ನಮೋ ಎಂದರೆ ನಮಗೆ ಮೋಸ: ದಿನೇಶ್ ಗುಂಡೂರಾವ್ ವ್ಯಂಗ್ಯ
ನಮೋ ಎಂದರೆ 'ನಮಗೆ ಮೋಸ' ಎಂದರ್ಥ. ಹಾಗೆಯೇ ಯಡಿಯೂರಪ್ಪ ಎಂದರೆ 'ಸೀದಾ ಚೆಕ್ ಯಡಿಯೂರಪ್ಪ' ಎಂಬ ಅಂರ್ಥವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್....

Published On :
ಬೆಂಗಳೂರು: ನಮೋ ಎಂದರೆ 'ನಮಗೆ ಮೋಸ' ಎಂದರ್ಥ. ಹಾಗೆಯೇ ಯಡಿಯೂರಪ್ಪ ಎಂದರೆ 'ಸೀದಾ ಚೆಕ್ ಯಡಿಯೂರಪ್ಪ' ಎಂಬ ಅಂರ್ಥವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುಂಡೂರಾವ್, ಮೋದಿ ಅವರು, ಸೀದಾ ರುಪಯ್ಯ ಸರಕಾರ್ ಎಂದು ಲೇವಡಿ ಬಗ್ಗೆ ಪ್ರತಿಕ್ರಿಯಿಸಿದ ಅವರು ,ಪ್ರಧಾನಿ ಅವರಂತೆ ಪದಪುಂಜ ಜೋಡಿಸಿ ವಿರೋಧಿಗಳನ್ನು ಅಣಕಿಸುವ ಪ್ರಯತ್ನ ಮಾಡಿದರು.
ಚೆಕ್‌ನಲ್ಲಿಯೇ ಲಂಚ ಪಡೆದ ಯಡಿಯೂರಪ್ಪ ಅವರನ್ನು ಸೀದಾ ಚೆಕ್ ಯಡಿಯೂರಪ್ಪ ಎಂದೇ ಕರೆಯಬೇಕು. ಹಾಗೇ ನಮೋ ಎಂದರೆ 'ನಮಗೆ ಮೋಸ' ಎಂದರು. ನೋಟ್ ಬ್ಯಾನ್ ಕ್ರಮ, ನೀರವ್ ಮೋದಿ ಮತ್ತು ಇತರರಿಂದ ಬ್ಯಾಂಕ್ ಲೂಟಿಯಾದ್ದರಿಂದ ದೇಶದ ಜನತೆಗೆ ಮೋಸವಾಗಿದೆ,'' ಎಂದು ಚಾಟಿ ಬೀಸಿದರು.
''ನೀರವ್ ಮೋದಿ ಲೂಟಿ ಬಗ್ಗೆ ಪ್ರಧಾನಿ ಜವಾಬು ಕೊಡಲಿ. ರಾಜ್ಯಕ್ಕೆ ಕೇಂದ್ರದಿಂದ ಬರಬೇಕಿದ್ದ 10 ಸಾವಿರ ಕೋಟಿ ರೂ. ಬಗ್ಗೆಯೂ ಲೆಕ್ಕ ನೀಡಲಿ. ಅದನ್ನು ಬಿಟ್ಟು ರಾಜ್ಯಕ್ಕೆ ಬಂದು ಮೋದಿ ಮತ್ತು ಶಾ ನಮ್ಮ ಸರಕಾರದ ವಿರುದ್ಧ ಸುಳ್ಳು ಹೇಳುವುದನ್ನು ಮುಂದುವರಿಸಿದರೆ ಅವರ ವಿರುದ್ಧ ಇನ್ನಷ್ಟು ಕಟು ಟೀಕಾ ಪ್ರಹಾರ ನಡೆಸಬೇಕಾಗುತ್ತದೆ,'' ಎಂದು ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


