ರಾಜಕೀಯ

ಸಿದ್ದರಾಮಯ್ಯ ನನಗೆ ಅನ್ಯಾಯ ಮಾಡಿದಾಗ ಕಾಗಿನೆಲೆ ಶ್ರೀಗಳು ಎಲ್ಲಿದ್ದರು: ಎಚ್ ವಿಶ್ವನಾಥ್ ಕಿಡಿ

ಸ್ವಾಮೀಜಿಗಳು ರಾಜಕೀಯ ನಾಯಕರ ಬಗ್ಗೆ ಸರ್ಕಾರಿ ಅಧಿಕಾರಿಗಳ ಬಗ್ಗೆ ಲಾಭಿ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾರಕ' ಎಂದು ಜೆಡಿಎಸ್‌ ಶಾಸಕ ಎಚ್‌.ವಿಶ್ವನಾಥ್‌ ,...

ಸಿದ್ದರಾಮಯ್ಯ ನನಗೆ ಅನ್ಯಾಯ ಮಾಡಿದಾಗ ಕಾಗಿನೆಲೆ ಶ್ರೀಗಳು ಎಲ್ಲಿದ್ದರು: ಎಚ್ ವಿಶ್ವನಾಥ್ ಕಿಡಿ
ಎಚ್.ವಿಶ್ವನಾಥ್
Published On :
ಮೈಸೂರು: ಸ್ವಾಮೀಜಿಗಳು ರಾಜಕೀಯ ನಾಯಕರ ಬಗ್ಗೆ ಸರ್ಕಾರಿ ಅಧಿಕಾರಿಗಳ ಬಗ್ಗೆ ಲಾಭಿ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾರಕ' ಎಂದು ಜೆಡಿಎಸ್‌ ಶಾಸಕ ಎಚ್‌.ವಿಶ್ವನಾಥ್‌ ಅವರು  ಕಾಗಿನೆಲೆ ಶ್ರೀಗಳ ವಿರುದ್ಧ ಕಿಡಿ ಕಾರಿದ್ದಾರೆ. 
ನಾನೂ ಕುರುಬ ಸಮಾಜದವನು. ಕಾಗಿನೆಲೆ ಮಠ ಕಟ್ಟಿದೆ, ಸ್ವಾಮೀಜಿಗಳನ್ನು ಮಾಡಿದೆ. ಆದರೆ, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ನನ್ನನ್ನು ರಾಜಕೀಯವಾಗಿ ತುಳಿದಾಗ ಕಾಗಿನೆಲೆ ಶ್ರೀಗಳು ಎಲ್ಲಿದ್ದರು? ಎಂದು ಮತ್ತೊಮ್ಮೆ ಪ್ರಶ್ನಿಸಿದರು. 
'ತಾವು ಸ್ವಾಮೀಜಿಗಳ ಬೆಂಬಲ ಕೇಳುತ್ತಿಲ್ಲ. ಸ್ವಾಮೀಜಿಗಳ ನಡುವಳಿಕೆಯನ್ನು ಪ್ರಶ್ನಿಸುತ್ತಿದ್ದೇನೆ. ಕಾಗಿನೆಲೆ ಶ್ರೀಗಳು ಒಬ್ಬ ವ್ಯಕ್ತಿಯ ಪರ ವಾದ ಮಾಡಬಾರದು ಹುಣಸೂರಿನಲ್ಲಿ ತಾವು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಯಾವ ಸ್ವಾಮೀಜಿ ತಮ್ಮ ಬೆಂಬಲಕ್ಕೆ ಬಂದರು?,''ಎಂದು ಕೇಳಿದರು. 
ನಂಜಾವಧೂತ ಶ್ರೀಗಳು ಕುಮಾರಸ್ವಾಮಿ ಪರ ಮಾತನಾಡುತ್ತಾರೆ, ಮಾತೆ ಮಹಾದೇವಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಹೇಳುತ್ತಾರೆ. ಕಾಗಿನೆಲೆ ಶ್ರೀಗಳು ಸಿದ್ದರಾಮಯ್ಯ ಪರ ಮಾತನಾಡುತ್ತಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು  ಹೇಳಿದ್ದಾರೆ, 
ಶ್ರೀಗಳು ರಾಜಕೀಯ ಬಿಟ್ಟು, ರೈತರ ಆತ್ಮಹತ್ಯೆ ಸಾಮಾಜಿಕ ಪಿಡುಗುಗಳ ಬಗ್ಗೆ ಮಾತನಾಡಲಿ ಎಂದ ಅವರು, ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬಜೆಟ್‌ ಮಂಡಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸುತ್ತದೆ ಎಂದು ಹೇಳಿದರು.
ಈ ಹಿಂದೆ ಹಲವರು ಮುಖ್ಯಮಂತ್ರಗಳಾಗಿದ್ದಾರೆ, ಆದರೆ ಯಾವೋಬ್ಬ ಮುಖ್ಯಮಂತ್ರಿಯೂಎಲ್ಲಾ  ಯೋಜನೆಗಳ ಕ್ರೆಡಿಟ್ ತೆಗೆದುಕೊಳ್ಳಲು ಪ್ರಯತ್ಮಿಸಿಲ್ಲ, ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದದಲ್ಲಿ ಮೂಗು ತೂರಿಸುತ್ತಿದ್ದಾರೆ, ಅವರ ಪಿತೂರಿಯಿಂದಾಗಿ ನನಗೆ ಮಂತ್ರಿ ಸ್ಥಾನ ತಪ್ಪಿತು ಎಂದು ಆರೋಪಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.