ಸರ್ಕಾರ ನೀಡಿದ ವಸತಿ ಬೇಡ, ಮನೆಯಿಂದಲೇ ಕೆಲಸ ಮಾಡುವೆ ಎಂದ ಬಿ.ಎಸ್. ಯಡಿಯೂರಪ್ಪ
ತಮ್ಮ ಪಾಲಿನ ಅದೃಷ್ಟದ ನಿವಾಸ ನೀಡುವ ಬದಲು ರಾಜ್ಯ ಸರ್ಕಾರವು ಬೇರೆ ನಿವಾಸ ನೀಡಿರುವುದಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದು, ಹಂಚಿಕೆ ಮಾಡಿರುವ ಸರ್ಕಾರಿ ವಸತಿಯನ್ನು ತಿರಸ್ಕರಿಸಿದ್ದಾರೆ...

Published On :
ಬೆಂಗಳೂರು: ತಮ್ಮ ಪಾಲಿನ ಅದೃಷ್ಟದ ನಿವಾಸ ನೀಡುವ ಬದಲು ರಾಜ್ಯ ಸರ್ಕಾರವು ಬೇರೆ ನಿವಾಸ ನೀಡಿರುವುದಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದು, ಹಂಚಿಕೆ ಮಾಡಿರುವ ಸರ್ಕಾರಿ ವಸತಿಯನ್ನು ತಿರಸ್ಕರಿಸಿದ್ದಾರೆ,
ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ರೇಸ್ ವ್ಯೂ ಕಾಟೇಜ್ ನಂ.2 ನಿವಾಸದಲ್ಲಿ ತಂಗಿದ್ದರು. ಇದು ಅವರ ಅದೃಷ್ಟದ ಮನೆ ಎಂದೇ ಭಾವಿಸಲಾಗಿತ್ತು. ಹೀಗಾಗಿ ಮತ್ತೊಮ್ಮೆ ಅದೇ ನಿವಾಸ ನೀಡುವಂತೆ ಕೋರಿ ಯಡಿಯೂರಪ್ಪ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಆದರೆ, ಯಡಿಯೂರಪ್ಪ ಮನವಿಯನ್ನು ತಿರಸ್ಕರಿಸಿದ ರಾಜ್ಯ ಸರ್ಕಾರವು ರೇಸ್ ವ್ಯೂ ಕಾಟೇಜ್ ನಂ.4 ನಿವಾಸವನ್ನು ಹಂಚಿಕೆ ಮಾಡಿದೆ.
ಯಡಿಯೂರಪ್ಪ ಅವರು ಬಯಸಿದ್ದ ರೇಸ್ ವ್ಯೂ ಕಾಟೇಜ್ ನಂ.2 ಸಂಖ್ಯೆಯ ನಿವಾಸವನ್ನು ಸಚಿವ ಸಾ.ರಾ.ಮಹೇಳ್ ಅವರಿಗೆ ನೀಡಲಾಗಿದೆ.
ಸರ್ಕಾರದ ಈ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಯಡಿಯೂರಪ್ಪರ ಅವರು, ಸರ್ಕಾರಿ ನಿವಾಸಕ್ಕೆ ತೆರಳದೆ ಸ್ವಂತ ಮನೆಯಲ್ಲಿಯೇ ಇರಲು ನಿರ್ಧರಿಸಿದ್ದಾರೆ.
ನನಗೆ ನೀಡಿರುವ ರೇಸ್ ವ್ಯೂ ಕಾಟೇಜ್ ನಂ.4 ನಿವಾಸವನ್ನು ತಿರಸ್ಕರಿಸಿದ್ದೇನೆ. ಮುಖ್ಯಮಂತ್ರಿಗಳಿಗೆ ಪತ್ರ ಬರೆದು ರೇಸ್ ವ್ಯೂ ಕಾಟೇಜ್ ನಂ.,2 ನಿವಾಸ ನೀಡುವಂತೆ ಮನವಿ ಮಾಡಿದ್ದೆ. ಆದರೆ, ಅವರು ನನ್ನ ಕೋರಿಕೆಯನ್ನು ಮನ್ನಿಸದ ಕಾರಣ ಅವರ ನಿರ್ಧಾರವನ್ನು ತಿರಸ್ಕರಿಸಿದ್ದೇನೆಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


