್ ನಲ್ಲಿ ಬದಲಾವಣೆಗಳೇನಾದರೂ ಆಗಲಿದೆಯೇ? 
ಧರ್ಮ ಹಾಗೂ ಜಾತಿ ಆಧಾರದ ಮೇಲೆ ಕಾಂಗ್ರೆಸ್ ಎಂದಿಗೂ ತಾರತಮ್ಯ ಮಾಡಿಲ್ಲ. ದುರ್ಬಲರು ಹಾಗೂ ಬಡಲವನ್ನು ಮೇಲೆತ್ತಲು ನಾವು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದೇವೆ. ಆದರೆ, ಆ ಕಾರ್ಯಕ್ರಮಗಳು ಜಾತಿಯಾಧಾರ ಮೇಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಜನರು ಅಹಿಂದಾ ಪಕ್ಷ ಬಿರುದು ಕೊಟ್ಟಿರುವುದು ನಿಜಕ್ಕೂ ದುರಾದೃಷ್ಟಕರ. 
ಮೈತ್ರಿ ಸರ್ಕಾರದೊಂದಿಗೆ ಪಕ್ಷವಿದ್ದು, ಈ ಸಮಯ ಸವಾಲೆಂದು ಎನಿಸುತ್ತಿದೆಯೇ? 
ನಮಗೆ ದೊಡ್ಡ ಸವಾಲಾಗಿರುವುದು ಲೋಕಸಭಾ ಚುನಾವಣೆ. ಲೋಕಸಭಾ ಚುನಾವಣೆಗೆ ತಂತ್ರಗಳನ್ನು ರೂಪಿಸುವ ಅಗತ್ಯವಿದೆ. ಮೈತ್ರಿ ಸರ್ಕಾರ ಕೆಲಸಕ್ಕೆ ಬರುತ್ತದೆಯೇ. ಜನರು ಸರ್ಕಾರದ ಕಾರ್ಯವೈಖರಿಯನ್ನು ಮೆಚ್ಚುತ್ತಾರೆಯೇ ಎಂಬುದನ್ನು ನೋಡಬೇಕಿದೆ. 
ನಿಮ್ಮ ನಾಯಕತ್ವದ ಅಡಿಯಲ್ಲಿ ಯಾವುದಾದರೂ ಬದಲಾವಣೆಗಳಾಗಲಿದೆಯೇ? 
ಪ್ರಸ್ತುತ ಅಂತಹ ಯಾವುದೇ ಬದಲಾವಣೆಗಳಿಲ್ಲ. ಈಶ್ವರ್ ಖಂಡ್ರೆಯವರು ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಬದಲಾವಣೆಗಳ ಕುರಿತಂತೆ ಸಿಎಲ್'ಪಿ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಸಿ ವೇಣುಗೋಪಾಲ್ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರೆ ನಾಯಕರೊಂದಿಗೆ ಚರ್ಚೆ ನಡೆಸುವ ಅಗತ್ಯಿದೆ. ಮೈತ್ರಿ ಸರ್ಕಾರವಿರುವ ಕಾರಣ ಪಕ್ಷಕ್ಕಿದು ಸವಾಲಿನ ಸಮಯವಾಗಿದೆ. ಚುನಾವಣೆ ವೇಳೆ ರಾಜ್ಯದ ಕೆಲ ಭಾಗಗಳಲ್ಲಿ ಉತ್ತಮ ಫಲಿತಾಂಶ ಬಾರದೆ ಇದ್ದರಿಂದ ಮೈತ್ರಿ ಸರ್ಕಾರ ರಚಿಸಬೇಕಾಗಿ ಬಂತು. ಒಂದೆಡೆ ಮೈತ್ರಿ ಸರ್ಕಾರ ರಚನೆಯಾಗಿದ್ದರೆ, ಮತ್ತೊಂದೆಡೆ ಅತೃಪ್ತಿ ಸ್ಫೋಟಗೊಂಡಿತ್ತು. ಯುವ ಹಾಗೂ ಹೊಸ ನಾಯಕರಿಗೆ ಮಾರ್ಗದರ್ಶನಗಳನ್ನು ನೀಡಿ ಹಿರಿಯ ನಾಯಕರೊಂದಿಗೆ ಕೆಲಸ ಮಾಡುವಂತೆ ಮಾಡಬೇಕು. 
ಕಾಂಗ್ರೆಸ್ ಎದುರಾದ ಭಾರೀ ಹಿನ್ನಡೆ ಯಾವುದು ಮತ್ತು ಅದನ್ನು ಹೇಗೆ ಎದುರಿಸುತ್ತೀರಿ? 
ನಮ್ಮ ಕಾರ್ಯದರ್ಶಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಬಲಪಡಿಸುವ ಅಗತ್ಯವಿದೆ. ಸಂಘಟನೆಯಾಗಿಯೂ ನಾವು ಬಲಗೊಳ್ಳಬೇಕಿದೆ. ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಕಾರ್ಯಕರ್ತರ ನೈತಿಕ ಸ್ಥೈರ್ಯ ಸ್ವಲ್ಪ ಮಟ್ಟಿಗೆ ಕುಸಿದಿದೆ. ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಬೇಕಿದೆ. 
ಜೆಡಿಎಸ್ ಜೊತೆಗಿನ ಮೈತ್ರಿ ಕಾಂಗ್ರೆಸ್ ಮೂಲವನ್ನು ನಶಿಸುವಂತೆ ಮಾಡುತ್ತದೆಯೇ?
ಈ ಬಗ್ಗೆ ನಾವು ಸ್ಪಷ್ಟ ನಿಲುವನ್ನು ಹೊಂದಿದ್ದೇವೆ. ಪಕ್ಷ ನಾಯಕರು ಈಗಾಗಲೇ ನಿರ್ಧಾರ ಕೈಗೊಂಡಿದ್ದಾರೆ. ನಾವು ಮೈತ್ರಿ ಸರ್ಕಾರವನ್ನು ರಚನೆ ಮಾಡಿದ್ದು. ಜೆಡಿಎಸ್ ಜೊತೆಗಿನ ಮೈತ್ರಿಯೊಂದಿಗೆಯೇ ಚುನಾವಣೆಗಳನ್ನು ಎದುರಿಸುತ್ತೇವೆ. ಈ ಕುರಿತಂತೆ ಕೆಲಸಗಳನ್ನು ಮಾಡಲಾಗುತ್ತದೆ. ಇದರ ಪರಿಣಾಮಗಳ ಕುರಿತಂತೆ ನಾನು ಏನನ್ನೂ ಮಾತನಾಡುವುದಿಲ್ಲ. ಬಿಜೆಪಿ ಸೋಲಿಸುವುದರತ್ತ ನಮ್ಮ ಗಮನವಿದೆ. ಬಿಜೆಪಿ ಗೆಲುವಿನ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಬೇಕು. ಎಲ್ಲಾ ಸ್ಥಳೀಯ ಪಕ್ಷಗಳೂ ಈ ಕುರಿತಂತೆ ಒಗ್ಗಟ್ಟನಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.